ಚಿತ್ರದುರ್ಗದಲ್ಲಿ ನಡೆದ ‘ಅಭಿಮಾನೋತ್ಸವ’ ಕಾರ್ಯಕ್ರಮ ಹೃದಯಸ್ಪರ್ಶಿ : ಪ್ರಧಾನಿ ಮೋದಿ ಸಂದೇಶ

ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ಯಾವಾಗಲೂ ಆತ್ಮೀಯರು, ಪ್ರೀತಿಯವರು, ಕಠಿಣ ಪರಿಶ್ರಮಿಗಳು ಮತ್ತು ವಿನಮ್ರರು. ಹೋರಾಟದ ಕ್ಷಣಗಳಲ್ಲಿ ಮತ್ತು ಯಶಸ್ಸಿನ ಕ್ಷಣಗಳಲ್ಲಿ ನಾನು ಅವರನ್ನು ನೋಡಿದ್ದೇನೆ. ಪ್ರತಿ ಹಂತದ ಮೂಲಕ, ಒಂದು ವಿಷಯ ಸ್ಥಿರವಾಗಿ ಉಳಿದಿದೆ, ಕರ್ನಾಟಕದ ಜನರಿಗೆ ಮತ್ತು ನಮ್ಮ ಪಕ್ಷದ ಆದರ್ಶಗಳಿಗೆ ಅವರ ಸಂಪೂರ್ಣ ಬದ್ಧತೆ.ಅವರ ರಾಜಕೀಯ ಜೀವನವು ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಸಾಧಾರಣ ಆರಂಭದಿಂದ ಬೆಳೆದ ಅವರು, […]

Continue Reading

ಸಚಿವ ಡಿ ಸುಧಾಕರ್ ಇನ್ನಿಲ್ಲ ; ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ

ಡಿ. ಸುಧಾಕರ್ ಅವರು ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಗಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಳಿಕ ಅವರನ್ನು ಮಣಿಪಾಲ್‌ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿಯೇ ಇದ್ದ ಸುಧಾರಕರ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ

Continue Reading

ಕೇರಳಂ | ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್ ಹೆಸರು ಮುಂಚೂಣಿ

63 ವರ್ಷದ ವೇಣುಗೋಪಾಲ್ ಅವರು ಪ್ರಸ್ತುತ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದು, ಆಲಪ್ಪುಳ ಕ್ಷೇತ್ರದ ಸಂಸದರಾಗಿದ್ದಾರೆ. ಯುಡಿಎಫ್ ಭರ್ಜರಿ ಗೆಲುವಿನ ಹಿಂದೆ ಅವರ ತಂತ್ರಗಾರಿಕೆ ಪ್ರಮುಖ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಣ್ಣಿಸುತ್ತಿದ್ದಾರೆ. ಪಕ್ಷ ಕಚೇರಿಗಳ ಮುಂದೆ “ನಾಯಕ”, “ಹೀರೋ” ಎಂಬ ಪೋಸ್ಟರ್‌ಗಳು ಕೂಡ ಕಾಣಿಸಿಕೊಳ್ಳುತ್ತಿವೆ.ಮುಂದಿನ ಸೋಮವಾರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ರಾಹುಲ್ ಗಾಂಧಿ ಭಾಗವಹಿಸುವ ನಿರೀಕ್ಷೆಯಿದೆ. ಇದೇ ವೇಳೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆಯೂ ವಿಜಯ್ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ […]

Continue Reading

ಐಪಿಎಲ್ ಫೈನಲ್ ಸ್ಥಳಾಂತರ : ಸ್ಟೇಡಿಯಂ ಅಭಿಮಾನಿಗಳದ್ದೇ ಹೊರತು VIPಗಳದ್ದಲ್ಲ : ನಿಖಿಲ್ ಕುಮಾರಸ್ವಾಮಿ

ನಿಖಿಲ್ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಒಂದು ಫೋನ್ ಕರೆ ಮಾಡಿದ್ದರೆ ಈ ಸ್ಥಳಾಂತರವನ್ನು ತಪ್ಪಿಸಬಹುದಿತ್ತು. ಆದರೆ, ಜೆಡಿಎಸ್-ಬಿಜೆಪಿ ಮೈತ್ರಿಯೇ ಅಹಮದಾಬಾದ್‌ಗೆ ಪಂದ್ಯವನ್ನು “ಗಿಫ್ಟ್” ಆಗಿ ನೀಡಿ ಕನ್ನಡದ ಅಸ್ಮಿತೆಗೆ ದ್ರೋಹ ಬಗೆದಿದೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ಅವರು ವಿಧಾನಸಭೆಯಲ್ಲಿ ಶಾಸಕರಿಗೆ ಟಿಕೆಟ್ ಕೇಳಿ ಗಲಾಟೆ ಮಾಡಿದಾಗ ನಿಮ್ಮ”ಕರ್ನಾಟಕ ಫಸ್ಟ್” ಸಿದ್ಧಾಂತ ಎಲ್ಲಿ ಹೋಗಿತ್ತು […]

Continue Reading

ಶಿವಮೊಗ್ಗ | ಸಂಸದ ರಾಘವೇಂದ್ರ ವಿರುದ್ಧ ಶಿಕ್ಷಣ ಸಚಿವ ಆಕ್ರೋಶ ಹಾಗೂ ಮತ್ತಷ್ಟು ಸುದ್ದಿಗಳು

ಇವರಿಗೆ ಮಾನ ಮರ್ಯಾದೆ ಇದೆಯೇ? ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಯನ್ನು ಕೇಂದ್ರಕ್ಕೆ ವಹಿಸಿಬಿಡಬೇಕಂತೆ, ಯಾಕೆ ವಹಿಸಬೇಕು? ಇವರೇನಾದರೂ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ? ಇಲ್ಲಿನ ರೈತರು ತಮ್ಮ ರಕ್ತ, ಬೆವರನ್ನು ಸುರಿಸಿ ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆ ರೈತರ ಜಮೀನನ್ನು ಕಿತ್ತುಕೊಂಡು, ಹಾಳುಮಾಡಿ ಈಗ ಕೇಂದ್ರಕ್ಕೆ ನೀಡಲು ಹೊರಟಿದ್ದೀರಲ್ಲ, ಈ ವಿಮಾನ ನಿಲ್ದಾಣ ಮಾಡುವ ಮುಂಚೆಯೇ ಈ ವಿಚಾರವನ್ನು ನೀವು ಹೇಳಬೇಕಿತ್ತಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಶಿಕ್ಷಕರ ನೇಮಕಾತಿ: ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ ಶಿವಮೊಗ್ಗ, […]

Continue Reading

ಶಾಸಕಿಯ ಅನುಮತಿಯಿಲ್ಲದೆ ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್ ಹಿರಿಯ ನಾಯಕ..!

https://x.com/i/status/2052320354681626992 ತಿರುವನಂತಪುರಂನ ಕೆಪಿಸಿಸಿ ಕಚೇರಿಯಲ್ಲಿ ಇತೀಚೆಗೆ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಆಗಮಿಸಿದ ಕೊಲ್ಲಂನ ಶಾಸಕಿ ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ಚೆರಿಯನ್‌ ಫಿಲಿಪ್‌ ಮುಂದಾಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಬಿಂದು ಕೃಷ್ಣ ಕೈ ಮುಗಿದು ಚೆರಿಯನ್‌ ಫಿಲಿಪ್‌ನಿಂದ ಬಳಿಯಿಂದ ಆಚೆ ಹೋಗಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಕಾಂಗ್ರೆಸ್‌ ನಾಯಕರು, ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ವಿಡಿಯೊ ವೈರಲ್‌ ಆಗಿತ್ತಿದ್ದಂತೆ ನೆಟ್ಟಿಗರು ಚೆರಿಯನ್‌ ಫಿಲಿಪ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿಗೆ […]

Continue Reading

ಅಗತ್ಯ ಸಂಖ್ಯಾಬಲದೊಂದಿಗೆ ಭೇಟಿ ಮಾಡಲು ಬನ್ನಿ : ಟಿವಿಕೆ ವಿಜಯ್‌ಗೆ ತಮಿಳುನಾಡು ರಾಜ್ಯಪಾಲರ ಸಂದೇಶ!

ಇನ್ನು ಹೊಸ ಸರ್ಕಾರ ರಚನೆಯ ಹಾದಿಯಲ್ಲಿ ತನ್ನದೇ ಆದ ಕರ್ತವ್ಯಗಳಲ್ಲಿ ನಿರತವಾಗಿರುವ ತಮಿಳುನಾಡು ಲೋಕಭವನ (ಈ ಹಿಂದೆ ರಾಜಭವನ), ಸದ್ಯಕ್ಕೆ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಿಂದ ರಾಜೀನಾಮೆ ಪಡೆದಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಲೋಕಭವನ ತಿಳಿಸಿದೆ. ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಜಯ ಇತಿಹಾಸ ನಿರ್ಮಿಸಿದೆಯಾದರೂ, ವಿಜಯ್‌ ಬಹುಮತಕ್ಕೆ ಅನ್ಯ ಪಕ್ಷಗಳ ಮೇಲೆ ಅವಲಂಬಿತರಾಗಿದ್ದಾರೆ. ಐದು ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್‌ ಈಗಾಗಲೇ […]

Continue Reading

ಶಿವಮೊಗ್ಗ | ಅಕ್ರಮ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ : ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ

ಇವುಗಳಿಂದ ಹನಿ ಟ್ರಾಪ್ ನಂತಹ ಅಪರಾಧ ಪ್ರಕ್ರಿಯೆಗಳು ಹೆಚ್ಚಾಗುವ ಸಂಭವನೀಯತೆ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಿ ಪಾರ್ಲರ್ ಮತ್ತು ಗಾಂಜಾ ದಂಧೆಗಳ ಮೇಲೆ ಹೆಚ್ಚಿನ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಇದೆ ರೀತಿಯಲ್ಲಿ ಮುಂದುವರೆದರೆ ಶೈಕ್ಷಣಿಕ ಕ್ಷೇತ್ರವಾಗಿರುವ ಶಿವಮೊಗ್ಗ ಜಿಲ್ಲೆ ಮತ್ತು ನಗರವು ವೇಶ್ಯವಾಟಿಕೆ ತಳಗಳಾಗಿ ಪರಿವರ್ತನೆ ಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಮನವಿ ತಿಳಿಸಲಾಗಿದೆ. ಮಸಾಜ್ ಪಾರ್ಲರ್ಗಳ ಮೇಲೆ ನಿಯಂತ್ರಣ ಸಾಧಿಸಲು ಒಂದು ಹೊಸ ಮಹಿಳಾ ಪೊಲೀಸ್ ತಂಡ ರಚಿಸಿ […]

Continue Reading