ತೀರ್ಥಹಳ್ಳಿ | ಬಸವನಗದ್ದೆ ಶಾಲೆಯಲ್ಲಿ ಗಣಪತಿ ಮಹೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ

ಶಿವಮೊಗ್ಗ

ತೀರ್ಥಹಳ್ಳಿ ಈ ದಿನ ಬಸವನಗದ್ದೆ ಶಾಲೆಯಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಬಸವನಗದ್ದೆ ಹಾಗೂ ಲಯನ್ಸ್ ಕ್ಲಬ್ ಅನ್ನಪೂರ್ಣ ಬೆಂಗಳೂರು ವತಿಯಿಂದ ಗಣಪತಿ ಮಹೋತ್ಸವದ ಅಂಗವಾಗಿ ಪ್ರಪ್ರಥಮವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು ಹಾಗೂ ವಾಸನ್ ಐ ಕೇರ್ ಶಿವಮೊಗ್ಗ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,

ರಕ್ತದಾನ ಶಿಬಿರದಲ್ಲಿ ಸುಮಾರು ಇಪ್ಪತ್ತ್ಮೂರು ಜನ ಯುವಕರು ಗ್ರಾಮಸ್ಥರು ರಕ್ತದಾನ ಮಾಡಿರುತ್ತಾರೆ. 82. ಜನರಿಗೆ ಉಚಿತ ನೇತ್ರ ತಪಾಸಣೆ ಮಾಡಲಾಯಿತು.ಈ ರಕ್ತದಾನದ ಒಂದು ಆಯೋಜನೆಯನ್ನು ವಿದ್ಯಾಗಣಪತಿ ಸಮಿತಿ ಅವರು ಹಮ್ಮಿಕೊಂಡಿದ್ದು, ಶಿವಮೊಗ್ಗದ ಆಶಾ ಜ್ಯೋತಿ ಫೌಂಡೇಶನ್ ಅವರು ರಕ್ತವನ್ನು ಸಂಗ್ರಹಿಸಿಕೊoಡಿರುತ್ತಾರೆ.

ಇದೊಂದು ಸಾಮಾಜಿಕ ಜನಪರ ಜೀವಪರ ಒಂದು ಸೇವೆಯಾಗಿದ್ದು,ಈ ಒಂದು ಕಾರ್ಯಕ್ರಮದ ಆಯೋಜನೆಯಲ್ಲಿ ಲಯನ್ ಕನಕರಾಜ್ ಕಳ್ಳಿಗದ್ದೆ ಹಾಗೂ ಹಾಗೂ ಶ್ರೀ ವಿದ್ಯಾಗಣಪತಿ ಸಮಿತಿ ಅಧ್ಯಕ್ಷರಾದ ಸುಬ್ರಮಣ್ಯ, ಕಾರ್ಯದರ್ಶಿ ರಾಮಕೃಷ್ಣ ಪ್ರಮೋದ್ ಮೋಹನ್ ಪ್ರದೀಪ್ ಸುನೀಲ್ ಆದರ್ಶ ನಿತಿನ್ ಮಂಜುನಾಥ , ಸಾಗರ್ ಅರುಣ್,ಅವರು ಉಪಸ್ಥಿತರಿದ್ದರು.ಉಪನ್ಯಾಸಕರು ಶರಶ್ಚಂದ್ರ, ಲಯನ್ ರವಿಕುಮಾರ್,ಲಯನ್ ಮನೋಹರ್ ರೆಡ್ಡಿ, ಲಯನ್ ರಾಜು ಲಯನ್ಸ್ ಬೆಂಗಳೂರು ರವರು ಸೇವಾಕಾರ್ಯದಲ್ಲಿ ಭಾಗವಹಿಸಿದರು.

ಆಶಾಜ್ಯೋತಿ ಫ಼ೌಂಡೆಷನ್ ನ ಸ್ವಾಮಿ ಹಾಗೂ ವೈದ್ಯರ ತಂಡ ಹಾಗೂ ವಾಸನ್ ಐ ಕೇರ್ ಶಿವಮೊಗ್ಗ ಡಾ// ವಿನಯ್, ಡಾ// ಕಿರಣ್ ಹಾಗು ತಂಡ ದವರು ಉಪಸ್ಥಿತರಿದ್ದರು‌. ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕಿ ಅನಿತಸೂರ್ಯ ರವರು ಸರ್ವರನ್ನು ಸ್ವಾಗತಿಸಿ ಅಭಿನಂದಿಸಿದರು.

ಗಣಪತಿ ಮಹೋತ್ಸವ ಬರೀ ಮನೋರಂಜನ ಕಾರ್ಯಕ್ರಮವಾಗದೇ ಜನಪರ ಜೀವಪರ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವಾಗಲಿ.ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಯನ್ ಕನಕರಾಜ್ ರವರು ನಮ್ಮ ಈ ಚಿಕ್ಕ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಸಿರುವುದು ತುಂಬಾ ಹೆಮ್ಮೆ ಎನಿಸಿದೆ.ಮನರಂಜನೆ ಮಾತ್ರ ಗಣೇಶೋತ್ಸವ ಆಗಬಾರದು. ಇಂದಿನ ಯುವ ಸಮೂಹವನ್ನು ಸರಿಯಾದ ಮಾರ್ಗದಲ್ಲಿ‌ ಮುನ್ನಡೆಸುವುದು ಕೂಡ ಹಿರಿಯರ ಕರ್ತವ್ಯವಾಗಿದೆ.

ಮುಂದಿನ ದಿನಗಳಲ್ಲೂ ಈ ರೀತಿಯ ಸಾಮಾಜಿಕ ಕಾರ್ಯಗಳನ್ನು ಎಲ್ಲರೂ ಸೇರಿ ಮಾಡೋಣ ಎಂದು ಹೇಳಿದರು. ರಕ್ತದಾನ ಮಾಡಿದವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.ಶಾಲಾ ಎಸ್ ಡಿ ಎಮ್ ಸಿ ಸದಸ್ಯರಾದ ಕಾವ್ಯ ಪ್ರವೀಣ್, ತೇಜಾಕ್ಷಿ, ದಿನೇಶ್, ಅಶೋಕ್ ಕುಮಾರ್, ಸ್ವಾತಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸರೋಜ ಈಶ್ವರ ರವರು ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು.

ಶಾಲಾ ಮಕ್ಕಳಿಗೆ ಮಹಿಳೆಯರಿಗೆ ಪುರುಷ ವಿಭಾಗದ ಆಟೋಟ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಲಾಯಿತು.ಸರ್ವರನ್ನು ಮುಖ್ಯಶಿಕ್ಷಕಿ ಅನಿತ ವಂದಿಸಿದರು.

Author