ಶಿಕಾರಿಪುರ, ಸಾಮಾನ್ಯರ ಆರ್ಥಿಕ ಪ್ರಗತಿಯ ಹಿತದೃಷ್ಟಿಯಿಂದ ಜನರ ಬಳಿ ಬಂದು ಜನಸುರಕ್ಷಾ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಖಾತೆದಾರರಿಗೆ ಖಾತೆ ನಿರ್ವಹಣೆ ಸುಗಮವಾಗಿ ವ್ಯವಹಾರ ಮಾಡುವಂತೆ ತಿಳಿಸುವ ಕೆಲಸ ಇದಾಗಿದೆ ಎಂದು ಕೆನರಾ ಬ್ಯಾಂಕ್ ಹಾವೇರಿ ಕ್ಷೇತ್ರೀಯ ಕಚೇರಿಯ ಸಹಾಯಕ ಮಹಾಪ್ರಬಂಧಕರಾದ ಬುಬಲ್ ಬೊರ್ಡೋಲೊಯಿ ತಿಳಿಸಿದರು.
ತಾಲೂಕಿನ ಅರಿಷಿಣಗೆರೆ ಗ್ರಾಮದಲ್ಲಿ ಕ್ಷೇತ್ರಿಯ ಕಚೇರಿ ಹಾವೇರಿ, ಲೀಡ್ ಬ್ಯಾಂಕ್ ಶಿವಮೊಗ್ಗ ಕೆನರಾ ಬ್ಯಾಂಕ್ ಹಿತ್ತಲ , ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಶಿಕಾರಿಪುರ ಗ್ರಾಮ ಪಂಚಾಯತ್ ಅರಿಷಿಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜನಸುರಕ್ಷ ಮತ್ತು ಆರ್ಥಿಕ ಸಾಕ್ಷರತೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಖಾತೆಯಲ್ಲಿ ಈ ಹಿಂದೆ ನೀಡಿದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಕೆವೈಸಿ ಯ ದಾಖಲಾತಿಯಾಗಿದೆ. ಆದರೆ ಅದನ್ನು ನವೀಕರಿಸಿಕೊಂಡರೆ ನಿಮ್ಮ ಎಲ್ಲಾ ವ್ಯವಹಾರಗಳಿಗೆ ಇದು ಒಂದು ಕೀಲಿ ಕೈಯಾಗಿ ಕಾರ್ಯ ನಿರ್ವಹಿಸುತ್ತದೆ. ಸಿಕೆವೈಸಿ ಯಿಂದ ಕೇಂದ್ರ ಕೆವೈಸಿ ದಾಖಲೆಗೆ ರಿಜಿಸ್ಟರ್ಗೆ ಅಪ್ಲೋಡ್ ಮಾಡುತ್ತದೆ. ವಿವಿಧ ಬ್ಯಾಂಕುಗಳು ಹಣಕಾಸು ಸಂಸ್ಥೆಯಲ್ಲಿ ಸುಲಭವಾಗಿ ಖಾತೆ ನಿರ್ವಹಣೆ ಮಾಡಬಹುದು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಹನುಮಂತಪ್ಪ ಮಾತನಾಡಿ, ಬ್ಯಾಂಕ್ ಕ್ಷೇತ್ರದಿಂದ ಹೊರಗೆ ಉಳಿದ ಪ್ರತಯೊಬ್ಬರಿಗೂ ಬ್ಯಾಂಕಿನಲ್ಲಿ ಸರಳ ಸುಲಭ ರೀತಿಯಲ್ಲಿ ಪ್ರಧಾನ ಮಂತ್ರಿ ಜನಧನ ಖಾತಯನ್ನು ತರೆದು ವ್ಯವಹಾರ ಮಾಡಲು ಅವಕಾಶ ನೀಡಲಾಗಿದೆ. ಸೇವಾ ಶುಲ್ಕ ರಹಿತವಾಗಿ ಕಡಿಮೆ ಪ್ರಮಾಣದಲ್ಲಿ ಹಣಕಾಸಿನ ವ್ಯವಹಾರ ಮಾಡಿದರೆ ಎಟಿಎಮ್ ಸಹಿತ ಎಲ್ಲಾ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಗುಡದಯ್ಯ ಉಡುಗಣಿ ಮಾತನಾಡಿ, ಉಳಿತಾಯದ ಹಣ ಅಪತ್ಕಾಲದಲ್ಲಿ ನೆರವಿಗೆ ಬರುತ್ತದೆ. ಇದರೊಂದಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ವಿಮೆ ಮಾಡಿಸಿದರೆ ೪ ಲಕ್ಷ ಪರಿಹಾರ ಪಡೆಯಲು ಅವಕಾಶವಿದೆ. ಪ್ರತಿಯೊಬ್ಬರೂ ಮಾಡಿಸಿ ಪ್ರತಿವರ್ಷ ನವೀಕರಿಸಿ ಇದರಿಂದ ಬಡತನದಲ್ಲಿರುವ ಕುಟುಂಬದ ನಿರ್ವಹಣೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ಹಾವೇರಿ ಕ್ಷೇತ್ರೀಯ ಕಚೇರಿಯ ಪ್ರಬಂಧಕ ಪ್ರಶಾಂತ್ ಕೆ , ಹಿತ್ತಲ ಕೆನರಾ ಬ್ಯಾಂಕ್ ಶಾಖೆಯ ಮುಖ್ಯಪ್ರಬಂಧಕ ಸಿದ್ದರಾಮಪ್ಪ , ಸಾಲೂರು ಕೆನರಾ ಬ್ಯಾಂಕ್ ಶಾಖೆಯ ಮುಖ್ಯಪ್ರಬಂಧಕ ಹರೀಶ್ ಮರಿಗೌಡರ್, ಈಸೂರು ಕೆನರಾ ಬ್ಯಾಂಕ್ ಶಾಖೆಯ ಮುಖ್ಯಪ್ರಬಂಧಕ ಬಸವರಾಜ್, ಹೊಳಲೂರು ಆರ್ಸೆಟಿ ನಿರ್ದೇಸಕ ಸಂತೋಷ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿ ಹೊನ್ನಪ್ಪ ಉಪಸ್ಥಿತರಿದ್ದರು.
