ಶಿವಮೊಗ್ಗ | ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ ಹಾಗೂ ಪವರ್ ಲಿಫ್ಟಿಂಗ್ ಮತ್ತು ಕಾರ್ಡಿಯೋಸ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ

ಶಿವಮೊಗ್ಗ ನಗರದ ಪ್ರತಿಷ್ಠಿತ ಕಿರಣ್ಸ್ ಮೈ ಜಿಮ್ನಲ್ಲಿ ಆಯುಧ ಪೂಜೆಯ ಶುಭ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಹಾಗೂ ಕಾರ್ಡಿಯೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಕಾರಿಯಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಮಾಲೀಕ ಕಿರಣ್ ಸಾಗರ್ ಪ್ರಸ್ತಾವಿಕ ಭಾಷಣ:

ಪ್ರಸ್ತಾವಿಕವಾಗಿ ಮಾತನಾಡಿದ ಜಿಮ್ ಮಾಲೀಕ ಕಿರಣ್ ಸಾಗರ್, “ಜಿಮ್ ಎಂದರೆ ಕೇವಲ ದೇಹವನ್ನು ಬಲಿಷ್ಠಗೊಳಿಸುವ ಸ್ಥಳವಲ್ಲ, ಅದು ಶಿಸ್ತು, ಆತ್ಮವಿಶ್ವಾಸ, ತಾಳ್ಮೆ ಮತ್ತು ಗುರಿ ಸಾಧಿಸುವ ಮನೋಬಲವನ್ನು ಬೆಳೆಸುವ ಸ್ಥಳ” ಎಂದರು.

ASP ಕಾರಿಯಪ್ಪ ಮಾತನಾಡಿ ನಂತರ ಮಾತನಾಡಿದ ಹೆಚ್ಚುವರಿ ಎಸ್ಪಿ ಕಾರಿಯಪ್ಪ, “ಕಾರ್ಯ ಒತ್ತಡಗಳ ನಡುವೆಯೂ ದಿನಕ್ಕೆ ಒಂದು ಗಂಟೆಯಾದರೂ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯವಶ್ಯಕ. ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಮಾಲೀಕ ಕಿರಣ್ ಸಾಗರ್, ಲಕ್ಷ್ಮಿ ಮತ್ತು ತರಬೇತುದಾರರಾದ ಚೇತನ್, ಗಂಗಾಧರ್, ಕಾರ್ತಿಕ್, ಕಾರ್ತಿಕ್ ಎಸ್.ನಾಯಕ್ ಅವರಿಗೆ ಶುಭಾಶಯಗಳು” ಎಂದು ಹೇಳಿದರು.

ವಿಜೇತರ ಸಂಪೂರ್ಣ ಪಟ್ಟಿ:

1. ಹಿರಿಯ ಪುರುಷರ ವಿಭಾಗ (ಪವರ್ ಲಿಫ್ಟಿಂಗ್):- ಪ್ರಥಮ: ತನೂಜ್ – 260 ಕೆ.ಜಿ.- ದ್ವಿತೀಯ: ಮಹೇಶ್ – 250 ಕೆ.ಜಿ.- ತೃತೀಯ: ನಾಮದೇವ್ – 245 ಕೆ.ಜಿ.

2. ಕಿರಿಯ ಪುರುಷರ ವಿಭಾಗ (ಪವರ್ ಲಿಫ್ಟಿಂಗ್):- ಪ್ರಥಮ: ಅಂಕಿತ್- ದ್ವಿತೀಯ: ಅಮೋಘ- ತೃತೀಯ: ಮಂಜುನಾಥ್

. ಹಿರಿಯ ಮಹಿಳೆಯರ ವಿಭಾಗ (ಕಾರ್ಡಿಯೋ):*- ಪ್ರಥಮ: ಅರ್ಚನಾ- ದ್ವಿತೀಯ: ರೇಖಾ- ತೃತೀಯ: ಶಿಲ್ಪಾ

4. ಕಿರಿಯ ಮಹಿಳಾ ವಿಭಾಗ (ಕಾರ್ಡಿಯೋ):*- ಪ್ರಥಮ: ಲಾವಣ್ಯ- ದ್ವಿತೀಯ: ಮುಸ್ಕಾನ್- ತೃತೀಯ: ಅರ್ಚನಾವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

Author