ಶಿವಮೊಗ್ಗ ನಗರಕ್ಕೆ ವಿಮಾನ ಹಾರಾಟ ಸಂಬಂಧ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಂಸದರು ಹೇಳುತ್ತಿದ್ದಾರೆ. ಉಡಾನ್ ಬಗ್ಗೆ ಮಾತನಾಡುವ ಸಂಸದರಿಗೆ ಉಡಾನ್ ಸೌಲಭ್ಯ ಪಡೆಯುತ್ತಿದ್ದ ಸ್ಟಾರ್ ಮತ್ತು ಇಂಡಿಗೋ ಸಂಸ್ಥೆಯವರು ತಮ್ಮ ವಿಮಾನಗಳ ಹಾರಾಟವನ್ನು ಒಂದು ವರ್ಷ ಮುಂಚೆಯೇ ಏಕೆ ನಿಲ್ಲಿಸಿದರು ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದು ಜಿಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಸಿ ಯೋಗೀಶ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜಕೀಯ ಬಣ್ಣ ಬೆರೆಸಬಾರದು ಮತ್ತು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.ಶಿವಮೊಗ್ಗ ವಿಮಾನ ಸಂಚಾರಕ್ಕೆ ಸ೦ಬ೦ಧಿಸಿದ೦ತೆ ಸ೦ಸದ ರಾಘವೇಂದ್ರ ಹೇಳಿಕೆ ನೀಡಿ ರಾಜ್ಯ ಸರ್ಕಾರ ಇದಕ್ಕೆ ಹೊಣೆ ಎಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣವೂ ಸೇರಿದಂತೆ ಅದರ ಹಾರಾಟಕ್ಕೆ ಮತ್ತು ನೈಟ್ ಲ್ಯಾಂಡಿಂಗ್ಗೆ ನೆರವು ನೀಡಿರುವು ದನ್ನು ಮರೆತುಬಿಟ್ಟಿದ್ದಾರೆ. ಈಗ ಉಡಾನ್ ಬಗ್ಗೆ ಉಡಾಫೆ ಮಾತಾಡುತ್ತಿದ್ದಾರೆ ಎಂದರು.
ಉಡಾನ್ ಯೋಜನೆಯನ್ನು ಏಕೆ ಇವರು ವಿಸ್ತರಿಸಲು ಪ್ರಯತ್ನಿಸಿಲ್ಲ. ಒಂದು ನಿಲ್ದಾಣವನ್ನು ಆರಂಭಿಸುವಾಗ ಅದರ ನೈಟ್ ಲ್ಯಾಂಡಿಂಗ್ ಕೆಲಸವೂ ಕೇಂದ್ರ ಸರ್ಕಾರದಿಂದಲೇ ಆಗಬಹುದಿತ್ತಲ್ಲವೇ? ಕಮಲದಂತೆ ವಿಮಾನ ನಿಲ್ದಾಣವನ್ನು ಶೃಂಗಾರ ಮಾಡಿರುವ ಅವರಿಗೆ ಈಗ ಕಮಲವನ್ನು ಅರಳಿಸಲುಆಗುವುದಿಲ್ಲವೇ ಎಂದು ವ್ಯಂಗ್ಯವಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ೧೩ ರೂಟ್ಗಳಿಗೆ ಹಣಕಾಸು ನೆರವು ನೀಡಿದೆ.
ಉಡಾನ್ ಯೋಜನೆಗೆ ಸಂಬಂಧಿಸಿದಂತೆ ಸುಮಾರು ೫.೬೦ಕೋಟಿ ರೂ. ತುಂಬಿಕೊಟ್ಟಿದೆ. ಪ್ರತಿ ದಿನ ೧೫೬ ಸಂಚಾರಕ್ಕೆ ಪ್ರತಿ ಸಂಚಾರಕ್ಕೂ ೫೦೦ ರೂ.ನಂತೆ ಕೊಟ್ಟಿದೆ. ಇದು ಸಂಸದರಿಗೆ ಗೊತ್ತಿಲ್ಲವೇ? ಈಗಾಗಲೇ ನೈಟ್ ಲ್ಯಾಂಡಿಗ್ಗಾಗಿ ೧೨.೫ ಕೋಟಿ ರೂ. ನೀಡಿದೆ. ಶೇ. ೯೯ರಷ್ಟು ಕೆಲಸವೂ ಮುಗಿದಿದೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿರುವುದನ್ನು ಏಕ ಅವರು ಪ್ರಶ್ನೆ ಮಾಡಬೇಕು ಎಂದು ಕೇಳಿದರು.ಇಂಡಿಗೋ ಸಂಸ್ಥೆಯಲ್ಲಿ ಪೈಲಟ್ ಕೊರತೆ ಇದೆ. ಅಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡಲು ಕೂಡ ಕಷ್ಟವಾಗುತ್ತಿದೆ.
ಇದು ಗೊತ್ತಿದ್ದರೂ ಸಂಸದರು ಬಾಯಿಬಿಡದೆ ಈಗ ಉಡಾನ್ ಯೋಜನೆ ಮಾತ್ರ ಮಾತನಾಡುತ್ತಿದ್ದಾರೆ. ಕೇಂದ್ರ ವಿಮಾನಯಾನ ಸಚಿವರೊಂದಿಗೆ ಸಂಸದರು ಸಂಪರ್ಕವನ್ನೇ ಮಾಡಿಲ್ಲ. ಮತ್ತು ಉಡಾನ್ ಯೋಜನೆಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದ ಅನುದಾನವೂ ಇದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ಸಂಸದರು ವಿಮಾನ ಸಂಚಾರ ಪುನರಾರಂಭಕ್ಕೆ ಪ್ರಯತ್ನ ನಡೆಸಲಿ ಎಂದರಲ್ಲದೆ, ರಾಜ್ಯ ಸರ್ಕಾರ ತನ್ನ ನೆರವನ್ನು ನೀಡುತ್ತದೆ.
ಆದರೆ, ಕೇಂದ್ರದಿಂದ ಮುಂದಿನ ಕನಿಷ್ಠ ೫ ವರ್ಷ ಗಳಿ ಗಾದರೂ ಉಡಾನ್ ಯೋಜನೆ ವಿಸ್ತರಣೆ ಗೊಳ್ಳಬೇಕು ಎಂದರು.
