ಶಿವಮೊಗ್ಗ | ಸರ್ಕಾರಿ ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ, ಜೀವ ಬೆದರಿಕೆ, ಅತ್ಯಾಚಾರ ಆರೋಪ : ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಕ್ರೈಂ

ಶಿವಮೊಗ್ಗ,ಸರ್ಕಾರಿ ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ, ಜೀವ ಬೆದರಿಕೆ, ಅತ್ಯಾಚಾರ ಆರೋಪ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು,ಮಾರ್ನಮಿ ಬೈಲ್ ನಿವಾಸಿ ವೆಂಕಟೇಶ್ @ ಯೋಗ ವೆಂಕಟೇಶ್ ಎಂಬ ವ್ಯಕ್ತಿಯಿಂದ ಸರ್ಕಾರಿ ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಅತ್ಯಾಚಾರ, ಜೀವ ಬೆದರಿಕೆ, ಹಲವಾರು ಆರೋಪ ಕೇಳಿಬಂದಿದೆ.

ಹಾಗೂ ಅಂದಾಜು 10 ಲಕ್ಷ ಮೌಲ್ಯದ ಬೆಲೆ ಬಾಳುವ ಒಡವೆ ಚಿನ್ನಭಾರಣ ಕಳ್ಳತನ ಮಾಡಿರುವ ಬಗ್ಗೆ ಸಂತ್ರಸ್ತೆ ದೂರಿದ್ದಾರೆ.3 ವರ್ಷದಿಂದ ಮದುವೆ ಆಗುವುದಾಗಿ ನಂಬಿಸಿ ದ್ರೋಹ ಮಾಡಿರುವ ಆರೋಪ ಸಂತ್ರಸ್ತೆ ಮಾಡಿರುತ್ತಾರೆ. ಹಾಗೂ ತನ್ನ ಖಾಸಗಿತನಕ್ಕೆ ಧಕ್ಕೆ ಉಂಟಾಗುವಂತೆ ಪದೇ ಪದೇ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಸಿದ್ದಾರೆ.

ಇನ್ನು ಈ ಸಂಬಂಧ ಸಂತ್ರಸ್ತೆಯ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ U/S 157 Cr.PC/176 BNSS ರೀತ್ಯಾ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ವೆಂಕಟೇಶ್ ಮೇಲೆ ಹಲವಾರು ಮಹಿಳೆಯರು, ಸರ್ಕಾರಿ ಅಧಿಕಾರಿಗಳು ದೌರ್ಜನ್ಯಕ್ಕೆ ಒಳಗಾಗಿರುವ ಕುರಿತು ಆರೋಪಗಳು ಕೇಳಿ ಬರುತ್ತಿದೆ.

ಈ ಪ್ರಕರಣ ಸಂಬಂಧ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ. ಸಂತ್ರಸ್ತೇ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ..!

Author