ಬೆಂಗಳೂರು | ನಗ್ನ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮನೆ ಬಾಗಿಲು ಬೀಗ ಹಾಕಿದ್ದ ಕಾರಣ ಅದನ್ನು ಹೊಡೆದು ಒಳಗೆ ಹೋಗಿ ನೋಡಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಆಕೆಯ ದೇಹವು ಬೆತ್ತಲೆಯಾಗಿ, ರಕ್ತದ ಮಡುವಿನಲ್ಲಿ ಮತ್ತು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಕನಿಷ್ಠ ಮೂರು ದಿನಗಳ ಹಿಂದೆ ಆಕೆ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಿ, ಆಕೆಯ ಮನೆಯನ್ನು ಶೋಧ ಮಾಡಿದ್ದು, ಈ ವೇಳೆ ರೂಂ ತುಂಬಾ ಪೇಪರ್ ತುಂಡುಗಳನ್ನು ಹರಿದು ಹಾಕಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಆಕೆಯ ಕೈ […]

Continue Reading

ಒಂದೇ ಸ್ಕೂಟಿಯಲ್ಲಿ 6 ಮಕ್ಕಳ ಸಂಚಾರದ ಫೋಟೋ ವೈರಲ್ ; ಮಾಲೀಕರ ವಿರುದ್ಧ ದಾಖಲಾಯಿತು FIR

ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಮಾಗಡಿ ರಸ್ತೆ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಮಾಲೀಕ ಅಜ್ವರ್ ಪಾಷಾ ಬಾಪೂಜಿ ನಗರದ ನಿವಾಸಿ ಎಂದು ಗೊತ್ತಾಗಿದೆ. ವಿಳಾಸ ಆಧರಿಸಿ ಮನೆ ಬಳಿ ಹೋದಾಗ ಮನೆ ಇಲ್ಲದಿರುವುದು ತಿಳಿದುಬಂದಿದೆ. ವೈರಲ್ ಆಗುತ್ತಿರುವ ಪೋಸ್ಟ್​​​ನಲ್ಲಿ ಬೈಕ್ ಚಾಲನೆ ಮಾಡುತ್ತಿರುವ ಬಗ್ಗೆ ಎಲ್ಲಿಯೂ ವಿಡಿಯೋ ದೊರೆತಿಲ್ಲ. ಮಕ್ಕಳನ್ನು ವಾಹನದಲ್ಲಿ ಕೂರಿಸಿಕೊಂಡು ಫೋಟೋ ಸೆರೆಹಿಡಿಯಲು ಈ ರೀತಿ ಮಾಡಿರಬಹುದಾ? ಎಂಬುದರ […]

Continue Reading

ಜನಗಣತಿ ಕರ್ತವ್ಯಕ್ಕೆ ಅಡ್ಡಿ ; ಮಹಿಳಾ ಸಿಬ್ಬಂದಿಗೆ ಅವಮಾನ ದಾಖಲಾಯಿತು FIR

ವಾರ್ಡ್ ಸಂಖ್ಯೆ 43ರಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ. ನಗರದ ಸುಲ್ತಾನಪಾಳ್ಯದ ಪೇರಿ ಮೊನಾರ್ಕ್ ಅಪಾರ್ಟ್‌ಮೆಂಟ್‌ಗೆ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ನಿವಾಸಿಯೊಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ಏಪ್ರಿಲ್ 25ರಂದು ಮೇಲ್ವಿಚಾರಕರಾದ ಶ್ರೀಮತಿ ರಶ್ಮಿ ಆರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದಾಗ, ಆ ನಿವಾಸಿಯು ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಮಹಿಳಾ ಸಿಬ್ಬಂದಿಯೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ. ಸಿಬ್ಬಂದಿ […]

Continue Reading

ಕುವೆಂಪು ವಿ.ವಿ ಹಗರಣ ; ತನಿಖೆಗೆ ಸಮಿತಿ

ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಒದಗಿಸಲು 2022ನೇ ಜನವರಿಯಲ್ಲಿ ರಾಜ್ಯ ಸರ್ಕಾರ 75 ಕೋಟಿ ಅನುದಾನ ಒದಗಿಸಿತ್ತು. ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ‘ಸ್ಮಾರ್ಟ್‌ಕ್ಲಾಸ್‌’ಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಮಾರುಕಟ್ಟೆ ಬೆಲೆಗಿಂತ ಅಧಿಕ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಿ ವಂಚಿಸಲಾಗಿದೆ. ಭೌತಿಕ ಪರಿಶೀಲನೆ ನಡೆಸದೆ, ನಗದು ರಸೀದಿ ಪಡೆಯದೆ ಗುತ್ತಿಗೆ ಕಂಪನಿಯೊಂದಕ್ಕೆ 12.99 ಕೋಟಿ ಪಾವತಿಸಲಾಗಿದೆ ಎಂದು ಕೆಲವರು ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಈ ಕುರಿತು ಈಗಾಗಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶ ಎಚ್.ಬಿ.ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸ ಲಾಗಿತ್ತು. […]

Continue Reading

ಚಿರತೆಯಿಂದ ಅತ್ತೆಯನ್ನು ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅತ್ತೆಯನ್ನ ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ ಸೂಚಿಸಿದ್ದಾರೆ. ಅತ್ತೆ-ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನ ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ […]

Continue Reading

ಶತಮಾನದ ಶಾಲೆ ಬಲವರ್ಧನೆಗೆ 31 ಶಿಫಾರಸು ; ಪಾರಂಪರಿಕ ಶಾಲೆಗಳೆಂದು ಘೋಷಿಸಲು ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ಕೆ.ಪಿ. ಸುರೇಶ್ ಉಪ್ಪಸ್ಥಿತರಿದ್ದರು. ‘ಶಾಲೆಗಳಿಗೆ ಐತಿಹಾಸಿಕ ಮಹತ್ವ’ಶತಮಾನ ಕಂಡ ಶಾಲೆಗಳಿಗೆ ಐತಿಹಾಸಿಕ ಮಹತ್ವವಿದೆ. ಅವು ಅವಕಾಶ ವಂಚಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣದ ಮೂಲಕ ಬಿಡುಗಡೆಯ ದಾರಿ ತೋರಿವೆ.ಸಾಮಾಜಿಕ ಬದಲಾವಣೆಯ ಹರಿಕಾರರು ನಡೆಸಿದ ಅಭಿಯಾನದ ಮೂರ್ತ ಸ್ವರೂಪವೇ ಈ ಶಾಲೆಗಳು, ನಾಲ್ಕು ತಲೆಮಾರುಗಳ ಬಳಿಕ ಆ ಶಾಲೆಗಳು ತನ್ನ ಅರ್ಥಪೂರ್ಣತೆಯನ್ನು ಕಳೆದುಕೊಂಡು, ಅಂಚಿಗೆ ಸರಿಯುವುದೆಂದರೆ ನಮ್ಮ ಪರಂಪರೆಯ ಆಶಯಕ್ಕೆ ಊನ ಬಂದಿದೆ ಎಂದರ್ಥ. ಜಾಗತೀಕರಣದ ವೇಗೋತ್ಕರ್ಷದಲ್ಲಿ ಅವು ಅಪ್ರಸ್ತುತವಾಗದಂತೆ […]

Continue Reading

ಪೊಲೀಸ್ ಇಲಾಖೆ ಆಸ್ತಿ ಕಬಳಿಕೆ ಯತ್ನ ; ಶಿವಮೊಗ್ಗದ ಶ್ರೀನಾಥ್‌ ನಗರಗದ್ದೆ ಸೇರಿ ಮೂವರ ಬಂಧನ

ಎಂ.ಆರ್. ಮಹಾಲಕ್ಷ್ಮೀ ಮೊದಲನೇ ಆರೋಪಿ, ಆರ್.ಕೃಷ್ಣಮೂರ್ತಿ ಎರಡನೇ ಆರೋಪಿ ಮತ್ತು ಶ್ರೀನಾಥ್ ನಗರಗದ್ದೆ ಅವರು ಮೂರನೇ ಆರೋಪಿಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧವೂ ಎಫ್‌ಐಆ‌ರ್ ದಾಖಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್‌ಪೈರ್‌ ಎಂ.ಕುಮಾರ್ ನೀಡಿದ ದೂರಿನನ್ವಯ ಮಾ.11ರಂದು ಪ್ರಕರಣ ದಾಖಲಾಗಿತ್ತು. ವಸತಿ ಗೃಹದಲ್ಲಿ ವಾಸವಾಗಿದ್ದ ಇನ್ಸ್‌ಪೆಕ್ಟ‌ರ್ ಕುಮಾ‌ರ್ ಅವರ ಮನೆಗೆ ಬೆಸ್ಕಾಂ ಅಧಿಕಾರಿಗಳು ನೀಡಿದ್ದ ವಿದ್ಯುತ್ ಬಿಲ್‌ನಲ್ಲಿ ಮಹಾಲಕ್ಷ್ಮೀ ಹೆಸರು ನಮೂದಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.

Continue Reading

ಜನಸಾಮಾನ್ಯರಿಗೆ ಜೀವನ ನಡೆಸುವ ಚಿಂತೆ ; ಅತ್ತ ವಿಧಾನಸೌಧದಲ್ಲಿ IPL ಟಿಕೆಟ್ ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು!

ಪ್ರತಿ ಶಾಸಕರಿಗೆ 3 ಐಪಿಎಲ್ ಟಿಕೆಟ್ ಉಚಿತ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ವಿಧಾನಸೌಧದಲ್ಲಿ ಶಾಸಕರ ಪಿಎಗಳು ನಿಂತಿದ್ದಾರೆ. ಸಭಾಧ್ಯಕ್ಷರ, ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ. ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಶಾಸಕರಿಗೆ ಚಲಮರೂ ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಜನರು ಸಿಲಿಂಡರ್ ಇಲ್ಲದೆ ಕಂಗಾಲು ಆಗಿದ್ದಾರೆ. ಆದರೆ ಶಾಸಕರಿಗೆ ಕ್ರಿಕೆಟ್ ಪಂದ್ಯಕ್ಕಾಗಿ ಟಿಕೆಟ್ ಪಡೆದು ಮೋಜು ಮಸ್ತಿ ಮಾಡುತ್ತಿದ್ದಾರೆ.ಸಿಲಿಂಡರ್ ಇಲ್ಲದೆ ಜನರ ಪರದಾಟಕಳೆದ ಕೆಲವು ದಿನಗಳಿಂದ […]

Continue Reading

ಕೈಚೀಲ ಖರೀದಿ ಅವ್ಯವಹಾರ ; ರೋಹಿಣಿ ಸಿಂಧೂರಿಗೆ ಸಂಕಷ್ಟ

ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ಕ್ಯಾನ್ಸರ್, ಪ್ಲೇಗ್ ಇದ್ದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಹೈಕೋರ್ಟ್, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ನಾಲ್ಕು ವಾರಗಳೊಳಗೆ ಅನುಮತಿ ನೀಡಿ, ರೋಹಿಣಿ ಸಿಂಧೂರಿ […]

Continue Reading

ಉಚಿತ ಮಹಿಳಾ ಟೈಲರಿಂಗ್ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ : 08/04/2026 ಬುಧವಾರ ಬೆಳಿಗ್ಗೆ 9.30 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕಾಗಿ ಈ ಮೂಲಕ ಸೂಚಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ : 08/04/2026 ರೊಳಗೆ ಸಂಸ್ಥೆಯನ್ನು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050/ 9591514154/ 9686248369/ 6363139123/ 9505894247 ಗಳನ್ನು ಸಂಪರ್ಕಿಸಿ ತಮ್ಮ […]

Continue Reading