ಶಿವಮೊಗ್ಗ | 15 ದಿನದಲ್ಲಿ ಮೆಗ್ಗಾನ್ ಆಸ್ಪತ್ರೆಯ ಹೈಟೆಕ್ ಶವಾಗಾರ ಉದ್ಘಾಟಿಸದಿದ್ದಲ್ಲಿ, ಜೆಡಿಎಸ್ ನಿಂದ ಧರಣಿ ಸತ್ಯಾಗ್ರಹ : ಮಾಜಿ ಶಾಸಕ ಪ್ರಸನ್ನಕುಮಾರ್ ಎಚ್ಚರಿಕೆ..!

2017 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 2 ಕೋಟಿ ವೆಚ್ಚದಲ್ಲಿ ಹೈಟೆಕ್ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಇದರಲ್ಲಿ ಶವ ಪರೀಕ್ಷೆ ಕೊಠಡಿ, ಪೊಲೀಸ್ ಮಹಜರು ಕೊಠಡಿ, ಬಂದವರಿಗೆ ಎಲ್ಲ ರೀತಿ ಸೌಲಭ್ಯವುಳ್ಳ ಕೊಠಡಿ ಇವೆ. ಈಗ ಸಣ್ಣಪುಟ್ಟ ಕೆಲಸಗಳಿದ್ದು, ಅದನ್ನು ಕೂಡಲೇ ಮುಗಿಸಿ ಲೋಕಾರ್ಪಣೆಗೊಳಿಸಬೇಕು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹತ್ತು ಕೋಟಿ ರೂ. ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ 3 ಕೋಟಿ ರೂ, ರೋಗಿಗಳ ಸಂಬಂಧಿಕರ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇವುಗಳ ಕಾಮಗಾರಿ ಹೆಚ್ಚು […]

Continue Reading

ಶಿವಮೊಗ್ಗ | ಓಲೈಕೆಗೋಸ್ಕರ ಮಕ್ಕಳ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ,ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ : ಸಂಸದ BYR ಕಿಡಿ

ಇಷ್ಟಿದ್ದರೂ ಕೇವಲ ತನ್ನ ಓಟ್ ಬ್ಯಾಂಕ್ ತುಷ್ಟೀಕರಣ ಹಾಗೂ ಓಲೈಕೆ ರಾಜಕೀಯಕ್ಕಾಗಿ ಅಮಾಯಕ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಈ ವಿವಾದಾತ್ಮಕ ಆದೇಶವನ್ನು ತಕ್ಷಣ ಹಿಂಪಡೆಯಲಿ, ಇಲ್ಲದಿದ್ದರೆ ಮುಂದೆ ಶಾಲಾ-ಕಾಲೇಜುಗಳಲ್ಲಿ ಉದ್ಭವಿಸಬಹುದಾದ ಅಹಿತಕರ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಈಶ್ವರಪ್ಪ ರಾಜಕೀಯ ನಿವೃತ್ತಿ ಪಡೆಯುವುದು ಸೂಕ್ತ : ಸಿ.ಜಿ. ಮಧುಸೂದನ್ ಅಗ್ರಹ..!

ಈ ದೇಶದ ಸಂವಿಧಾನದಲ್ಲಿ ಎಲ್ಲಾ ಧರ್ಮ, ಮತದವರಿಗೂ ಸಮಾನ ಅವಕಾಶಗಳನ್ನು ಕೊಡಲಾಗಿದೆ ಎನ್ನುವುದನ್ನೇ ಅವರು ಮರೆತಿದ್ದಾರೆ. ಅಲ್ಪಸಂಖ್ಯಾತರನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾ ಬಂದಿರುವ ಈಶ್ವರಪ್ಪನವರ ಶಿಕ್ಷಣ ಸಂಸ್ಥೆಯ ಮರ್ಯಾದೆಯನ್ನು ಉಳಿಸಿದ್ದು, ಅದೇ ಅಲ್ಪಸಂಖ್ಯಾತ ಸಮುದಾಯದ ಓರ್ವ ವಿದ್ಯಾರ್ಥಿನಿ ಎನ್ನುವುದನ್ನು ಮರೆತಿದಿದ್ದಾರೆ ಎಂದು ಟೀಕಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಅಲ್ಲಿ ಹಿಜಾಬ್ ಎಂದು ಹೇಳುತ್ತಾ ಈಶ್ವರಪ್ಪ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಸಂಸ್ಥೆಗಳನ್ನು ನಿಜಾರ್ಥದಲ್ಲಿ ಸರ್ವ […]

Continue Reading

ಶಿವಮೊಗ್ಗ | “ಮಾಡೋಕೆ ಕೆಲಸ ಇಲ್ಲದವ, ಬೆಕ್ಕಿನ ಬಾಲ ಬೋಳಿಸಿದನಂತೆ” ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ವ್ಯಂಗ್ಯ..!

ವಿದ್ಯಾರ್ಥಿಗಳ ಪರಿಶ್ರಮದ ಬಗ್ಗೆ ಮಾತನಾಡುವ ಇವರು, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಶೈಕ್ಷಣಿಕ ಶಿಸ್ತನ್ನು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವೈಫಲ್ಯ ಮತ್ತು ಓಲೈಕೆ ರಾಜಕಾರಣ”ಮಾಡೋಕೆ ಕೆಲಸ ಇಲ್ಲದೆ, ಬೆಕ್ಕಿನ ಬಾಲ ಬೋಳಿಸಿದನಂತೆ” ಎಂಬ ಗಾದೆ ಮಾತು ನಮ್ಮ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ. ಅದೆಷ್ಟೋ ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಕಾದು ಕುಳಿತಿದ್ದರೂ, […]

Continue Reading

ಇನ್ನು ಮುಂದೆ ಹಿಜಾಬ್ ಧರಿಸಬಹುದು ; ಸಿಎಂ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರದಿಂದ ಹಿಜಾಬ್ ನಿಷೇಧ ಆದೇಶ ವಾಪಾಸ್..!

ಬಿಜೆಪಿ ಅವಧಿಯಲ್ಲಿ ಹಿಜಾಬ್ ನಿಷೇಧದ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ತೊರೆದಿದ್ದರು. ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದ್ದ ಹಿಜಾಬ್ ಗಲಾಟೆ ರಾಜ್ಯಾಧ್ಯಂತ ವ್ಯಾಪಿಸಿತ್ತು. ಕಾಲೇಜು ಆವರಣಗಳಲ್ಲಿ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳ ನಡುವಿನ ಗಲಾಟೆಗೂ ಕಾರಣವಾಗಿತ್ತು. ಈ ನಡುವೆ ರಾಜ್ಯ ಸರ್ಕಾರದ ತೀರ್ಮಾಣವನ್ನು ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪಿನ ಬೆನ್ನಲ್ಲೇ ಹಲವು ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದರು. ವಿದ್ಯಾರ್ಥಿಗಳ ನಡುವೆಯೂ ಇದು ಕಂದಕ ಸೃಷ್ಟಿಗೆ ಕಾರಣವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು […]

Continue Reading

ಶಿವಮೊಗ್ಗ | ಯುವ ಕಾಂಗ್ರೆಸ್ ಪ್ರತಿಭಟನೆ ; ಸಂಸದರ ಮನೆ ಮುತ್ತಿಗೆಗೆ ಯತ್ನ..!

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮೆರಿಟ್ ಆಧಾರದ ಮೇಲೆ ಜಾರಿಗೆ ತಂದ ನೀಟ್ ವ್ಯವಸ್ಥೆಯು ಇಂದು ಕೋಚಿಂಗ್ ಮಾಫಿಯಾ ಹಾಗೂ ಅಕ್ರಮಗಳ ಕೂಪವಾಗಿ ಬದಲಾಗಿದೆ ಎಂದು ನಾಯಕರು ಆರೋಪಿಸಿದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪೋಷಕರ […]

Continue Reading

‘ಚಿನ್ನ ಖರೀದಿ ಬೇಡ’ ಪ್ರಧಾನಿ ಮನವಿ : ಇತಿಹಾಸ ಮರೆಯಿತ ಕಾಂಗ್ರೆಸ್?

ದೇಶದ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಹೇಳಿಕೆಗಳು ವೈರಲ್ ಆಗುತ್ತಿರುವಂತೆ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ವಿತ್ತ ಸಚಿವ ಪಿ ಚಿದಂಬರಂ ಮತ್ತು ಅಂದಿನ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಾಡಿದ್ದ ಹೇಳಿಕೆಗಳೂ ಕೂಡ ಇದೀಗ ವೈರಲ್ ಆಗುತ್ತಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ 1967ರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದೇ ರೀತಿಯ ಮನವಿ ಮಾಡಿದ್ದರು ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕರ್ನಾಟಕ ಬಿಜೆಪಿ ವಿಪಕ್ಷ ನಾಯಕ R. […]

Continue Reading

“ಸನಾತನ ಧರ್ಮ ನಿರ್ಮೂಲನೆ ಮಾಡಬೇಕು” : ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಶಾಸಕ ಉದಯನಿಧಿ ಸ್ಟಾಲಿನ್..!

“ಅಲೆಕ್ಸಾಂಡರ್, ಘೋರಿ, ಗಜ್ನಿ, ಖಿಲ್ಜಿ, ಬ್ರಿಟಿಷರು, ಫ್ರೆಂಚರು ಮತ್ತು ಕಮ್ಯುನಿಸ್ಟರಿಗೂ ಸನಾತನ ಧರ್ಮವನ್ನು ಅಳಿಸಲು ಸಾಧ್ಯವಾಗಲಿಲ್ಲ… ಆದರೀಗ ತನ್ನ ಸ್ವಂತ ಕುಟುಂಬದವರನ್ನೇ ಈ ಬಗ್ಗೆ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿಯೊಬ್ಬರು ಸನಾತನ ಧರ್ಮವನ್ನು ಅಳಿಸುವ ಮಾತನಾಡುತ್ತಿದ್ದಾರೆ!! ಭಾರತ ಮತ್ತು ಸನಾತನ ಧರ್ಮವು ಕಾಲದ ಪರೀಕ್ಷೆಗಳನ್ನು ಮತ್ತು ತಲೆಮಾರುಗಳನ್ನು ಮೀರಿ ಗಟ್ಟಿಯಾಗಿ ನಿಂತಿದೆ” ಎಂದು ಹೇಳಿದ್ದಾರೆ. ಬಿಎಲ್ ಸಂತೋಷ್ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘ಸ್ವಂತ ಕುಟುಂಬದವರನ್ನೇ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿ’ ಎಂಬ ಸಾಲು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು […]

Continue Reading

ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳದೆ ಇರುವುದೇ ಮಮತಾಗೆ ಈಗಿನ ದುಸ್ಥಿತಿಗೆ ಕಾರಣ..! : ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಹೇಳಿಕೆ

ತಿವಾರಿ ಅವರೊಂದಿಗೆ ಉತ್ತರ ಪ್ರದೇಶ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಆರಾಧನಾ ಮಿಶ್ರಾ ಇದ್ದರು.ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳು ಹಸ್ತಕ್ಷೇಪ ಮಾಡುತ್ತಿರುವ ರೀತಿ ಸಂವಿಧಾನಕ್ಕೆ ಹಾನಿಕಾರಕವಾಗಿದೆ ಎಂದು ಆರೋಪಿಸಿದರು.

Continue Reading

ಇಂಧನ ಬಳಕೆ ಕಡಿಮೆಗೆ ಪ್ರಧಾನಿ ಸಲಹೆ : ಡಿಸಿಎಂ ಡಿಕೆಶಿ ತಿರುಗೇಟು

ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು ಎಂದು ತಿರುಗೇಟು ನೀಡಿದರು. ಬಿಜೆಪಿ ಶಾಸಕರು, ನಾಯಕರು, ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ […]

Continue Reading