ಶಿವಮೊಗ್ಗದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯ ದರೋಡೆ

ದಕ್ಷಿಣ ಕನ್ನಡ

ಶಿವಮೊಗ್ಗದಿಂದ ಮoಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ಅವರ ಬಳಿ ಇದ್ದ 1.15 ಕೋಟಿ ನಗದು ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿದ ಬಗ್ಗೆ ಅಲ್ಲಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಿವಮೊಗ್ಗದ ಸತ್ಯನಾರಾಯಣ ಹಣಕಳೆದುಕೊಂಡವರು.ಶಿವಮೊಗ್ಗದ ಗಾಂಧಿ ಬಜಾರ್ ಬಜಾರ್ ನಿವಾಸಿ ನಾಗರಾಜ್ ತಮ್ಮ ಸಹಚರ ಸತ್ಯನಾರಾಯಣ ಬಳಿ ಅ.23ರಂದು ಹಣವಿದ್ದ ಎರಡು ಬ್ಯಾಗ್‌ಗಳನ್ನು ನೀಡಿ ದ್ದರು.

ಹಣದೊಂದಿಗೆ ಮಂಗಳೂರಿಗೆ ತೆರಳಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರಲ್ಲಿ ತಂಗುವಂತೆ ಸೂಚಿಸಿದ್ದರು. ಸತ್ಯನಾರಾಯಣ ಅ.28ರಂದು ಮುಂಜಾನೆ 6 ಗಂಟೆಗೆ ಮಂಗಳೂರು ತಲುಪಿ ಉಪಾಹಾರ ಸೇವಿಸಲು ಹೋಟೆಲ್‌ಗೆ ನಡೆದುಕೊಂಡುಹೋಗುತ್ತಿದ್ದರು.

ಈ ವೇಳೆ ಮುಖಗವಸು ‘ಧರಿಸಿಕೊಂಡು ಕಪ್ಪು ಬಣ್ಣದ ಕಾರಿನಲ್ಲಿ ಬಂದ ನಾಲ್ವರು, ನನ್ನನ್ನು ಕಾರಿನ ಒಳಗೆ ತಳ್ಳಿ ಎರಡು ತಾಸು ನಗರದ ವಿವಿಧ ಪ್ರದೇಶಗಳಲ್ಲಿ ಓಡಾಡಿಸಿದರು. ಹಣ ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡ ನಂತರ ಕಾವೂರು ಬಸ್ ನಿಲ್ದಾಣ ಬಳಿಯ ಗುಡ್ಡಪ್ರದೇಶವೊಂದ ರಲ್ಲಿ ತಳ್ಳಿ ಹೋಗಿದ್ದಾರೆ. ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ…

Author