ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ.! : ಅರೋಗ್ಯ ಸಚಿವರೇ ರಾಜ್ಯದಲ್ಲಿ ಮದ್ಯ ನಿಷೇಧಿಸಿ, ಜನರ ಅರೋಗ್ಯ ಕಾಪಾಡಿ : ನೈಜ ಹೋರಾಟಗಾರರ ವೇದಿಕೆ ಮನವಿ

ತಮ್ಮ ಕಾರ್ಯಚಟುವಟಿಕೆಗಳಿಗೆ ನೈಜ ಹೋರಾಟಗಾರರ ವೇದಿಕೆಯು ತಮ್ಮನ್ನು ಅಭಿನಂದಿಸುತ್ತದೆ. ಮಾಧ್ಯಮಗಳಲ್ಲಿ ತಾವು ಮಾತನಾಡುತ್ತಾ ಪೆಪ್ಸಿ ಅಂತ ಪಾನಿಯಗಳನ್ನು ಮಕ್ಕಳಿಗೆ ಕೊಡುವುದರಿಂದ ಅವರ ಆರೋಗ್ಯ ಹಾನಿಯಾಗುವುದರ ಬಗ್ಗೆ ಕಾಳಜಿವಹಿಸಿದ್ದೀರಿ. ಶುದ್ಧ ಆಹಾರವನ್ನು ಮಕ್ಕಳಿಗೆ ಕೊಡುವಂತೆ ಪೋಷಕರಿಗೆ ಕಿವಿಮಾತನ್ನು ಸಹ ಹೇಳಿದ್ದೀರಿ. ಇದು ಕೂಡ ಅತ್ಯಂತ ಶ್ಲಾಘನೀಯ ಎಂದಿದ್ದಾರೆ. ಆದರೆ ಸರ್ಕಾರದ ದ್ವಂದ್ವ ನೀತಿಗಳು ಜನರ ಕಣ್ಣಿಗೆರಚ್ಚುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು “ಮಧ್ಯದ ಬಾಟಲಿಯ ಮೇಲೆ ಮುದ್ರಿಸಿ” ರಾಜ್ಯದ ನಾಗರಿಕರಿಗೆ ಮಾರಾಟ ಮಾಡುತ್ತಿರುವ […]

Continue Reading

ಶಿವಮೊಗ್ಗದಲ್ಲಿ ಮತ್ತೊಂದು ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಿದ ಎಸ್ಪಿ ನಿಖಿಲ್. ಬಿ

ನಗರದ ಪ್ರಮುಖ ವೃತ್ತಗಳಲ್ಲಿ ಒಂದಾದ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಆರಂಭಿಸಿರುವ ಪ್ರೀ-ಪೇಯ್ಡ್ ಕೌಂಟ‌ರ್ ಮೂಲಕ ಪ್ರಯಾಣಿಕರು ತಮ್ಮ ಗಮ್ಯಸ್ಥಾನಕ್ಕೆ ನಿಗದಿತ ದರದಲ್ಲಿ ಆಟೋ ಸೇವೆ ಪಡೆಯಲು ಅನುಕೂಲವಾಗಲಿದೆ. ಈ ವ್ಯವಸ್ಥೆಯು ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ದರಕ್ಕೆ ಸಂಬಂಧಿಸಿದಂತೆ ಉಂಟಾಗಬಹುದಾದ ಗೊಂದಲಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ..! ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಶಿವಮೊಗ್ಗ ‘ಬಿ’ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜುಕುಮಾ‌ರ್, ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್‌ ಇನ್ಸ್‌ಪೆಕ್ಟ‌ರ್ ದೇವರಾಜ್ ಟಿ.ವಿ., ಅಕ್ಟರ್ ಮುಲ್ಲಾ ಪೂರ್ವ ಸಂಚಾರ […]

Continue Reading

ಸಾಗರ | ಮಾರ್ಕೇಟ್​​ ಬಳಿ ಎಂಡಿಎಂಎ ಮಾದಕ ವಸ್ತು ಮಾರಾಟ, ಯುವಕನ ಬಂಧನ

ದಾಳಿಯ ವೇಳೆ ಸಾಗರ ಮೂಲದ ಹಫೀಜ್ ಉರ್ ರೆಹಮಾನ್ (27 ವರ್ಷ) ಎಂಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಅಂದಾಜು 20,000 ಮೌಲ್ಯದ 06 ಗ್ರಾಂ 77 ಮಿಲಿ ಗ್ರಾಂ ತೂಕದ ಮಾರಕ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ನಗರದ ಹೊವಲಯದ ತೀರ್ಥಹಳ್ಳಿ ರಸ್ತೆಯಲ್ಲಿ ದಂಪತಿ ಇದ್ದ ಕಾರು ಅಡ್ಡಗಟ್ಟಿ ದರೋಡೆ

ನಂತರ ಸ್ಥಳಕ್ಕೆ ಬಂದ ಇರ್ಫಾನ್ ಸ್ನೇಹಿತ, ದಂಪತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಬದುಕಿಗೆ ಭದ್ರತೆ ನೀಡಿದ ಹಿರಿಯರನ್ನು, ಸಂಸ್ಥೆಯನ್ನು ಮರೆಯಬೇಡಿ : ಹಿರಿಯ ನಟ ರಮೇಶ್ ಭಟ್

ಕಾಲೇಜಿನ ಎನ್ಸಿಸಿ ಘಟಕವು ಕವಾಯ್ತು ಮೂಲಕ ಧ್ವಜ ವಂದನೆ ಸಲ್ಲಿಸಿತು. ಅತಿಥಿಗಳಿಗೆ ಕಾಲೇಜು ಆಡಳಿತಮಂಡಳಿಯು ಹಾರ ಹಾಕಿ ಶಾಲು ಹೊದೆಸಿ ಗೌರವಿಸಿತು. ಎಂಡಿಎಫ್ ಅಧ್ಯಕ್ಷ ಬಿ.ಆರ್. ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಧನಂಜಯ ಗಾರ್ಗಿ, ವಿವೇಕಾನಂದ ಸ್ವಾಯತ್ತ ಕಾಲೇಜಿನ ನಿಕಟಪೂರ್ವ ಕುಲಪತಿ ಶ್ರೀಧರ್ ಮುಂಡಿಗೆಹಳ್ಳ, ಬಿಎಡ್ ಕಾಲೇಜು ಪ್ರಾಂಶುಪಾಲೆ ಡಾ. ಶಿಲ್ಪಾ, ಸಹಕಾರ್ಯದರ್ಶಿ ಸತ್ಯನಾರಾಯಣ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಲಕ್ಷ್ಮೀಶ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಖಜಾಂಚಿ ಕವಲಕೋಡು ಕೆ. ವೆಂಕಟೇಶ್ […]

Continue Reading

ಶಿವಮೊಗ್ಗ | ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ನಿರ್ಣಾಯಕ : ಜಗದೀಶ್ ಎನ್.ಕೆ.

ದೇಶದ ಗಡಿಯಲ್ಲಿ ಸೈನಿಕರು ಹಗಲು-ರಾತ್ರಿ ಎನ್ನದೆ ರಾಷ್ಟ್ರದ ರಕ್ಷಣೆಗೆ ನಿಂತಿರುವಂತೆ, ಪ್ರತಿಯೊಬ್ಬ ನಾಗರಿಕರೂ ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ರೈತರು ಆಹಾರ ಭದ್ರತೆ ನೀಡುತ್ತಾರೆ, ವಿಜ್ಞಾನಿಗಳು ಹೊಸ ಆವಿಷ್ಕಾರಗಳ ಮೂಲಕ ದೇಶವನ್ನು ಮುನ್ನಡೆಸುತ್ತಾರೆ, ಕಾರ್ಮಿಕರು ಮತ್ತು ಉದ್ಯೋಗಿಗಳು ಆರ್ಥಿಕ ಪ್ರಗತಿಗೆ ಶ್ರಮಿಸುತ್ತಾರೆ. ಹೀಗೆ ಪ್ರತಿಯೊಬ್ಬರ ಕೊಡುಗೆಯೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು. “ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾರೆ; ಅದನ್ನು ಮತ್ತಷ್ಟು ಬಲಿಷ್ಠ, ಸಮೃದ್ಧ […]

Continue Reading

80ನೇ ಸ್ವಾತಂತ್ರ್ಯ ದಿನದಂದು ಯುವಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ, ರೈತ ಸಬಲೀಕರಣ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಯೋಜನೆ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್

‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ರಾಜ್ಯದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಹಲವು ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 72,000 ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗಟ್ಟಲು ಮತ್ತು ಪಾರದರ್ಶಕತೆ ತರಲು ಪರಿಣಿತ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, 2 ತಿಂಗಳಲ್ಲಿ ವರದಿ ಆಧರಿಸಿ ದೇಶಕ್ಕೇ ಮಾದರಿಯಾದ ಪರೀಕ್ಷಾ ನೀತಿ ಜಾರಿಗೆ ಬರಲಿದೆ. ಹಿಂದುಳಿದ 10 ಜಿಲ್ಲೆಗಳಲ್ಲಿ […]

Continue Reading