ಶಿವಮೊಗ್ಗದ ಮ್ಯಾಮ್ಕೋಸ್‌ಗೆ ಸೇರಿದ ಅಡಿಕೆಯನ್ನು ತುಂಬಿಕೊಂಡು ತೆರಳಿದ್ದ್ದಲಾರಿ ಮಾ. 28ರಂದು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾರಿ ಚಾಲಕ ಮತ್ತು ಮಾಲೀಕನಾದ ಸದ್ದಾಮ್, ಮೊಹಮದ್ ಗೌಸ್, ನೌಶದ್ ಮೂರು ಜನರು ಸೇರಿಕೊಂಡು ಅಡಿಕೆಯನ್ನು ಲಪಟಾಸಿಕೊಂಡು ಮೋಸ ಮತ್ತು ನಂಬಿಕೆ ದ್ರೋಹ ಮಾಡಿ ಲಾರಿಯಲ್ಲಿದ್ದ ಅಡಿಕೆಯನ್ನು ತೆಗೆದುಕೊಂಡು ಹೋಗಿದ್ದು, ಇವರ ವಿರುದ್ಧ್ದ ಕ್ರಮ ಜರುಗಿಸಬೇಕು ಮತ್ತು 350 ಚೀಲ ಅಡಿಕೆಯನ್ನು ಪತ್ತೆ ಮಾಡಿಕೊಡಬೇಕೆಂದು ಭಾರತ್ ಟ್ರಾನ್ಸ್ ಪೋರ್ಟನ ಮ್ಯಾನೇಜರ್ ದೂರು ನೀಡಿದ್ದರು.
ದೂರಿನ ಮೇರೆಗೆ ಹೊಳೆಹೊನ್ನುರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಕೋಡಿಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಲಾರಿ ಹಾಗೂ ಅದರಲ್ಲಿದ್ದಂತಹ ಒಟ್ಟು ೧.೯ ಕೋಟಿ ೩೬ ಲಕ್ಷದೆ ೮೦೦ ರೂ ಬೆಲೆಬಾಳುವ ರಾಶಿ ಅಡಿಕೆ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಲಾರಿಯ ಅಂದಾಜು ಬೆಲೆ ೨೦ಲಕ್ಷ ಒಟ್ಟಾರೆಯಾಗಿ ೧,೨೯,೩೬,೮೦೦ ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಗೆ ೩೫೦ ಚೀಲ ಅಡಿಕೆಯನ್ನು ಲೋಡ್ ಮಾಡಿ ಬೆಂಗಳೂರು ಯಶವಂತಪುರಕ್ಕೆ ತೆಗೆದುಕೊಂಡು ಹೋಗಲು ಲಾರಿ ಚಾಲಕ,ಮಾಲೀಕನಾದ ಮುಹಿಬುಲ್ಲಾ ಖಾನ್ ಅಲಿಯಾಸ್ ಸದ್ದಾಮ್‌ಗೆ ತಿಳಿಸಲಾಗಿತ್ತು.
ಮುಹಿಬುಲ್ಲಾ ಮಾ. ೨೬ ರಂದು ರಾತ್ರಿ ೧೧ ಗಂಟೆಗೆ ಅಡಿಕೆ ತುಂಬಿದ ಲಾರಿಯನ್ನು ಬೆಂಗಳೂರು ಕಡೆಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದನು. ನಂತರ ಈ ಲಾರಿ ಯಶವಂತಪುರಕ್ಕೆ ಹೋಗಿರಲಿಲ್ಲ.
ಹುಡುಕಾಡಿದಾಗ ಚಾಲಕ ಮುಹಿಬುಲ್ಲಾ ಮಾರನೆಯ ದಿನ ಶಿವಮೊಗ್ಗದಲ್ಲಿ ಸಿಕ್ಕಿದ್ದು ವಿಚಾರಿಸಲಾಗಿ ಶಿವಮೊಗ್ಗ ವಾಸಿ ಮೊಹಮದ್ ಗೌಸ್ ಮತ್ತು ನೌಶದ್ ತನ್ನ ಜೊತೆ ಲಾರಿಯಲ್ಲಿ ಬಂದು ಹೊಳೆಹೊನ್ನೂರು ಕೈಮರ ಬಳಿ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ ೧೨.೨೦ ಗಂಟೆ ವೇಳೆ ಲಾರಿಯಲ್ಲಿದ್ದ ಅಡಿಕೆಯನ್ನು ಮೂವರೂ ಸೇರಿ ಮಾರಾಟ ಮಾಡೋಣ. ಇದರಿಂದ ಬಂದ ಹಣವನ್ನು ಹಂಚಿಕೊಳ್ಳೋಣ ಎಂದು ಹೇಳಿದರು.
ಕೈಮರದಿಂದ ಹೊರಟ ಬಳಿಕ ಹಿರಿಯೂರು ಬಳಿ ಮೊಹಮದ್ ಗೌಸ್ ಮತ್ತು ನೌಶದ್ ನೀನು ವಾಪಸ್ ಹೋಗು. ನಾವು ಅಡಿಕೆಯನ್ನು ಮಾರಾಟ ಮಾಡಿಕೊಂಡು ಬರುತ್ತೇವೆ. ಬಂದ ಹಣವನ್ನು ಹಂಚಿಕೊಳ್ಳೋಣ ಎಂದು ಹೇಳಿದರೆಂದು ತಿಳಿಸಿದ್ದನು.ಈ ಹಿನ್ನೆಲೆಯಲ್ಲಿ ಟ್ರಾನ್ಸಪೋರ್ಟ್ ಮ್ಯಾನೇಜರ್ ಕೃಷ್ಣ ಪೂಜಾರಿ ದೂರು ಸಲ್ಲಿಸಿದ್ದರು.
ಎಸ್ ಪಿ ನಿಖಿಲ್ ಹೆಚ್ಚುವರಿ ಎಸ್ ಪಿ ಕಾರ್ಯಪ್ಪ ಎ.ಜಿ, ಭದ್ರಾವತಿ ಡಿಎಸ್‌ಪಿ ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಸಿಪಿಐ ಶಿವಪ್ರಸಾದ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತಂಡವು ಏ.೩೦ ರಂದು ಲಾರಿ ಮತ್ತು ಮಾಲನ್ನು ವಶಪಡಿಸಿಕೊಂಡಿದೆ. ಆರೋಪಿತರ ಹುಡುಕಾಟ ನಡೆದಿದೆ.

