ಶಿವಮೊಗ್ಗ | ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ಘರ್ ವಾಪಸಿಯಾದರೆ ಬಿಜೆಪಿಗೆ ನಷ್ಟ..!?

ಈ ಎಲ್ಲಾದರ ನಡುವೆ ಮಾನ್ಯ ಕೆ. ಎಸ್. ಈಶ್ವರಪ್ಪ ನವರು ತಾವೊಬ್ಬ ಕುರುಬ ಸಮುದಾಯದ ನಾಯಕರು ಆಗಲಿ ಅಥವಾ ಹಿಂದುಳಿದ ವರ್ಗದ ಅಥವಾ ಅಹಿಂದ ನಾಯಕರಾಗಿ ತಮ್ಮ ಐಡೆಂಟಿಟಿ ಪಡೆಯಲು ವಿಫಲರಾಗಿದ್ದಾರೆ ಎಂಬುದು ರಾಜಕೀಯವಲಯದ ಮಾತಾಗಿದೆ. ಇನ್ನು ಜನಾಕರ್ಷಣೆ ಪಡೆದಿದ್ದಾರಾ ಈಶ್ವರಪ್ಪ ಅಂದರೆ ಅದು ದೂರದ ಮಾತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕೂಡ ಕಳೆದುಕೊಂಡರು ಈ ಒಂದು ಪರಿಸ್ಥಿತಿ ಈಶ್ವರಪ್ಪ ಅವರದ್ದಾಗಿದೆ. ಇನ್ನು ರಾಷ್ಟ್ರಭಕ್ತರ ಬಳಗ ಕಟ್ಟಿಕೊಂಡು ದಿನ ನಿತ್ಯ ಪ್ರಚಾರ ಮಾಡಿಕೊಂಡು ಹೊಸದಾಗಿ ಜನ […]

Continue Reading

ಶಿವಮೊಗ್ಗ | ಕೇಂದ್ರ ಕಾರಾಗೃಹ​ದಲ್ಲಿ ಸ್ಟೀಲ್​ ಲೋಟದಿಂದ ಹಲ್ಲೆ ; ಪ್ರಕರಣ ದಾಖಲು

ಪರಿಸ್ಥಿತಿಯನ್ನು ತಿಳಿಗೊಳಿಸಿ ಕಾರಾಗೃಹದ ಆಸ್ಪತ್ರೆಯಲ್ಲಿಯೇ ವಿಚಾರಣಾಧೀನ ಕೈದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.ಈ ಘಟನೆ ಸಂಬಂಧ ಕಾರಾಗೃಹದ ಸುಗಮ ಆಡಳಿತಕ್ಕೆ ಧಕ್ಕೆ ತಂದು, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಕ್ಷಾ ಬಂಧಿ ವಿರುದ್ಧ ಡಾ. ರಂಗನಾಥ್ ಅವರು ನೀಡಿದ ಅಧಿಕೃತ ದೂರನ್ನು ಆಧರಿಸಿ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ.

Continue Reading

ಶಿವಮೊಗ್ಗ | ಕಮಲಾ ನೆಹರು ಕಾಲೇಜು ರಸ್ತೆ‌ಯಲ್ಲಿ ಸಂಚಾರ ಈಗ ಸುಗಮ

ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ. ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಫೈನ್​ ಹಾಕೋದು ಗ್ಯಾರಂಟಿ. ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.

Continue Reading

ಶಿವಮೊಗ್ಗ | ನೀರಿನ ಪಂಪ್ ನ ಕೇಬಲ್ ಕದಿಯುತ್ತಿದ್ದವನು ಈಗ ಪೊಲೀಸರ ಅತಿಥಿ

ಬಂಧಿತ ಆರೋಪಿಯನ್ನು ಶಿವಮೊಗ್ಗದ ರಾಗಿಗುಡ್ಡದ 4ನೇ ಕ್ರಾಸ್ ನಿವಾಸಿ, ಕುಮಾರ ಎಸ್.ಕೆ (31 ವರ್ಷ) ಎಂದು ಗುರುತಿಸಲಾಗಿದೆ. ಬಂಧಿತನಿಂದ ಪೊಲೀಸರು, ಕಳವು ಮಾಡಲಾಗಿದ್ದ ಅಂದಾಜು 93,000 ರೂ. ಮೌಲ್ಯದ ಒಟ್ಟು 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ ವೈರ್‌ಗಳನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಕಳ್ಳತನದ ಕೃತ್ಯ ಎಸಗಲು ಆತ ಬಳಸುತ್ತಿದ್ದ ಅಂದಾಜು 30,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Continue Reading

ಶಿವಮೊಗ್ಗ | ಮನೆಯಲ್ಲೇ ಯುವಕನ ಹತ್ಯೆ ; ವ್ಯವಹಾರಿಕ ವೈಷಮ್ಯ ಶಂಕೆ

ಪ್ರಾಥಮಿಕ ಮಾಹಿತಿಯಂತೆ ವ್ಯವಹಾರಿಕ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಶಿವಮೊಗ್ಗ | ಇನ್ಸ್ಟಾಗ್ರಾಮ್​​ ಜಾಹೀರಾತು ನಂಬಿ 2 ಕೋಟಿ ಕಳೆದುಕೊಂಡ ಯುವ ರೈತ

ನಂತರ ಟೆಲಿಗ್ರಾಂ ಮೂಲಕವೇ ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಮತ್ತು ಯುಪಿಐ ಲಿಂಕ್‌ಗಳನ್ನು ಕಳುಹಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.ಇದನ್ನು ನಂಬಿದ ದೂರುದಾರ 2023ರ ಜನವರಿ ತಿಂಗಳಿನಿಂದ ಹಿಡಿದು 2026ರ ಏಪ್ರಿಲ್ ತಿಂಗಳಿನವರೆಗೆ ಅಂದರೆ ಸತತ ಮೂರು ವರ್ಷಗಳ ಕಾಲ ಹಂತ ಹಂತವಾಗಿ ಒಟ್ಟು 2,05,00,000 ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಮಧ್ಯದಲ್ಲಿ ದೂರುದಾರ ತಮಗೆ ತುರ್ತು ಹಣದ ಅವಶ್ಯಕತೆ ಇದ್ದು, ಲಾಭಾಂಶವನ್ನು ವಿತ್‌ಡ್ರಾ ಮಾಡಿಕೊಡುವಂತೆ ಕೇಳಿದಾಗ, ಈಗಲೇ ವಿತ್‌ಡ್ರಾ ಮಾಡಿದರೆ ನಿಮಗೆ ಭಾರಿ ನಷ್ಟವಾಗುತ್ತದೆ, […]

Continue Reading

ಶಿವಮೊಗ್ಗ | ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಸದಾ ಬದ್ಧ: ಸಂಸದ ಬಿ.ವೈ. ರಾಘವೇಂದ್ರ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಂಬಂಧಿತ ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಲ್ಲಿಯೂ ಮಾರಾಟ ಮಾಡಿಲ್ಲ ಅಥವಾ ವಿತರಿಸಿಲ್ಲ. ಈ ಸರಕು ಕೇವಲ ಸಾಗಾಣಿಕೆಯಲ್ಲಿ ಮಾತ್ರ ಇತ್ತು. ಅಷ್ಟೇ ಅಲ್ಲ, ಗುಟ್ಕಾ, ಪಾನ್ ಮಸಾಲಾ ಮತ್ತು ಜರ್ದಾದಂತಹ ನಿಷೇಧಿತ ಪದಾರ್ಥಗಳ ವರ್ಗಕ್ಕೆ ಅಡಿಕೆ ಸೇರುವುದಿಲ್ಲ, ಮಹಾರಾಷ್ಟ್ರದಲ್ಲಿ ಅಡಿಕೆಯ ಮೇಲೆ ಯಾವುದೇ ನಿಷೇಧ ಇಲ್ಲ. ಆದ್ದರಿಂದ, ಈ ವಾಹನಗಳ ವಶಪಡಿಸಿಕೊಳ್ಳುವಿಕೆಗೆ ಕಾನೂನಿನ ಯಾವುದೇ ಆಧಾರ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ನಿಯೋಗ ಸಂಸದರಿಗೆ ಮನವಿ ಸಲ್ಲಿಸಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ: ಸಾವಿರಾರು […]

Continue Reading

ಹೊಸನಗರ | ಸಚಿವ ಸ್ಥಾನಕ್ಕಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಪರ ಧರ್ಮಸ್ಥಳದಲ್ಲಿ ಮುಡಿ ಕೊಟ್ಟು ಪ್ರಾರ್ಥಿಸಿದ ಕಾಂಗ್ರೆಸ್ ಮುಖಂಡರು

ಅಲ್ಲದೆ ಕರಾವಳಿಯ ಆರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೂ ವಿಶೇಷ ಪೂಜೆ ಸಲ್ಲಿಸಿ, ಬೇಳೂರು ಗೋಪಾಲಕೃಷ್ಣ ಅವರು ಈ ಬಾರಿ ಸಚಿವರಾಗುವಂತೆ ಪ್ರಾರ್ಥನೆ ಮಾಡಿದರು. ಸಾಗರ-ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೇವೆ ಅಪಾರವಾಗಿದೆ. ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬುದು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ದೇವರ ಆಶೀರ್ವಾದಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇವೆ. ಪಕ್ಷದ […]

Continue Reading