ಶಿವಮೊಗ್ಗ ತಾಲೂಕಿನ ಕುಂಸಿ ಹೋಬಳಿಯ ಬಾಳೆಕೊಪ್ಪ ವ್ಯಾಪ್ತಿಯ ಚಿಕ್ಕಮರಸ ಗ್ರಾಮದಲ್ಲಿ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇಲ್ಲಿನ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮಕ್ಕೆ ಸೆ. 20 ರಂದು ಸಾಮಾನ್ಯ ಸಭೆಯ ಚಾಲನೆ ನೀಡಿದರು.
ವಿಶ್ವ ವಿದ್ಯಾಲಯದ 12 ವಿದ್ಯಾರ್ಥಿಗಳು ಮುಂದಿನ ಮೂರು ತಿಂಗಳಗಳ ಕಾಲ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಧಿಯಲ್ಲಿ ವಿವಿಧ ತಳಿಗಳನ್ನು ಗ್ರಾಮದಲ್ಲಿ ಬೆಳೆಯುವುದು, ಬೆಳೆ ಪ್ರಾತ್ಯಕ್ಷಿಕೆ,ಗುಂಪು ಚರ್ಚೆ, ಕೃಷಿ ವಸ್ತು ಪ್ರದರ್ಶನ , ಆಧುನಿಕ ತಂತ್ರಜ್ಞಾನಗಳ ಮಾಹಿತಿ, ಕೈ ತೋಟ ನಿರ್ಮಾಣ ಹಾಗೂ ಮಾಹಿತಿ ಕೇಂದ್ರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ಚಿಕ್ಕಮರಸ ಗ್ರಾಮದಲ್ಲಿ ರೈತರಿಗಾಗಿ ಮಣ್ಣು ಪರೀಕ್ಷೆ, ನೀರು ಪರೀಕ್ಷೆ, ಬೀಜೋಪಚಾರ, ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಿದ್ದಾರೆ.
ಇದರೊಂದಿಗೆ ವಿವಿಧ ಶಿಬಿರಗಳನ್ನು ಸಹ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು. ವಿಶ್ವ ವಿದ್ಯಾಲಯದ ವಿಜ್ಞಾನಿಗಳು ನಿರಂತರವಾಗಿ ಭೇಟಿ ನೀಡಿ ರೈತರಿಗೆ ಮಾಹಿತಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಪ್ರಮುಖ ಬೆಳೆಗಳಾದ ಅಡಿಕೆ, ಭತ್ತ, ಶುಂಠಿ, ಮೆಕ್ಕೆ ಜೋಳ ಸೇರಿದಂತೆ ಮುಂತಾದ ಬೆಳೆಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಗುಂಪು ಚರ್ಚೆಗಳ ಮೂಲಕ ರೈತರಿಗೆ ಅರಿವು ಮೂಡಿಸಲಿದ್ದಾರೆ. ಗ್ರಾಮದ ಹಿರಿಯರಾದ ಧರ್ಮಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಕೃಷಿ ವಿದ್ಯಾರ್ಥಿಗಳಿಗೆ ನಮ್ಮ ಅನುಭವವನ್ನು ಹಂಚಿಕೊಳ್ಳವ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳೊಣ” ಎಂದರು.
ಹಾಗೂ ಊರಿನ ಬುಧ್ಧಿವಂತರಾದ ಪಿ. ಮಲ್ಲೇಶಪ್ಪನವರು ಮಾತಾನಾಡಿ ” ರೈತರು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳು ರೈತರಿಗೆ ತಮ್ಮ ಜ್ಞಾನವನ್ನು ಧಾರೆ ಎರೆಯುವ ಅವಕಾಶ ಇದಾಗಿದೆ” ಎಂದರು.
ಶಿಬಿರದ ರೂಪುರೇಷೆಗಳ ಕುರಿತು ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಕುಮಾರ್ ರೈತರೊಂದಿಗೆ ಮಾಹಿತಿ ಹಂಚಿಕೊಂಡರು. ಹಾಗೂ ಕಾರ್ಯಕ್ರಮದಲ್ಲಿ ಎಮ್ ಎನ್ ಎಮ್ ಮಲ್ಲೇಶಪ್ಪ, ಎ ಕೆ ಮಲ್ಲೇಶಪ್ಪ, ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ್ ಸೇರಿದಂತೆ ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.





