ಶಿವಮೊಗ್ಗ | ಬಿ.ವಿ. ಅನಂತ ಶೆಟ್ಟರು ಇನ್ನಿಲ್ಲ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಮಾನ್ಯ ಸಂಘಚಾಲಕರು ಬಿ ಎ ರಂಗನಾಥ್ ರವರ ತಂದೆಯವರಾದ ಬಿ ವಿ ಅನಂತ ಶೆಟ್ಟರು ತಮ್ಮ 93 ವರ್ಷಗಳ ಜೀವನ ಯಾತ್ರೆಯನ್ನು ಮುಗಿಸಿ ಇಂದು ರಾತ್ರಿ 8 ಗಂಟೆಗೆ ವಿಧಿವಶರಾದರೆಂದು ತಿಳಿಸಲು ದುಃಖವಾಗುತ್ತಿದೆ ಎಂದು ತಿಳಿಸಿದ್ದಾರೆ.

ಅನಂತ ಶೆಟ್ಟರು 75 ವರ್ಷಗಳಿಂದ ಸಂಘದ ಸ್ವಯಂಸೇವಕರು. 1958 ರಲ್ಲಿ ಸಾಧನ ಟ್ರೇಡಿಂಗ್ ಕಂ. ಸಂಸ್ಥಾಪಕರು, ತುಂಬು ಕುಟುಂಬದಲ್ಲಿ ಮಾರ್ಗದರ್ಶಕರಾಗಿದ್ದರು.

ಅವರ ಪುತ್ರರು ಬಿ.ಎ. ರಂಗನಾಥ, ನೇತ್ರತಜ್ಞ ಬಿ.ಎ. ಸುಭಾಷ್ ಮತ್ತು ಪುತ್ರಿಯರು ಶ್ರೀಮತಿ ರಂಗಲಕ್ಷ್ಮಿ, ಶ್ರೀಮತಿ ಕಲ್ಪನಾ ಮತ್ತು ಮಕ್ಕಳು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕೊಡಲೆಂದು ಪ್ರಾರ್ಥನೆ.

ಮೃತರ ಅಂತ್ಯಕ್ರಿಯೆ ನಾಳೆ ಅಂದರೆ ಶನಿವಾರ ಬೆಳಿಗ್ಗೆ 12 ಗಂಟೆಗೆ ಎಂದು ಕುಟುಂಬದ ಸದಸ್ಯರು ತಿಳಿಸಿರುತ್ತಾರೆ.

ಮನೆಯ ವಿಳಾಸ : ಬಿ.ಎ. ರಂಗನಾಥ, 3 ನೇ ತಿರುವು, ಬಸವನಗುಡಿ, ಶಿವಮೊಗ್ಗ

Author