ಶತಮಾನದ ಶಾಲೆ ಬಲವರ್ಧನೆಗೆ 31 ಶಿಫಾರಸು ; ಪಾರಂಪರಿಕ ಶಾಲೆಗಳೆಂದು ಘೋಷಿಸಲು ಆಗ್ರಹ

ಬೆಂಗಳೂರು

ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶತಮಾನ ಕಂಡ ಶಾಲೆಗಳ ಕುರಿತು ಸಿದ್ಧಪಡಿಸಿದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಇಂತಹ 3,222 ಶಾಲೆಗಳ ಉಳಿವು ಹಾಗೂ ಬಲವರ್ಧನೆಗೆ 31 ಶಿಫಾರಸು ಮಾಡಿದೆ.

ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು 206 ಪುಟಗಳಿರುವ ವರದಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಿದರು.

ಕೆ.ಪಿ. ಸುರೇಶ್ ಅವರು ಈ ವರದಿ ಸಿದ್ಧಪಡಿಸಿದ್ದಾರೆ.’ಶತಮಾನ ಕಂಡ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ರಾಜ್ಯ ಸರ್ಕಾರ ಘೋಷಿಸಬೇಕು. ಅವುಗಳಲ್ಲಿ ನಾಡಿನ ಹಲವಾರು ಮಹನೀಯರು ಓದಿದ್ದಾರೆ. ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಿ.ವಿ. ಗುಂಡಪ್ಪ, ಮೊಳಹಳ್ಳಿ ಶಿವರಾವ್, ಕಾರ್ನಾಡ್ ಸದಾಶಿವರಾವ್, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಅಲೂರು ವೆಂಕಟರಾಯರು, ದ.ರಾ. ಬೇಂದ್ರೆ, ಕುವೆಂಪು, ಶಾಂತವೇರಿ ಗೋಪಾಲಗೌಡ, ಜಿ.ಎಸ್. ಶಿವರುದ್ರಪ್ಪ, ಪ್ರೊ. ಎಂ.ಸಿ. ನಂಜುಂಡಸ್ವಾಮಿ, ಜೀ.ಶಂ. ಪರಮಶಿವಯ್ಯ, ಉತ್ತಂಗಿ ಚನ್ನಪ್ಪ, ಯು.ಆರ್. ಅನಂತಮೂರ್ತಿ, ಜನರಲ್ ಕೆ.ಎಂ. ಕಾರ್ಯಪ್ಪ, ದೇವರಾಜ ಅರಸು, ಎಸ್. ಬಂಗಾರಪ್ಪ, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮೊದಲಾದ ಧೀಮಂತರು ಓದಿದ ಶಾಲೆಗಳನ್ನಾದರೂ ಪುರುಷೋತ್ತಮ ಬಿಳಿಮಲೆ ಅವರು ವರದಿಯ ಪ್ರತಿಯನ್ನು ಮಧು ಬಂಗಾರಪ್ಪ ಅವರಿಗೆ ಸಲ್ಲಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಹಾಗೂ ಕೆ.ಪಿ. ಸುರೇಶ್ ಉಪ್ಪಸ್ಥಿತರಿದ್ದರು.

‘ಶಾಲೆಗಳಿಗೆ ಐತಿಹಾಸಿಕ ಮಹತ್ವ’ಶತಮಾನ ಕಂಡ ಶಾಲೆಗಳಿಗೆ ಐತಿಹಾಸಿಕ ಮಹತ್ವವಿದೆ. ಅವು ಅವಕಾಶ ವಂಚಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣದ ಮೂಲಕ ಬಿಡುಗಡೆಯ ದಾರಿ ತೋರಿವೆ.ಸಾಮಾಜಿಕ ಬದಲಾವಣೆಯ ಹರಿಕಾರರು ನಡೆಸಿದ ಅಭಿಯಾನದ ಮೂರ್ತ ಸ್ವರೂಪವೇ ಈ ಶಾಲೆಗಳು, ನಾಲ್ಕು ತಲೆಮಾರುಗಳ ಬಳಿಕ ಆ ಶಾಲೆಗಳು ತನ್ನ ಅರ್ಥಪೂರ್ಣತೆಯನ್ನು ಕಳೆದುಕೊಂಡು, ಅಂಚಿಗೆ ಸರಿಯುವುದೆಂದರೆ ನಮ್ಮ ಪರಂಪರೆಯ ಆಶಯಕ್ಕೆ ಊನ ಬಂದಿದೆ ಎಂದರ್ಥ.

ಜಾಗತೀಕರಣದ ವೇಗೋತ್ಕರ್ಷದಲ್ಲಿ ಅವು ಅಪ್ರಸ್ತುತವಾಗದಂತೆ ಉಳಿಸಿ ಬೆಳೆಸುವುದು ಪ್ರಜಾಸತ್ತಾತ್ಮಕ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ. ಈ ಶಾಲೆಗಳನ್ನು ಪುನಶ್ಚತನಗೊಳಿಸುವುದು ಸಂವಿಧಾನಕ್ಕೆ ಸಲ್ಲಿಸುವ ಗೌರವ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಸರ್ಕಾರ ಅಭಿವೃದ್ಧಿ ಮಾಡಬೇಕು’ ಎಂದು ವರದಿಯಲ್ಲಿ ತಿಳಿಸಲಾಗಿದೆ.’ಸರ್ಕಾರವು ಕನಿಷ್ಠ ಜಿಲ್ಲೆಗೊಂದರಂತೆ 31 ಶಾಲೆಗಳನ್ನು ಪಾರಂಪರಿಕ ಶಾಲೆಗಳನ್ನಾಗಿ ರೂಪಿಸಬೇಕು. ಅಲ್ಲಿಗೆ ಬರುವ ಮಕ್ಕಳಿಗೆ ಮಹನೀಯರ ಸಾಧನೆಗಳನ್ನು ಪರಿಚಯಿಸಬೇಕು.

ಆ ಶಾಲೆ ಯಾರ ಹೆಸರಲ್ಲಿದೆಯೋ ಪ್ರಮುಖ ಶಿಫಾರಸುಗಳು ಶಿಕ್ಷಣ ಇಲಾಖೆಗೆ ತನ್ನ ವಿಶಿಷ್ಟ ಶಾಲೆಗಳ ಚಾರಿತ್ರಿಕ ಮಹತ್ವ ಮತ್ತು ಪರಂಪರೆಯ ಮೌಲ್ಯದ ಬಗ್ಗೆ ಅರಿವಿರುವ ಯಾವ ಪುರಾವೆಯೂ ಇಲ್ಲ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಶತಮಾನ ಕಂಡ ಶಾಲೆಗಳ ಬಗ್ಗೆ ನಿರ್ದಿಷ್ಟ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು.

ಶತಮಾನ ಕಂಡ ಉನ್ನತ ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನದ ಪ್ರಯೋಗಾಲಯ, ಇತಿಹಾಸ, ಪರಿಸರದ ವಸ್ತು ಸಂಗ್ರಹಾಲಯವನ್ನು ಒದಗಿಸಬೇಕು. ಇವುಗಳನ್ನು ವಿಶೇಷ ಆದ್ಯತಾ ಶಾಲೆಗಳಾಗಿಪರಿಗಣಿಸಿ, ಅಗತ್ಯ ಶಿಕ್ಷಕರ ಖಾಯಂ ನೇಮಕಾತಿಗೆ ಕ್ರಮವಹಿಸಬೇಕು.

ಇಂತಹ ಶಾಲೆಗಳ ಸಂಖ್ಯೆ ಏರುತ್ತಲೇ ಇದ್ದು. ಅವುಗಳ ಗುರುತಿಸುವಿಕೆ ಮತ್ತು ಅಭಿವೃದ್ಧಿ ನಿರಂತರ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕುಈ ಶಾಲೆಗಳ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗೆ ಅನುಮತಿ ನೀಡುವ ಪ್ರಕ್ರಿಯೆ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕು.

ಅವರ ಕುರಿತಾದ ಒಂದು ಸಣ್ಣ ವಸ್ತು ಸಂಗ್ರಹಾಲಯವೂ ಇರಬೇಕು. ಆಗ ಅಲ್ಲಿ ಓದುವ ಮಕ್ಕಳಿಗೆ ಪರಂಪರೆಯ ಅರಿವಾಗುತ್ತದೆ. ಆಧುನಿಕ, ಜಾತ್ಯತೀತ ವರದಿ ಸಿದ್ಧಪಡಿಸುವ ವೇಳೆ ಕಂಡುಬಂದ ಅಂಶಗಳುಶತಮಾನ ಕಂಡ ಶಾಲೆಗಳಿಗೆ ಹಿಂದೆ ಸರ್ಕಾರವು ಸುಮಾರು 25 ಕೋಟಿ ಬಿಡುಗಡೆ ಮಾಡಿದ್ದರಿಂದ 240 ಶಾಲೆಗಳು ಅಭಿವೃದ್ಧಿಯಾಗಿವೆ.

ಆದರೆ, ಈ ಯೋಜನೆ ಮುಂದುವರಿಯಲಿಲ್ಲ ಕಳೆದ ಹತ್ತು ವರ್ಷಗಳಲ್ಲಿ ಮುಚ್ಚಿ ಹೋದ ಸರ್ಕಾರಿ ಶಾಲೆಗಳ ಹಿಂದಿರುವ ಕಾರಣಗಳ ಬಗ್ಗೆ ಯಾವುದೇ ಗಂಭೀರ ಅಧ್ಯಯನಗಳು ನಡೆದಿಲ್ಲ. ವರದಿಗಳೂ ಲಭ್ಯವಿಲ್ಲ.ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಕಂಡಿದೆ. ಇದಕ್ಕಿರುವ ಕಾರಣಗಳನ್ನು ಆಳವಾಗಿ ಪರಿಶೀಲಿಸಲಾಗಿಲ್ಲ.

ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಲ್ಲಿ ಶಿಕ್ಷಣ ಇಲಾಖೆ. ಅಳಿವಿನಂಚಿನಲ್ಲಿರುವ ಶಾಲೆಗಳ ಹಿತಾಸಕ್ತಿಯನ್ನು ಗಮನಿಸಿದಂತಿಲ್ಲ.ಇತ್ತೀಚೆಗೆ ದ್ವಿಭಾಷಾ ಮಾಧ್ಯಮವನ್ನು ಸಾವಿರಾರು ಶಾಲೆಗಳಲ್ಲಿ ಆರಂಭಿಸಲಾಗಿದ್ದು, ಇದು ಶಾಲಾ ದಾಖಲಾತಿಯಲ್ಲಿ ಸುಧಾರಣೆಗೆ ಕಾರಣವಾಗಿದೆ.

ಹಲವಾರು ಶಾಲೆಗಳಲ್ಲಿ ದಾಖಲಾತಿ ಆಯಾ ತರಗತಿಗಳಲ್ಲಿ ಒಂದಂಕಿಗೆ ಬಂದಿದ್ದು, ಇವು ಮುಂದಿನ ವರ್ಷಗಳಲ್ಲಿ ಮುಚ್ಚಿ ಹೋಗುವ ಸಾಧ್ಯತೆ ನಿಚ್ಚಳವಾಗಿದೆ.ಶಿಕ್ಷಣ ನೀಡುವ ಆಶಯದ ಈ ಶಾಲೆಗಳು ರಾಜ್ಯದ ಇತಿಹಾಸದ ಅಸ್ಮಿತೆಯ ಭಾಗವಾಗಬೇಕು’ ಎಂದು ವರದಿ ಶಿಫಾರಸು ಮಾಡಿದೆ.

ಆಡಳಿತಾತ್ಮಕ ಶಿಫಾರಸು:

‘ಶತಮಾನ ಕಂಡ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಇಲಾಖೆಯಲ್ಲಿ ಒಂದು ಪ್ರತ್ಯೇಕ ಕೋಶ ಸ್ಥಾಪಿಸಬೇಕು. ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಈ ಶತಮಾನ ಕಂಡ ಶಾಲೆಗಳ ಸಮಗ್ರ ಅಧ್ಯಯನ ಕೈಗೊಳ್ಳಬೇಕು. ಈ ಶಾಲೆಗಳ ಚರಿತ್ರೆಯ ಹಿನ್ನೆಲೆಯಲ್ಲಿ ಜಿಲ್ಲೆ, ತಾಲ್ಲೂಕುಗಳಲ್ಲಿ ಶಾಲಾ ಪರಂಪರೆ ಕುರಿತ ಪ್ರತ್ಯೇಕ ದಾಖಲಾತಿ, ಪ್ರದರ್ಶನ, ಪ್ರಕಟಣೆಗಳನ್ನು ಕೈಗೊಳ್ಳಬೇಕು’ ಎಂದು ಹೇಳಲಾಗಿದೆ.

20190 ಸುತ್ತೋಲೆಯರ್ಲ್ಲೇ ಶತಮಾನ ಕಂಡ ಶಾಲೆಯ ಚರಿತ್ರೆ ಇತ್ಯಾದಿ ವಿವರಗಳನ್ನೊಳಗೊಂಡ ಪುಸ್ತಕ ಅಥವಾ ವಿಡಿಯೊ ಮಾಡಬೇಕೆಂದು ತಿಳಿಸಲಾಗಿದೆ. ಅದ್ದರಿಂದ ಸಲಹೆಯನ್ನು ಅಂಗೀಕರಿಸಿ, ಪ್ರತಿ ಶಾಲೆಯ ಪರಂಪರೆಯ ವಿವರಗಳನ್ನೊಳಗೊಂಡ ಪ್ರಕಟಣೆಗಳನ್ನು ಹೊರಡಿಸಬೇಕು.

ಅವುಗಳು ಜಾಲತಾಣವೊಂದರ ಮೂಲಕ ಆಸಕ್ತರಿಗೆ ದೊರೆಯುವಂತೆ ಮಾಡಬೇಕು. ಶೈಕ್ಷಣಿಕ ಇತಿಹಾಸವು ಅಧ್ಯಯನ ಯೋಗ್ಯವೆಂದು ಶಿಕ್ಷಣ ಇಲಾಖೆ ಭಾವಿಸಬೇಕು’ ఎందు ಶಿಫಾರಸು ಮಾಡಲಾಗಿದೆ.

Author