ಶಿವಮೊಗ್ಗ | ಹಣಗೆರೆ ಕಟ್ಟೆ, ಅಲಸೆ ಮಾರ್ಗವಾಗಿ ಇಂದಿನಿಂದ ಶಾಲಾ ವಿದ್ಯಾರ್ಥಿಗಳಿಗೆ KSRTC Bus ಸೇವೆ ಲಭ್ಯ : ವಿದ್ಯಾರ್ಥಿಗಳಿಂದ ಅಧಿಕಾರಿಗಳಿಗೆ ಧನ್ಯವಾದ

ಶಿವಮೊಗ್ಗ

ಶಿವಮೊಗ್ಗ,ಹಣಗೆರೆ, ಕನ್ನಂಗಿ, ಅಲಸೆ, ಮಾಳೂರು, ಕಲ್ಕೂಪ್ಪ, ಸಿರಿಗೆರೆ, ತಮ್ಮಡಿಹಳ್ಳಿ, ಭಾಗದಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಹಾಗೂ ಅವರು ಸರಿಯಾದ ಸಮಯಕ್ಕೆ ಶಿಕ್ಷಣ ಪಡೆಯುವ ಸಲುವಾಗಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.

ಆದ್ದರಿಂದ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗಲು ಮತ್ತು ಸಿರಿಗೆರೆ, ತಮ್ಮಡಿಹಳ್ಳಿ, ಕಲ್ಲುಕೊಪ್ಪ ಕೆರೇಹಳ್ಳಿ, ಹಣಗೆರೆ, ಬಸವನಗದ್ದೆ, ಕನ್ನಂಗಿ, ಹೊನ್ನಸಗದ್ದೆ, ಅಲಸೆ ಭಾಗದಿಂದ 40ಕ್ಕೂ ಹೆಚ್ಚು ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ದಿನ ಕರ್ತವ್ಯಕ್ಕೆ ಹೋಗುತ್ತಿದ್ದು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ತೊಂದರೆ ಉಂಟಾಗುತ್ತಿದೆ ಆದ್ದರಿಂದ ದಯವಿಟ್ಟು ಶಿವಮೊಗ್ಗದಿಂದ 8.20 or 8.30 ಕ್ಕೆ ದಿನಾಂಪ್ರತಿ ಬಸ್ ಸೌಲಭ್ಯ ಒದಗಿಸಲು ಕೋರಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಾವಣಗೆರೆ ಹಾಗೂ ಶಿವಮೊಗ್ಗ KSRTC ವಿಭಾಗದ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರು.

ಹಾಗೂ ಈ ಒಂದು ಮನವಿಗೆ ಸ್ಪಂದಿಸಿದ KSRTC Comissinor ಆದಂತ ಸೆಲ್ವಮಣಿ ಅವರು ಇಂದಿನಿಂದ ಈ ಮಾರ್ಗವಾಗಿ KSRTC ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿರುವ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇ – ಕನ್ನಡ ಡಿಜಿಟಲ್ ಮಾಧ್ಯಮದ ಮೂಲಕ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿರುತ್ತಾರೆ.

Author