ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ರಾಜ್ಯ ಸರ್ಕಾರ ಆದೇಶ

15 ದಿನದೊಳಗೆ ಪಾವತಿ ರಾಜ್ಯದಲ್ಲಿ ವಾಸವಿದ್ದು, ಗಡಿರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಗಡಿರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಲಾಗುವುದು. ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗುವುದರಿಂದ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲು ಆದೇಶಿಸಲಾಗಿದೆ.

Continue Reading

ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

ಎಲ್ಲಾ ಇಲಾಖೆಗಳ ಸಹಕಾರಕ್ಕೆ ಮನವಿ: ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರವನ್ನು ಬಯಸಿರುವ ಆರೋಗ್ಯ ಇಲಾಖೆಯು, ಹೆಚ್ಚಿನ ಪ್ರಚಾರ ನೀಡಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಎಲ್ಲಾ ಮಾಧ್ಯಮಗಳು, ಆಕಾಶವಾಣಿ ಹಾಗೂ ಎಫ್.ಎಮ್ ವಾಹಿನಿಗಳಲ್ಲಿ ಜಿಂಗಲ್ಸ್ ಮೂಲಕ ಈ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ […]

Continue Reading

ಜೂನ್ 12 ರಂದು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ

ತಮಿಳುನಾಡು ಮುಖ್ಯಮಂತ್ರಿ ಸಂಚರಿಸುವ ಮಾರ್ಗ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಸೌಪರ್ಣಿಕಾ ನದಿ ಜಲಾನಯನ ಪ್ರದೇಶದ ಬಳಿಯ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಮೂಲಕ ಹಾದುಹೋಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಮಾರ್ಗದಲ್ಲಿ ಅನುಮಾನಾಸ್ಪದ ಚಟುವಟಿಕೆ ಮತ್ತು ವನ್ಯಜೀವಿಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಕೋರಲಾಗಿದೆ. ವಿಮಾನ ನಿಲ್ದಾಣ, ದೇವಾಲಯದ ಆವರಣ ಮತ್ತು ಪ್ರಯಾಣ ಮಾರ್ಗದಲ್ಲಿ ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣ ಮತ್ತು ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

Continue Reading

ಸ್ಪಾಗಳ ಅನೈತಿಕ ಚಟುವಟಿಕೆಗೆ ಬ್ರೇಕ್ ; ಶೀಘ್ರದಲ್ಲಿ ಪ್ರತ್ಯೇಕ ಕಾನೂನು ಜಾರಿ

ಸ್ಪಾ ಕೇಂದ್ರಗಳಲ್ಲಿ ಲೈಂಗಿಕ ಚಟುವಟಿಕೆ ಸಂಪೂರ್ಣ ನಿಷೇಧವಾಗಿರಲಿದೆ. ಪುರುಷ ಮತ್ತು ಮಹಿಳೆಯರ ವಿಭಾಗಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಗ್ರಾಹಕರ ಗುರುತಿನ ಚೀಟಿ ದಾಖಲೆ ಕಡ್ಡಾಯವಾಗಿದ್ದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕನಿಷ್ಠ 3 ತಿಂಗಳು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯಾಚರಿಸಬೇಕು. ಮಸಾಜ್ ಸೇವೆ ನೀಡುವ ಸಿಬ್ಬಂದಿ ಮಾನ್ಯತೆ ಪಡೆದ ಪ್ರಮಾಣಪತ್ರ ಅಥವಾ ಡಿಪ್ಲೊಮಾ ಹೊಂದಿರುವುದು ಕಡ್ಡಾಯವಾಗಲಿದೆ. ಮಾಲೀಕರು ಹಾಗೂ ಸಿಬ್ಬಂದಿಗೆ ಪೊಲೀಸ್‌ ಪರಿಶೀಲನೆ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Continue Reading

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಭವಿಷ್ಯ ನುಡಿದಿದ್ದ ಸಾಗರದ ಖ್ಯಾತ ಜ್ಯೋತಿಷಿ ಡಾ.ಸಿ.ಕೊಟ್ರೇಶಯ್ಯ ಕಲ್ಯಾಣಮಠ

ರಾಷ್ಟ್ರ ರಾಜ್ಯಕಾರಣದಲ್ಲಿ ಪಕ್ಷವನ್ನು ಸರ್ವಾಗೀಣ ಅಭಿವೃದ್ಧಿ ಮಾಡುವುದರ ಮೂಲಕ ದಿನಾಂಕ : 26-11-2025 ರಿಂದ 28-06-2027ವರೆಗೆ 2027-2028ರಲ್ಲಿ ರಾಜ್ಯದ ಪ್ರಬಲ ಮುಖ್ಯಮಂತ್ರಿಯಾಗಿ ಮೆರೆಯುವ ಯೋಗವಿದೆ.ದಿನಾಂಕ : 15-10-2021 ರಿಂದ 14-12-2024 ರವರೆಗೆ ಶನಿದಶಾ ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕ ಭುಕ್ತಿಯಾಗಿದ್ದು ಲಗ್ನಾತ್ 12 ರಲ್ಲಿ ಉಚ್ಚನಾಗಿದ್ದು ಸ್ವಲ್ಪದರಲ್ಲಿ ಮುಖ್ಯಮಂತ್ರಿ ಪದವಿ ತಪ್ಪಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕವಾಗಿದ್ದು ಶಾಸ್ತ್ರಕ್ಕೋವಾಗಿ ಮಹಾಮೃತ್ಯಂಜಯಜಪಸಹಿತ 5 ಮೇಕೆ (ಆಡು) ಗುರುಮಠಕ್ಕೆ ದಾನ ಕೊಡಬೇಕು ಮತ್ತು ವಾಹನ ಸ್ತ್ರೀ ವಿಚಾರದಲ್ಲಿ ಹಾಗೂ […]

Continue Reading

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ; ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ಡಿಕೆ ಶಿವಕುಮಾರ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು. ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಅತ್ಯಂತ ಅಪರೂಪದ ಹಾಗೂ ಶಕ್ತಿಶಾಲಿ ‘ಮಾಲವ್ಯ ಯೋಗ’ದ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. ತುಲಾ ಲಗ್ನದಲ್ಲಿ ಡಿಕೆಶಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪ್ರಸ್ತುತ ಜಾತಕದಲ್ಲಿ ಗುರು ಗ್ರಹವು ಉಚ್ಚ ಸ್ಥಿತಿಯಲ್ಲಿದ್ದು, ದಶಮ ಭಾವ ಬಲವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಎಷ್ಟು ದೊಡ್ಡ ಸವಾಲುಗಳು ಎದುರಾದರೂ […]

Continue Reading

ಭದ್ರಾವತಿ | ಮರಳಿ ಮಾತೃ ಧರ್ಮಕ್ಕೆ ಕ್ರ್ರಿಶ್ಚಿಯನ್ ಯುವತಿ..!

ಆದರೆ ಯುವತಿಯ ಕುಟುಂಬದವರು ಕ್ರೈಸ್ತ ಧರ್ಮದವರಾಗಿದ್ದಾರೆ. ಆದರೆ ಮದುವೆ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಯಲಿದ್ದು, ಇದಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಯುವತಿ ಹಿಂದು ಧರ್ಮದ ಯುವಕನನ್ನು ವರಿಸಲಿದ್ದು ತಾನೂ ಸಹ ಹಿಂದೂ ಧರ್ಮ ಸ್ವೀಕಾರ ಮಾಡುವ ಮೂಲಕ ಮರಳಿ ಮಾತೃ ಧರ್ಮಕ್ಕೆ ಬರುತ್ತೇನೆ ಎಂದು ತಿಳಿಸಿದ್ದಳು. ಈ ಕುಟುಂಬದವರು ಮೂಲತಃ ಹಿಂದೂ ಧರ್ಮದವರಾಗಿದ್ದರು ಯಾವುದೋ ಕಾರಣಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅದರಂತೆ ಜನ್ನಾಪುರದ ಶ್ರೀ ಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಮುಖ ಅರ್ಚಕರಾದ ಹಾಗು ಧರ್ಮ […]

Continue Reading

ಅಡುಗೆ ಎಣ್ಣೆ ದರ ಇಳಿಕೆ ; ಅಕ್ಕಿ ದರ ಏರಿಕೆ

ಒಂದು ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆ, ಪೂರೈಕೆ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅಡುಗೆ ಎಣ್ಣೆ ದರಅಡುಗೆ ಎಣ್ಣೆ – ಹಳೆಯ ದರ (1 ಲೀ.) – ಹೊಸ ದರ (1 ಲೀ.)ಫಾಮ್ ಆಯಿಲ್ – 143 ರೂ. – 141 ರೂ.ಸನ್ ಪ್ಯೂರ್ – 170 ರೂ. – 167 ರೂ.ಕಡಲೆಕಾಯಿ – 190 ರೂ. […]

Continue Reading

ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ!

ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದಿದ್ದ ಅವರು ಕೆಲವು ಸಿನಿಮಾಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ತೊಡಗಿಕೊಂಡಿದ್ದರು. 2005ರಲ್ಲಿ ತೆರೆ ಕಂಡಿದ್ದ ‘ಬಾಯ್‌ ಫ್ರೆಂಡ್’ ಸಿನಿಮಾದಲ್ಲಿ ನಾಯಕ ನಟರಾಗಿ ಬಣ್ಣಲೋಕ ಪ್ರವೇಶಿಸಿದ್ದರು. ಇನ್ನೂ ಅಪ್ಪು ಅಭಿನಯನದ ‘ಮಿಲನ’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Continue Reading

ಮದರಸಗಳಲ್ಲಿ ಕನ್ನಡ- ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುಸ್ಲಿಂ ಬಾಂಧವ್ಯ ವೇದಿಕೆ

ವೇದಿಕೆ ನೀಡಿದ ಸಲಹೆಗಳು ಸರಳವಾಗಿದ್ದು ಅನುಷ್ಠಾನಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟ ಬಿಳಿಮಲೆಯವರು, ತಮ್ಮ ಅವಧಿ ಮುಗಿಯುವುದರ ಒಳಗೆ ರಾಜ್ಯಾದ್ಯಂತ ಜಾರಿ ಮಾಡಲು ಗರಿಷ್ಠ ಪ್ರಯತ್ನ ಪಡುವುದಾಗಿ ಭರವಸೆ ಇತ್ತರು. ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಾ. ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕಿರ್ ಹುಸೇನ್ ಉಚ್ಚಿಲ್ಲ, ಕಾರ್ಯದರ್ಶಿ ರಹಮತ್ ದಾವಣಗೆರೆ, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಕೋಟ ಇಬ್ರಾಹಿಂ ಸಾಹೇಬ್, ಮೌಲಾನಾ ಅಬ್ದುಲ್ ಹಫೀಜ್ ಕಾಶ್ಮೀ, ದಸ್ತಗೀರ್ ಕಲ್ಲಹಳ್ಳಿ, ಅಸ್ಲಾಂ ಹೈಕಾಡಿ, ಅಶ್ರಫ್ ಕುಂದಾಪುರ, ಅಬ್ದುಲ್ ರೌಫ್, […]

Continue Reading