ಶಿವಮೊಗ್ಗದ ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿ ನಾಗರಿಕರು ಸಮಸ್ಯೆ ಅನುಭವಸಿಲು ಸಾಧ್ಯವಂತೆ? ಈ ಸಂಬಂಧ ಅಧಿಕಾರಿಗಳು ಮಾತ್ರ ಗಪ್ ಚುಪ್! ಶಿವಮೊಗ್ಗದ ಕಾಂಗ್ರೆಸ್ ನಾಯಕರ ಧ್ವನಿ ಎಲ್ಲಿ ನಾಗರಿಕರ ಪ್ರಶ್ನೆ ? ಮಾಧ್ಯಮಗಳು ಸರ್ಯಾಗಿ ಜಾಡಿಸಿದರೆ ನಮ್ಮ ಅಧಿಕಾರಿಗಳು, ನಮ್ಮ ರಾಜಕಾರಣಿಗಳಿಗೆ ವಿಪರೀತ ಕೋಪ? ಇದ್ದಿದ್ದನ್ನ ಇದ್ದಂಗೆ ಹೇಳಿದರೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ..! ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ…
ಆದರೂ ಕೂಡ ವ್ಯವಸ್ಥೆ ಸರಿಯಾಗಬೇಕು ಎಂಬ ಉದ್ದೇಶ ಜನಸಾಮಾನ್ಯರಲ್ಲಿ ಹಾಗಾಗಿ ಈ ಸುದ್ದಿ ನಿಮ್ಮ ಮುಂದೆ .ಶಿವಮೊಗ್ಗದಲ್ಲಿ KSRTC Bus ಸಮಸ್ಯೆಗಳ ಕಡಿವಾಣ ಹಾಕುವುವಲ್ಲಿ ಅಧಿಕಾರಿಗಳು ಆಡಳಿತ ಸರ್ಕಾರದ ರಾಜಕಾರಣಿಗಳ ನಿರ್ಲಕ್ಷ! ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ…!
ಅಧಿಕಾರಿಗಳ ಕರ್ತವ್ಯಕ್ಕೆ ರಾಜಕೀಯ ಅಡ್ಡಿಪಡಿಸುತ್ತಿದ್ದೇಯೇ ಅಥವಾ ಅಧಿಕಾರಿಗಳೇ ಬೇಜವಾಬ್ದಾರಿ ತನಕ್ಕೆ ಇಳಿದರ, ನಾಗರಿಕರ ಪ್ರಶ್ನೆ ?
ಶಿವಮೊಗ್ಗ KSRTC Bus ಚಾಲಕ ಹಾಗೂ ನಿರ್ವಾಹಕರುಗಳಿಂದ ಶಿವಮೊಗ್ಗ ಭದ್ರಾವತಿ ನಗರ ಸಂಚಾರ ಮಾಡುವ ಬಸ್ ಗಳು ಎಲ್ಲೆಂದರಲ್ಲಿ ನಗರದಲ್ಲಿ ನಿಲ್ಲಿಸುತ್ತವೆ? ಮುಖ್ಯವಾಗಿ ಸಿಗ್ನಲ್ ಗಳಲ್ಲಿ.. ಈ ಕುರಿತು ಶಿವಮೊಗ್ಗದಲ್ಲಿರುವ ಸಿ ಸಿ ಟಿ ವಿ ಗಳು ಮಾತಾಡಬೇಕಾಗಿದೆ…!
ಹಾಗೂ ಮಹಿಳೆಯರು ವಿದ್ಯಾರ್ಥಿನಿಯರು ಇದ್ದ ಕಡೆ Bus ನಿಲ್ಲಿಸುವುದೇ ಇಲ್ಲ ಎಂಬದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ ! ಈ ಸಂಬಂಧ ಪ್ರಯಾಣಿಕರು ನಮ್ಮ ಮಾಧ್ಯಮಕ್ಕೆ ತಿಳಿಸಿದ ವಿಚಾರವೇನೆಂದರೆ ಉಚಿತ ಪ್ರಯಾಣ ಅಂತ ನಿಲ್ಲಿಸುವುದಿಲ್ಲ ಅಂತ ನಿರ್ವಾಹಕರು ಹೀಯಾಳಿಸುತ್ತಿದ್ದಾರೆ ಅಂತೇ ? ಹಾಗೂ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯದ ಬಗ್ಗೆ ಮಾತುಗಳು ಅಂತೇ!ನಿಮಗೆ ಉಚಿತ ಪ್ರಯಾಣ ಅಂತ, ಅದಕ್ಕೆ Bus ಯಾಕೆ ನಿಲ್ಲಿಸಬೇಕು ಎಂಬ ಮಾತು ಕೆಲವು ಚಾಲಕರು, ನಿರ್ವಾಹಕರು ಕೇಳುತ್ತಾರಂತೆ..!
ಈ ಸಂಬಂಧ ಹೆಣ್ಣುಮಕ್ಕಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸರ್ಕಾರದ ಯೋಜನೆಗೆ ಚಾಲಕರು ಮತ್ತು ನಿರ್ವಾಹಕರ ಆಕ್ಷೇಪಣೆ ಯಾಕೆ ಅಂತ ಪ್ರಶ್ನಿಸುತ್ತಿದ್ದಾರೆ?
ಶಿವಮೊಗ್ಗ ನಗರದಲ್ಲಿ KSRTC Bus ಜೊತೆಗೆ ಖಾಸಗಿ ಬಸ್ ಗಳು ಸಹ Bus Stop ಹೊರತುಪಡಿಸಿ ಎಲ್ಲೆಂದರಲ್ಲಿ ನಿಲ್ಲಿಸುತ್ತವೆ ಈ ಬಗ್ಗೆ ಟ್ರಾಫಿಕ್ ಪೊಲೀಸ್ RTO ಅಧಿಕಾರಿಗಳ ಆದೇಶಕ್ಕೆ ಬೆಲೆಯೇ ಇಲ್ಲದಾಗಿದೆ ! ಇದರಿಂದ ಹಿಂಬದಿ ಸವಾರರಿಗೆ ತೊಂದರೆ. ಅದರಲ್ಲಿ ಹೆಚ್ಚಾಗಿ ಸಿಗ್ನಲ್ ಲೈಟ್ ಗಳಲ್ಲಿ ನಿಲ್ಲಿಸುತ್ತಾರೆ ಎಂಬುದು ನಾಗರಿಕರ ಆಕ್ರೋಶವಾಗಿದೆ.
ಮುಖ್ಯವಾಗಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಗರದಲ್ಲಿ ಬೇರೆ ಜಿಲ್ಲೆಗೆ ತೆರಳುವ KSRTC Bus ಗಳ ಮೇಲೆ ಕ್ರಮ ಕೈಗೊಳ್ಳಲು ಇಲ್ಲಿಯವರೆಗೂ ಶಿವಮೊಗ್ಗದ ಟ್ರಾಫಿಕ್ ಸಿಂಗಂ ಎಂದೇ ಹೆಸರು ಪಡೆದಿರುವ ಹಲವಾರು ಒಳ್ಳೆಯ ಕೆಲಸ ಮೂಲಕ ಜನ ಮನ ಗೆದ್ದಿರುವ ಟ್ರಾಫಿಕ್ ಪೊಲೀಸ್ ಇಲಾಖೆಯ ಸಿಂಗಂ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ಇನ್ನು ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಇದರಲ್ಲಿ ರಾಜಕೀಯ ಅದೆಷ್ಟು ಗಟ್ಟಿಯಾಗಿದೇ ಎಂದರೆ ಒಬ್ಬ ಪ್ರಾಮಾಣಿಕ ಅಧಿಕಾರಿ ಜನಸಾಮಾನ್ಯರಿಗೆ ನಗರದಲ್ಲಿ ಅನುಕೂಲ ಮಾಡಿಕೊಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಇಂತಹ ಒಂದು ವ್ಯವಸ್ಥೆ ಬಗ್ಗೆ ನಗರದಲ್ಲಿ ನಾಗರಿಕರು ಬೇಸರ ಹೊರಹಾಕುತ್ತಿದ್ದಾರೆ.
ಉದಾಹರಣೆಗೆ ಮಹಾವೀರ ವೃತ್ತ, ವಿಶ್ವೇಶ್ವರಯ್ಯ ವೃತ್ತ (ವೀರಭದ್ರೇಶ್ವರ ಥೀಯೇಟರ್ ), ಸವಳಂಗ ರಸ್ತೆ (ಸ್ಟೇಡಿಯಂ )ವೃತ್ತ, ಅಮಿರ್ ಅಹ್ಮದ್ ವೃತ್ತ ಇತ್ಯಾದಿ..! ಇಲ್ಲೆಲ್ಲಾ ನಿಗದಿತ Bus Stop ಗಳಲ್ಲಿ Bus ನಿಲ್ಲಿಸುತ್ತಿಲ್ಲ ಹೊರತಾಗಿ ಸಿಗ್ನಲ್ ಗಳಲ್ಲಿ ನಿಲ್ಲಿಸುತ್ತಾರೆ ಇದರಿಂದ ಹಿಂಭಾಗ ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ ಎಂಬುದು ಆಕ್ರೋಶವಗಿದೆ. ಇನ್ನು ಈ ಸಂಬಂಧ ದಾಖಲೆಗಾಗಿ ನಗರದಲ್ಲಿ ಸಿಸಿಟಿವಿ ಮಾತಾಡಬೇಕಾಗಿದೆ..!
ಇನ್ನು ಅವ್ಯವಸ್ಥೆ ವಿರುದ್ದ ಮಾಧ್ಯಮಯಾದಿಯಾಗಿ ಯಾರೇ ಪ್ರಶ್ನೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಸಿಡಿಮಿಡಿಗೊಳ್ಳುವುದು ಏನುಕ್ಕೆ ಎಂಬುದು ಜನರ ಪ್ರಶ್ನೆಯಾಗಿದೆ ? ಖಾಸಗಿ Bus, ಮತ್ತು KSRTC Bus ನಗರದಲ್ಲಿ ಎಲ್ಲೆಂದರಲ್ಲಿ Bus ನಿಲ್ಲಿಸುವುದನ್ನ ಬಿಟ್ಟಿದ್ದರಾ? ದಿನ ನಿತ್ಯ ಜನರು ಟ್ರಾಫಿಕ್ ಪೊಲೀಸ್ ಇಲಾಖೆಗೆ ಕಂಪ್ಲೇಂಟ್ ಕೊಡಲು ಸಾಧ್ಯವಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ..?
ಇನ್ನು ಜನಸಾಮಾನ್ಯರು ನಮ್ಮ ಇ – ಕನ್ನಡ ಮಾಧ್ಯಮಕ್ಕೆ ತಿಳಿಸುವ ವಿಚಾರವೇನೆಂದರೆ ಉಚಿತ ಬಸ್ ಪ್ರಯಾಣ ಅಂತ KSRTC Bus ಗಳು ಮಹಿಳೆಯರು ಹೆಣ್ಣುಮಕ್ಕಳು Bus Stop ಗಳಲ್ಲಿ ನಿಂತರೆ Bus ನಿಲ್ಲಿಸುವುದೇ ಇಲ್ಲ, ಅದಗ್ಯ್ ನಿಲ್ಲಿಸಿದರೆ ಪುಕಸಟ್ಟೆ Bus ನಿಮಗೆ ಅನ್ನುವ ತೇಜೋವದೆ ಮಾತು ಕೇಳಿಬರುತ್ತಿದೆ ಅಂತೇ..! ಅದರಲ್ಲೂ ಕೂಡ ಭದ್ರಾವತಿಯಿಂದ ಬರುವ KSRTC ನಗರ ಸಾರಿಗೆ Bus ಮಲವಗೋಪ್ಪಾ, ಹರಿಗೆ, ಶುಗರ್ ಫ್ಯಾಕ್ಟರಿ ಇತ್ಯಾದಿ ಸ್ಥಳಗಳಲ್ಲಿ ನಿಲ್ಲುಸುತ್ತಾನೆ ಇಲ್ಲವಂತೆ, ಬಂದರೆ ಒಟ್ಟಿಗೆ ಎರಡು ಮೂರು Bus ನಂತರ ಗಂಟೆಗಟ್ಟಲೆ Bus ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಅಸಹಾಯಕರು ಪರದಾಡುತ್ತಿದ್ದಾರೆ… ಇನ್ನು ಬಂದಂತ Bus ಆದರೂ ನಿಲ್ಲಿಸುತ್ತಿಲ್ಲ ಎಂಬ ಗೋಳು ಯಾವ ಪುರುಷರ್ಥಕ್ಕೆ ಈ ವ್ಯವಸ್ಥೆ ಎಂಬ ಮಾತು ಜನರಲ್ಲಿ ಕೇಳಿ ಬರುತ್ತಿದೆ…!
Bus ನಿಲ್ಲಿಸಿದರು ಸಹ ಹೆಣ್ಣುಮಕ್ಕಳು Bus ಹತ್ತಿದಾಗ ಯಾಕೆ ಸರ್ಕಾರದ ಯೋಜನೆಗೆ KSRTC Bus ನಿರ್ವಹಕರಿಂದ ಬೈಗುಳ ಕೇಳಬೇಕು ಎಂಬ ಪ್ರಶ್ನೆ ಮಹಿಳಾ ಪ್ರಯಾಣಿಕರದ್ದಾಗಿದೆ?
ಇನ್ನು ಶಿವಮೊಗ್ಗ KSRTC Bus ಮುಖ್ಯ Bus ನಿಲ್ದಾಣದಲ್ಲಿ ಪಾಸ್ ಪಡೆಯಲು ಬಂದರೆ ಬೋರ್ಡ್ ಮಾತ್ರ ಬೆಳಿಗ್ಗೆ 8 ರಿಂದ ಕರ್ತವ್ಯ ಬೋರ್ಡ್ ಆದರೆ KSRTC ಅಧಿಕಾರಿಗಳು ಅವರು ಬರುವ ಸಮಯ ಮಾತ್ರ ಬೆಳಿಗ್ಗೆ 9 ಗಂಟೆ ನಂತರ ಅಂತೇ..!ನಮ್ಮ ಮಾಧ್ಯಮಕ್ಕೆ ಹಲವಾರು ಸಾರ್ವಜನಿಕರು ದೂರು ನೀಡುತ್ತಿದ್ದಾರೆ.

ಇಷ್ಟೆಲ್ಲ ಅವ್ಯವಸ್ಥೆ ಇದೆ ಅಂತೇ , KSRTC Bus ಮುಖ್ಯ Bus ನಿಲ್ದಾಣದಲ್ಲಿ ಮಹಿಳಾ ಶೌಚಾಲಯದಲ್ಲಿ ಮುಂದುವರೆದ ವಸೂಲಿ, ಎಷ್ಟು ಅಂತ ಅನ್ಯಾಯದ ವಿರುದ್ದ ಸುದ್ದಿ ಮಾಡಬೇಕು ಮಾಧ್ಯಮಗಳು ? ಎಂಬ ಪ್ರಶ್ನೆ ಎದ್ದಿದೆ!
ಮಾಧ್ಯಮಗಳು ಕೂಡ ಬೇಸತ್ತು ಹೋಗಿದ್ದೇವೆ, ಕೊನೆಗೆ ಅನಿಸಿರುವುದು ಈ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಮಾಫ್ ಹೇಳಿಕೆಗೆ ಮಾತ್ರ ಅಷ್ಟೇ ಮಹಿಳಾ ಸಬಲೀಕರಣ ಬಡವರು ದೀನ ದಲಿತರು ಕಲ್ಯಾಣ ಇತ್ಯಾದಿ…!
ವಾಸ್ತವ ವಿಚಾರಗಳು ಜನಸಾಮಾನ್ಯರಿಗೆ ಯಾವದೇ ಅನುಕೂಲ ಆಗುತ್ತಿಲ್ಲ ಎಂಬುದು?ಕನಿಷ್ಠ ಪಕ್ಷ ಶಿವಮೊಗ್ಗ ನಗರದಲ್ಲಿ ಬೇರೆ ಜಿಲ್ಲೆಗೆ ತೆರಳುವ KSRTC Bus ಗೆ ಕಡಿವಾಣ ಹಾಕಲು ಈ ರಾಜಕೀಯ ವ್ಯವಸ್ಥೆ ಬಿಡುತ್ತಿಲ್ಲ!
ಹೆಣ್ಣುಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಉಚಿತ ಸಾರಿಗೆ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಅನುಕೂಲವಾಗುತ್ತಿಲ್ಲವಾ?ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಮಾಧ್ಯಮಗಳೇ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟವರಾಗಿ ಕಾಣಿಸುತ್ತಿದ್ದಾರೆ ಇಷ್ಟೇ ಇವರುಗಳ ರಾಜಕೀಯ ಎಂಬ ಮಾತುಗಳು ಕೇಳಿಬರುತ್ತಿದೆ ?
ಒಂದು ಪತ್ರಿಕೆಯಲ್ಲಿ ಶಿವಮೊಗ್ಗದ KSRTC DC ಬಗ್ಗೆ ಪುಂಖನು ಪುಂಕ ಭ್ರಷ್ಟಾಚಾರದ ಬಗ್ಗೆ ಸುದ್ದಿ ಬಂದರು ಕೂಡ ಕಾಂಗ್ರೆಸ್ ಪಕ್ಷ ಶಿವಮೊಗ್ಗದ KSRTC DC ಗೆ ಬೆಂಬಲ ನೀಡುತ್ತದೆಯ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ
ಈ ಸಂಬಂಧ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂದು ಜನರೇ ಯೋಚಿಸುತ್ತಿದ್ದಾರೆ..!ಇನ್ನು ನಮ್ಮ ಸಾರಿಗೆ ಸಚಿವರು ಶಿವಮೊಗ್ಗಕ್ಕೆ ಒಮ್ಮೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅವಲೋಕಿಸಬೇಕಾದ ಅವಶ್ಯಕತೆಯಿದೆ.
6₹ ಗೆ 100₹ ಕೊಟ್ಟು ಚಿಲ್ಲರೆ ಇಲ್ಲ ಬೇಕು ಅನ್ನುವ ನಿರ್ವಾಹಕರನ್ನು ವಿಡಿಯೋ ಮಾಡಿ ಸೇವೆಯಿಂದ ಅಮಾನತು ಮಾಡುವ ಸಚಿವರು ಒಮ್ಮೆ ಶಿವಮೊಗ್ಗದ KSRTC ಅಧಿಕಾರಿಗಳು ಮಾಡುತ್ತಿರುವ ಘನ ಕಾರ್ಯದ ಬಗ್ಗೆ ಗಮನ ಹರಿಸಬೇಕಾಗಿದೆ..! ಎಂಬುದು ಪ್ರಯಾಣಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ನಿಜವಾಗ್ಲೂ ಮಹಿಳೆಯರ ಪರ ದೀನ ದಲಿತರು ಬಡವರು ಜನಪರವಿದೇಯ? ಶಿವಮೊಗ್ಗ ನಾಗರಿಕರ ಪ್ರಶ್ನೆಯಾಗಿದೆ!





