ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನಗರಸಭೆ. ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ ಮತ್ತು ನಗರದ ಆಡಳಿತ ಎಂಬ ಆರೋಪ ಕೇಳಿಬಂದಿದೆ.
ಈ ವಿಷಯವನ್ನು ಮಾಧ್ಯಮದಲ್ಲಿ ಪ್ರಸ್ತುತಪಡಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದು . ಇಲ್ಲಿನ ಸುತ್ತಮುತ್ತ ಗ್ರಾಮಗಳ ಜನರ ಆರೋಗ್ಯ ಹಿತ ದೃಷ್ಟಿಯಿಂದ ಕಳಕಳಿಯ ಮನವಿ ಮಾಡುತ್ತಿದ್ದೇವೆ ದಯಮಾಡಿ ಪರಿಹಾರ ಕೊಡಿಸಿ ಎಂದು ತಿಳಿಸಿದ್ದಾರೆ.

ಭದ್ರಾವತಿ ನಗರಸಭೆ ಅಧಿಕಾರಿಗಳಾಗಲಿ ಅಥವಾ ಆರೋಗ್ಯ ಅಧಿಕಾರಿಗಳಾಗಲಿ, ಸರಿಯಾದ ಸ್ಪಂದನೆ ನೀಡುತ್ತಿಲ್ಲ ಈ ಸಂಬಂಧ ಎಂದು ತಿಳಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಭದ್ರಾವತಿ ತಾಲೂಕು ಆಡಳಿತ ಜನರಿಗೆ ಕಲುಷಿತ ನೀರು ಸರಬರಾಜು ಆಗುತ್ತಾ ಇರುವುದರ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಉಡಾಫೆ ಉತ್ತರ ನೀಡುವುದು ಬಿಟ್ಟು ಜನಸಾಮಾನ್ಯರು ಅರೋಗ್ಯ ವಿಚಾರದಲ್ಲಿ ಚಲ್ಲಾಟ ಆಡಬಾರದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸುದ್ದಿ ಸಂಬಂಧ ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಲಿದೀಯ ಅಥವಾ ಯಾವದಾದ್ರು ಜೀವ ಹಾನಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರ? ಎಂಬ ಪ್ರಶ್ನೆ ಊರಿನ ಗ್ರಾಮಸ್ಥರದ್ದಾಗಿದೆ..!
