ಶಿವಮೊಗ್ಗ | ಯುವ ಕಾಂಗ್ರೆಸ್ ಪ್ರತಿಭಟನೆ ; ಸಂಸದರ ಮನೆ ಮುತ್ತಿಗೆಗೆ ಯತ್ನ..!

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮೆರಿಟ್ ಆಧಾರದ ಮೇಲೆ ಜಾರಿಗೆ ತಂದ ನೀಟ್ ವ್ಯವಸ್ಥೆಯು ಇಂದು ಕೋಚಿಂಗ್ ಮಾಫಿಯಾ ಹಾಗೂ ಅಕ್ರಮಗಳ ಕೂಪವಾಗಿ ಬದಲಾಗಿದೆ ಎಂದು ನಾಯಕರು ಆರೋಪಿಸಿದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪೋಷಕರ […]

Continue Reading

ಶಿವಮೊಗ್ಗ | ಯುವ ಕಾಂಗ್ರೆಸ್ ನಿಂದ, ಪ್ರಧಾನಿಯ ಬಗ್ಗೆ ಕೀಳು ಮಟ್ಟದ ಪ್ರತಿಭಟನೆ ; ಬಿಜೆಪಿ ಯುವ ಮೋರ್ಚಾದಿಂದ ದೂರು

ಜೊತೆಗೆ ಎಸ್‌ಪಿ ಅವರ ಮುಖಾಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಗತ್ಯವಾದ ಸೂಚನೆ ನೀಡುವಂತೆ ವಿನಂತಿಸಲಾಯಿತು. ಇದೇ ವೇಳೆ ದೊಡ್ಡಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೂ ಮನವಿ ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಅವರ ನೇತೃತ್ವದಲ್ಲಿ ಯುವ ಮೋರ್ಚಾ ತಂಡದಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವ ಮೋರ್ಚಾ ಜಿಲ್ಲಾ ಸಹ ಪ್ರಭಾರಿಗಳಾದ ಸಂತೋಷ್ ಹೊಳಲೂರು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ […]

Continue Reading

ಶಿವಮೊಗ್ಗ | ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ನಾಗರಿಕ ಸಮಾಜಕ್ಕೆ ಮರ್ಯಾದೆಗೇಡು ಹತ್ಯೆ ಮಾರಕವಾಗಿದೆ‌. ತನ್ನದೇ ಸ್ವಂತ ಮಗಳನ್ನು ತಂದೆಯೊಬ್ಬ ಮೃಗೀಯವಾಗಿ ಕೊಂದಿದ್ದಾರೆ. ಇಂತಹ ಹೇಯ ಕೃತ್ಯವನ್ನ ಜಾತಿವಾದಿ ಸಮಾಜ ಸಮರ್ಥಿಸುತ್ತಿದೆ. ಜನಪ್ರತಿನಿಧಿಗಳು ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ. ಜಾತಿ ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ಹಾಗೂ ಜಾತೀಯತೆಯನ್ನು ತೊಡೆದು ಹಾಕಲು ಸರ್ಕಾರಗಳು ಬದ್ದತೆಯಿಂದ ಕೆಲಸ ಮಾಡಬೇಕು. ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹಗಳು ಮುಖ್ಯ. ಕುಟುಂಬಗಳನ್ನು ಎದುರು ಹಾಕಿಕೊಂಡು ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು. ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದರು. “ಮರ್ಯಾದೆಯ […]

Continue Reading

ಶಿವಮೊಗ್ಗ | ರೈಲು ಪ್ರಯಾಣ ದರ ಏರಿಕೆ ಖಂಡಿಸಿ,ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್

ರೈಲು ಸಂಚಾರವು ಈ ದೇಶದ ಜನರ ಜೀವನಾಡಿಯಾಗಿದೆ. ಪ್ರತಿದಿನ ಕೋಟ್ಯಂತರ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ರೈಲು ವ್ಯವಸ್ಥೆ ಭಾರತದ್ದಾಗಿದ್ದು, ರೈಲು ಸಂಚಾರದಿಂದ ಸರ್ಕಾರಕ್ಕೆ ನಷ್ಟವೇನೂ ಆಗುತ್ತಿಲ್ಲ. ಆದರೆ, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ರೈಲು ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಮೂಲಕ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಒಂದು ವರ್ಷದಲ್ಲಿ ಇದು ಎರಡನೇ ಬಾರಿ ರೈಲು ಪ್ರಯಾಣದರ […]

Continue Reading

ಶಿವಮೊಗ್ಗ | ಪೊಲೀಸ್ ಅಧಿಕಾರಿಯಿಂದ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಖಂಡಿಸಿ, ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ದೂರು

ಇಸ್ಪೀಟು ಅಡ್ಡೆಗಳಿಂದ ಹಲವು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ತಂದೆ-ತಾಯಿ, ಹೆಂಡತಿ-ಮಕ್ಕಳು ಕಣ್ಣೀರಿಡುತ್ತಾ ಸರ್ಕಾರ ಮತ್ತು ಪೋಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದು, ಕೆಲವು ಯುವಕರು ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿ, ನಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಇಂತಹ ಹಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೋಲೀಸ್ ಇಲಾಖೆಯ ಕೆಲವೇ ಅಧಿಕಾರಿಗಳು, ತುತ್ತು ಅನ್ನಕ್ಕಾಗಿ ಕೆಲಸ ಮಾಡುವ ಹೋಟೆಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಮಾನ್ಯ ಜಿಲ್ಲಾ […]

Continue Reading