ಶಿವಮೊಗ್ಗ | ಭಾರತ ಜೋಡೋ ಯುವ ಸಂಘ ರಾಜ್ಯಮಟ್ಟದ ಸಂಘಟನೆ ಜವಾಬ್ದಾರಿಗೆ ಮಧುಸೂದನ್ ಸೇರಿ ಮತ್ತಿಬ್ಬರು ನೇಮಕ

ರಾಜಕೀಯ

ಶಿವಮೊಗ್ಗ,ರಾಜ್ಯಾದ್ಯಂತ ಭಾರತ ಜೋಡೋ ಯುವ ಸಂಘ ರಚಿಸುವುದು, ಸಂಘಟನೆಗೆ ಯುವಕರನ್ನು ನೋಂದಾಯಿಸುವುದು ಹಾಗೂ ಸಂಬಂಧಿಸಿದ ಜಿಲ್ಲೆಗಳಿಗೆ ಭೇಟಿ ನೀಡುವ ಜವಾಬ್ದಾರಿಯನ್ನು ಈ ಮೂವರಿಗೆ ವಹಿಸಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದು, ಯುವಕರನ್ನು ಒಗ್ಗೂಡಿಸುವುದು ಮತ್ತು ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನಿರ್ದೇಶನದಂತೆ ಮತ್ತು ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಅವರ ಅನುಮೋದನೆಯೊಂದಿಗೆ ಈ ನೇಮಕಾತಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ 25/08/2026ರಂದು ಹೊರಡಿಸಿರುವ ಆದೇಶದಲ್ಲಿ ನಾಗೇಶ್ ಕರಿಯಪ್ಪ, ಸಿ.ಜಿ. ಮಧುಸೂದನ್ ಮತ್ತು ಸಿದ್ದು ಹಾಲೇಗೌಡ ಅವರನ್ನು ರಾಜ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.

Author