ನಿಮ್ಮ ಬಿಡದಿ ಹೋರಾಟ ಮುಚ್ಚಿಹಾಕುತ್ತೇನೆ ; ನನ್ನ ಕೆಪಿಎಸ್ಸಿ ಹಗರಣ ಮುಚ್ಚಿ ಹಾಕಿ ಎಂದು ಸಿಎಂ ಮತ್ತು ಬಿ. ವೈ. ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ : ಶಾಸಕ ಯತ್ನಾಳ್ ಗಂಭೀರ ಆರೋಪ

ರಾಜಕೀಯ

ನಿಮ್ಮ ಬಿಡದಿ ಹೋರಾಟ ಮುಚ್ಚಿಹಾಕುತ್ತೇನೆ. ನನ್ನ ಕೆಪಿಎಸ್ಸಿ ಹಗರಣ ಮುಚ್ಚಿ ಹಾಕಿ ಎಂದು ಸಿಎಂ ಮತ್ತು ಬಿ. ವೈ. ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ವಿಜಯೇಂದ್ರ ಪಾದಯಾತ್ರೆ ಉದ್ದೇಶಿಸಿ ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್ ವಿಜಯೇಂದ್ರಗೆ ನೇರ ಸವಾಲ್ ಹಾಕಿದ್ದಾರೆ.

ನಿಮಗೆ ಧಮ್ಮ ತಾಕತ್ ಇದ್ದರೆ ಕೆಪಿಎಸ್ಸಿ ಹಗರಣದ ಬಗ್ಗೆ ಪಾದಯಾತ್ರೆ ಮಾಡಿ ಎಂದಿದ್ದಾರೆ. ವಿಜಯೇಂದ್ರ ಯಾಕೆ ಲಕ್ಷಾಂತರ ಯುವಕರಿಗೆ ಆಗಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕೆಪಿಎಸ್ಸಿ ಸಾಹುಕಾರ್ ನಿಮಗೆ ಎಷ್ಟು ಪರ್ಸಂಟೇಜ್ ಕೊಟ್ಟಿದ್ದಾನೆ ಗೊತ್ತಿದೆ ನನಗೆ ಎಂದಿದ್ದಾರೆ. ಮುಂದುವರೆದು 75% ವಿಜಯೇಂದ್ರಗೆ 25% ಸಾಹುಕಾರ್ ತೆಗೆದುಕೊಳ್ಳುತ್ತಾನೆ ಎಂದಿದ್ದಾರೆ. ಇನ್ನು ಶಾಸಕ ಯತ್ನಾಳ್ ಮಾತನಾಡಿ ನಿಮಗೆ ತಾಕತ್ತಿದ್ದರೆ ಬಸವಕಲ್ಯಾಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡಿ ಎಂದು ಮತ್ತೊಂದು ಸವಾಲ್ ಹಾಕಿದ್ದಾರೆ..!

ನಾಗೇಂದ್ರ ರಾಜೀನಾಮೆ ಕೊಟ್ಟಮೇಲೂ ಪಾದಯಾತ್ರೆ ನಾಟಕ ಯಾಕೆ ಎಂದು ಪ್ರಶ್ನಿಸಿದ್ದಾರೆ? ಇದೊಂದು ಅನವಶ್ಯಕ ಪಾದಯಾತ್ರೆ ಹಾಗೂ ಪವಿತ್ರ್ಯ ಕಳೆದುಕೊಂಡ ಪಾದಯಾತ್ರೆ ಎಂದು ಟೀಕಿಸಿದ್ದಾರೆ. ವಿಜಯೇಂದ್ರ ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಭಾಗಿಯಾಗಲು ಆಗಲ್ಲ ಅಂದಿದ್ದಾರೆ.ವಿಜಯೇಂದ್ರ ಜೊತೆಗೆ ಯಾರು ಇಲ್ಲ..!

ವಿಜಯೇಂದ್ರ ಆಟ ಮುಗಿಯಲು ಬಂದಿದೆ.ಅದೇ ಕಾರಣಕ್ಕೆ ಪಾದಯಾತ್ರೆ ನಾಟಕ ಮಾಡುತ್ತಿರುವುದು ಎಂದು ವ್ಯಂಗ್ಯವಾಡಿದ್ದಾರೆ.

Author