ಶಿವಮೊಗ್ಗದ ನಾಗರಿಕರು, ಪ್ರಯಾಣಿಕರು, KSRTC Bus ನಿಲ್ದಾಣದಲ್ಲಿ ಬಂದು ಬಸ್ ಹತ್ತುವುದು ಎಷ್ಟು ಸುರಕ್ಷಿತ? ಕಳ್ಳರಿಗೆ ಸಹಕಾರ ನೀಡುತ್ತಿದ್ದಾರ ದೊಡ್ಡಪೇಟೆ ಪೊಲೀಸ್ ಹಾಗೂ KSRTC ಅಧಿಕಾರಿಗಳು?

ಶಿವಮೊಗ್ಗ

ಶಿವಮೊಗ್ಗದ ಮುಖ್ಯ ಬಸ್ ನಿಲ್ದಾಣದಲ್ಲಿ ಆಗುತ್ತಿರುವ ಕಳ್ಳತನ ಕುರಿತು ಹಲವಾರು ಮಾಧ್ಯಮಗಳು KSRTC Bus ನಿಲ್ದಾಣದಲ್ಲಿ ಮುಂದುವರೆದ ಕಳ್ಳತನ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಗಳು ಬಿತ್ತರ ಆಗಿರುವುದನ್ನು ಶಿವಮೊಗ್ಗದ ಜನತೆ ನೋಡಿರುತ್ತಿರಿ.

ಇದರ ಮುಂದುವರೆದ ಭಾಗವಾಗಿ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಕಳ್ಳತನ ಮಾಡುವ ವ್ಯಕ್ತಿ ಸಮೇತ ವಿಡಿಯೋವನ್ನು ಬಿತ್ತರ ಮಾಡಿದ್ದಾರೆ ಹಾಗೂ ಈ ವಿಡಿಯೋ ಮೂಲಕ ಹಲವಾರು ಪ್ರಶ್ನೆಯನ್ನ ಅವರು ಎತ್ತಿದ್ದಾರೆ?

ಸಮೀರ್ ಎಂಬ ವ್ಯಕ್ತಿ ಕಳ್ಳತನ ಮಾಡಿದ್ದೂ ಎಂದು ಆರೋಪಸಿದ್ದಾರೆ. ಹಾಗೂ ಇದರ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದರು ಸಹ FIR ಮಾಡಿಲ್ಲ ಎಂದು ವಿಡಿಯೋದಲ್ಲಿ ದೂರಿರುತ್ತಾರೆ.

ಇನ್ನು ಕಳ್ಳತನ ಮಾಡಿದ ಆರೋಪಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಣೇಶ್, ಸಂದೀಪ್, ಚಂದ್ರ ನಾಯ್ಕ್, ಅನು ಇತ್ಯಾದಿ ಇವರುಗಳ ಹೆಸರು ಕಳ್ಳನ ಬಾಯಲ್ಲಿ ಬರುತ್ತಿದೆ ಇವರೆಲ್ಲ ದೊಡ್ಡಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಇವರುಗಳನ್ನ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುವುದಾಗಿ ಕಳ್ಳತನ ಆರೋಪಿ ಆರೋಪಿಸುತ್ತೇನೆ ಎಂದು ತಿಳಿಸಿದ್ದಾರೆ .

ಹಾಗೂ ಚಂದ್ರ ನಾಯ್ಕ್ ಎಂಬುವರ ಸಂಬಂಧಿ ನಾವು ಎಂದು ಇಬ್ಬರು ಬಂದು ನಮ್ಮ ಬಳಿ ಇದ್ದ ಚೈನ್, ಮೊಬೈಲ್, ಇತ್ಯಾದಿಗಳನ್ನ ಚಾಕು ತೋರಿಸಿ ಕಿತ್ತುಕೊಂಡು ಹೋಗಿದ್ದಾರೆ ಎನ್ನುತ್ತಾರೆ ಇದೇ ವೇಳೆ ನಾನು ವಿಡಿಯೋ ತೋರಿಸಿದಾಗ ಇವರೇ ಅಂತ ಹೇಳುತ್ತಾರೆ ಹೀಗೆಲ್ಲ ಆಗುತ್ತಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಲು ಬಂದವರು ತಿಳಿಸಿದ್ದಾರೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ವಿಷಯ ಹಂಚಿಕೊಂಡಿರುವ ವ್ಯಕ್ತಿ ಮಾಹಿತಿ ತಿಳಿಸಿದ್ದಾರೆ. ಹಾಗೂ ಇದೊಂದು ದೊಡ್ಡ ಗ್ಯಾಂಗ್ ಇದೇ ಎಂದು ಆರೋಪಿಸಿದ್ದಾರೆ.

ವಿಡಿಯೋ ಮಾಡಿರುವ ವ್ಯಕ್ತಿಗೆ ನಿಮಗೆ ತೊಂದರೆ ಉಂಟಾಗಲಿದೆ ಎಂದು ಆರೋಪಿ ಹೇಳುತ್ತಿರುವುದು ನೋಡಿದರೆ ದೊಡ್ಡಪೇಟೆ ಪೊಲೀಸ್ ಅವರು ಈತನೋನೊಂದಿಗೆ ಏನು ಸಂಬಂಧ ಎಂಬ ಪ್ರಶ್ನೆ ಕೂಡ ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿ ಪ್ರಶ್ನೆ ಮಾಡಿದ್ದರೆ?

ಮಹಿಳೆಯರು, ದುರ್ಬಲರು, ವಯೋ ವೃದ್ಧರು ಹಾಗೂ ವಿದ್ಯಾರ್ಥಿಗಳು ಹೇಗೆ KSRTC Bus ಹತ್ತಬೇಕು ಎಂಬ ಪ್ರಶ್ನೆ ಕೂಡ ಇವರು ಮುಂದಿಟ್ಟಿದ್ದಾರೆ.

ಇದೆಲ್ಲದರ ನಡುವೆ ಶಿವಮೊಗ್ಗ KSRTC Bus ನಿಲ್ದಾಣದಲ್ಲಿ ನಡೆಯುತ್ತಿರುವ ಕಳ್ಳತನ ಕುರಿತು ಆಗಾಗ್ಗೆ ಸುದ್ದಿ ನೋಡುತ್ತಿದ್ದೇವೆ ಹಾಗೆ ಇದರ ಸಂಬಂಧ ಏನು ವಾಸ್ತವ ವಿಚಾರ ಬಸ್ ಸ್ಟಾಂಡ್ ನಲ್ಲಿ ಹಲವಾರು ಸಿಸಿಟಿವಿ ಇದ್ದರು ಕೂಡ ಕಳ್ಳತನ ಯಾಕೆ ಆಗುತ್ತಿದೆ ಹಾಗೂ ಸೆಕ್ಯೂರಿಟಿ ಲ್ಯಾಪ್ಸ್ ಆಗುತ್ತಿರುವ ಹಿಂದಿರುವ ಸತ್ಯವೇನು ಎಂಬಂತೆ ಹಲವಾರು ಪ್ರಶ್ನೆ ನಾಗರಿಕರಲ್ಲಿ ಎದ್ದಿದೆ?

ದೊಡ್ಡಪೇಟೆ ಪೊಲೀಸ್ ಇಲಾಖೆ ಹಾಗೂ KSRTC ಅಧಿಕಾರಿಗಳ ಮೇಲೆ ಈ ವಿಡಿಯೋ ಮುಖೇಣ ಹಲವು ಪ್ರಶ್ನೆ ಶಿವಮೊಗ್ಗ ನಾಗರಿಕರಲ್ಲಿ ಎದ್ದಿದೆ!

ನಿಜವಾಗಲೂ ದೊಡ್ಡಪೇಟೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ KSRTC ಅಧಿಕಾರಿಗಳು ಈ ಕಳ್ಳತನ ವಿಷಯದಲ್ಲಿ ಶಾಮಿಲು ಆಗಿದ್ದರ? ಶಾಮಿಲು ಆಗಿಲ್ಲವೆಂದರೆ ಪ್ರಕರಣ ಯಾಕೆ ದಾಖಲಿಸಿಲ್ಲ?

ನಾಗರಿಕರು, ಪ್ರಯಾಣಿಕರು, ಶಿವಮೊಗ್ಗದ KSRTC Bus ನಿಲ್ದಾಣದಲ್ಲಿ ಬಂದು ಬಸ್ ಹತ್ತುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ?

Author