ಶಿವಮೊಗ್ಗ | ಶಸ್ತ್ರ ಚಿಕಿತ್ಸೆ ಮೂಲಕ 12.3 ಕೆ ಜಿ ತೂಕದ ಬೃಹತ್ ಗೆಡ್ಡೆ ಹೊರ ತೆಗೆದ ವೈದ್ಯರು

ಶಿವಮೊಗ್ಗ

ಶಿಕಾರಿಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಿನಾಂಕ 25.11.2025 ರಂದು. ವಿಶಿಷ್ಟ ಆಪರೇಷನ್ ಒಂದು ನಡೆದಿದ್ದು ಶಿಕಾರಿಪುರ ನಗರದ ಸೊಪ್ಪಿನಕೇರಿ ನಿವಾಸಿ 55 ವರ್ಷ ವಯಸ್ಸಿನ ಗಂಗಮ್ಮ ಎಂಬುವರಿಗೆ ಕಳೆದ ಒಂದು ವರ್ಷದಿಂದ ನೋವು ಕಾಣಿಸುತ್ತಿತ್ತು ಇದಕ್ಕೆ ಚಿಕಿತ್ಸೆ ನೀಡುತ್ತಿದ್ದ ಡಾ. ಶ್ರೀನಿವಾಸ್ ರವರು ಗಂಗಮ್ಮನವರಿಗೆ ಆಪರೇಷನ್ ಮಾಡಲಾಗಿ ಅವರ ಹೊಟ್ಟೆಯಲ್ಲಿದ್ದ ಸುಮಾರು 12.30 ಕೆಜಿ ತೂಕದ ಬೃಹತ್ ಗಾತ್ರದ ಗೆಡ್ಡೆ ಇರುವುದು ಗೊತ್ತಾಗಿದೆ, ಇದನ್ನು ಆಪರೇಷನ್ ಮೂಲಕ ಹೊರ ತೆಗೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಗಂಗಮ್ಮ ಆರೋಗ್ಯವಾಗಿದ್ದು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಆಪರೇಷನ್ ನ್ನು ಯಶಸ್ವಿಯಾಗಿ ನಡೆಸಿದ ಡಾಕ್ಟರ್ ಶ್ರೀನಿವಾಸ್, ಡಾಕ್ಟರ್ ಪ್ರಕಾಶ್, ಅರವಳಿಕೆತಜ್ಞ ಡಾಕ್ಟರ್ ಗುರುದತ್, ಸಿಸ್ಟರ್ ಭಾರತಿ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾಕ್ಟರ್ ಶ್ರೀನಿವಾಸ್ ಹಾಗೂ ತಂಡದವರಿಂದ ನಡೆದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಸಂಶೆ ವ್ಯಕ್ತವಾಗಿದೆ.

ಶಿಕಾರಿಪುರದ ಈ ಆಸ್ಪತ್ರೆ ಸಾವಿರಾರು ಜನರಿಗೆ ಅತ್ಯಂತ ಸಹಕಾರಿಯಾಗಿದೆ ಎಂಬುದು ಅತ್ಯಂತ ಸಂತಸದ ಸಂಗತಿಗಯೆ ಸರಿ.

Author