ಶಿವಮೊಗ್ಗ | ಖಾಸಗಿ ಬಸ್ ನಿಲ್ದಾಣದ ಬಳಿ ಇದ್ದ ತಾತ್ಕಾಲಿಕ ಹೂವಿನ ಮಾರುಕಟ್ಟೆ ಸಂಪೂರ್ಣ ಸ್ಥಳಾಂತರ

ಶಿವಮೊಗ್ಗ

ಶಿವಮೊಗ್ಗ,ಖಾಸಗಿ ಬಸ್ ನಿಲ್ದಾಣದ ಬಳಿ ಇದ್ದ ತಾತ್ಕಾಲಿಕ ಹೂವಿನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದ್ದು ಜಿಲ್ಲಾ ಟ್ರಾಫಿಕ್ ಪೊಲೀಸ್ ಮತ್ತು ನಗರ ಪಾಲಿಕೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


ಹಿಂದೆ ಶಿವಪ್ಪ ನಾಯಕ ಮಾರುಕಟ್ಟೆಯಲ್ಲಿದ್ದ ಹೂವಿನ ಮಳಿಗೆಗಳನ್ನು ಅಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟುವ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ದ್ವಿಚಕ್ರ ವಾಹನ ಪಾರ್ಕಿಂಗ್ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.

ಇದರಿಂದ ಪ್ರತಿನಿತ್ಯ ಬಸ್ ನಿಲ್ದಾಣಕ್ಕೆ ಬರುವ ವಾಹನ ಸವಾರರಿಗೆ ತಮ್ಮ ದ್ವಿಚಕ್ರ ವಾಹನ ನಿಲುಗಡಿಗೆ ತೊಂದರೆಯಾಗಿತ್ತು ಈಗ ಅದನ್ನು ತೆರವು ಗೊಳಿಸಲಾಗಿದ್ದು ಮತ್ತೆ ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಈಗಾಗಲೇ ಎಲ್ಲಾ ಮಳಿಗೆಗಳನ್ನು ತೆರವುಗೊಳಿಸಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.

Author