ಶಿವಮೊಗ್ಗ | ಕುವೆಂಪು ವಿವಿಯಲ್ಲಿ ನಾಳೆಯಿಂದ ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಮೊದಲ ದಿನ ಮೇ 15ರ ಗುರುವಾರದಂದು ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯದ ಬಿಕ್ಕಟ್ಟಿನ ಬಗ್ಗೆ ಪ್ರೊ. ಟಿ.ಎನ್. ಪ್ರಕಾಶ್ ಕಮ್ಮರ್ಡಿ, ಕರ್ನಾಟಕದ ವನ್ಯಜೀವಿ ಸಂಘರ್ಷದ ಬಗ್ಗೆ ಡಾ. ಹೊನ್ನವಳ್ಳಿ.ಎನ್. ಕುಮಾರ್, ಚಿರತೆಗಳೊಂದಿಗಿನ ಸಹಬಾಳ್ವೆ ಕುರಿತು ಡಾ. ಸಂಜಯ್ ಗುಬ್ಬಿ, ಹುಲಿ-ಮಾನವ ಸಂಘರ್ಷದ ಬಗ್ಗೆ ಐಜಿಪಿ ಡಾ. ಪಿ.ಎಸ್. ಹರ್ಷ ಮತ್ತು ಆನೆಗಳ ಸಂಘರ್ಷದ ಕುರಿತು ಡಾ. ತಮ್ಮಯ್ಯ ಸಿ.ಕೆ. ಮತ್ತು ಮಾನವ ಹಸ್ತಕ್ಷೇಪವು ವನ್ಯಜೀವಿಗಳ ನಿರ್ಧಾರಗಳ ಮೇಲೆ ಪ್ರಭಾವದ ಬಗ್ಗೆ ಡಾ. ಹರೀಶ್ ಪ್ರಕಾಶ್ ಹಾಗೂ ಅವರು ವಿಷಯ […]

Continue Reading

ಶಿವಮೊಗ್ಗ | ಯುವ ಕಾಂಗ್ರೆಸ್ ಪ್ರತಿಭಟನೆ ; ಸಂಸದರ ಮನೆ ಮುತ್ತಿಗೆಗೆ ಯತ್ನ..!

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮೆರಿಟ್ ಆಧಾರದ ಮೇಲೆ ಜಾರಿಗೆ ತಂದ ನೀಟ್ ವ್ಯವಸ್ಥೆಯು ಇಂದು ಕೋಚಿಂಗ್ ಮಾಫಿಯಾ ಹಾಗೂ ಅಕ್ರಮಗಳ ಕೂಪವಾಗಿ ಬದಲಾಗಿದೆ ಎಂದು ನಾಯಕರು ಆರೋಪಿಸಿದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪೋಷಕರ […]

Continue Reading

ಕುಂದಾಪುರದಲ್ಲಿ ಓದುತ್ತಿರುವ ಶಿವಮೊಗ್ಗದ ವಿದ್ಯಾರ್ಥಿನಿಯಿಂದ Hydrovid ಗಾಂಜಾ ವಶ

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತೆ ಚೆನ್ನೈನಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣಗಳಿಸುವ ಉದ್ದೇಶ ಹೊಂದಿದ್ದಳು ಎಂಬುದು ತಿಳಿದುಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 32/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಆರೋಪಿತೆಯ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ

Continue Reading

ಶಿವಮೊಗ್ಗ | ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ರಾಷ್ಟ್ರಭಕ್ತಿಯ ಮಿತವ್ಯಯದ ಪಾಠ ಅರ್ಥವಾಗದು : ಶಾಸಕ ಎಸ್. ಎನ್. ಚನ್ನಬಸಪ್ಪ

2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ […]

Continue Reading

ಶಿವಮೊಗ್ಗ | ಜಪಾನ್ ಏಷ್ಯನ್ ಗೇಮ್ಸ್‌ಗೆ ಅವಳಿ ಪ್ರತಿಭೆಗಳಾದ ಪವನ್–ಪುನೀತ್ ಭಾರತ ತಂಡಕ್ಕೆ ಸೆಲೆಕ್ಷನ್

ರಾಷ್ಟ್ರೀಯ ಡಬಲ್ಸ್ ರ‍್ಯಾಂಕಿಂಗ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವಾಡಿದ ಈ ಜೋಡಿ, ಅಂತಿಮ ಹಣಾಹಣಿಯಲ್ಲಿ ಅಸ್ಸಾಂನ ಅನಯನ್ ಬೋರ್ ಮತ್ತು ಕೇರಳದ ಬಿಜಾರ್ನ್ ಜೈಸನ್ ವಿರುದ್ಧ 21-19, 21-10 ಅಂತರದ ಭರ್ಜರಿ ಜಯ ಸಾಧಿಸಿ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಜೊತೆಗೆ ಬಂಗಾರದ ಪದಕ, ಆಕರ್ಷಕ ಪಾರಿತೋಷಕ ಹಾಗೂ ₹82 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವುದು ಮತ್ತೊಂದು ವಿಶೇಷ. ಇದೇ […]

Continue Reading

ಶಿವಮೊಗ್ಗ | ಕೆರೆಗಳ ಒತ್ತುವರಿ ತೆರವು ಹಾಗೂ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ಆಗ್ರಹ

ಶಿವಮೊಗ್ಗ ನಗರದ ಊರುಗಡೂರು, ಮಂಡ್ಲಿ, ಹರಕೆರೆ, ಸೋಮಿನಕೊಪ್ಪ, ಪುರದಾಳು, ಅನಾಪಿನಕಟ್ಟೆ ಮತ್ತು ಅಲ್ಕೋಳ ಭಾಗದ ಕೆರೆಗಳು ವ್ಯಾಪಕವಾಗಿ ಒತ್ತುವರಿಯಾಗಿದ್ದು, ತಕ್ಷಣವೇ ಇವುಗಳನ್ನು ತೆರವುಗೊಳಿಸಿ ಹೂಳೆತ್ತಬೇಕು. ಜಲಮೂಲಗಳ ಭರ್ತಿ: ಜಿಲ್ಲೆಯ ಪ್ರಮುಖ ಕೆರೆಗಳಿಗೆ ಕಾಲುವೆ ಅಥವಾ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸಿ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ‘ಜಲ ಕುಂಭ’ ಯೋಜನೆ: ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ತೊಟ್ಟಿಗಳನ್ನು ಅಳವಡಿಸಬೇಕು. ತುರ್ತು ಆಹಾರ ಕೇಂದ್ರ: ಗಾಂಧಿ ಪಾರ್ಕ್, ಕೋಟಿ ಪರಿಸರ ಹಾಗೂ ಗಾಜನೂರು […]

Continue Reading

ಶಿವಮೊಗ್ಗ | ಮೇ 16 ರಂದು ಉದ್ಯೋಗ ನೇರ ಸಂದರ್ಶನ

ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು ಸಂದರ್ಶನವು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ‌ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ9380663606, 9108235132 ನ್ನು‌ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Continue Reading