ಶಿವಮೊಗ್ಗ | ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ಆಗ್ರಹ

ಶಿವಮೊಗ್ಗ

ಶಿವಮೊಗ್ಗ, ಕೋವಿಡ್/ಕರೋನಾ ಲಾಕ್‌ಡೌನ್ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದಿರುವ ಸರ್ಕಾರಿ ಜಮೀನುಗಳು, ಗೋಮಾಳ( ಕೆರೆ ) (ಬಾ.ಖರಾಬು ) (ಸರ್ಕಾರಿ.ಕಟ್ಟೆ)ಹಾಗೂ ಜಲಮೂಲಗಳ ಒತ್ತುವರಿ, ಡಿ-ಚುಕ್ಕಿ (D-Darkhast) ಪತ್ರಗಳ ದುರ್ಬಳಕೆ ಮತ್ತು ನಕಲಿ ಖಾತೆ (MR) ಬದಲಾವಣೆಗಳ ವಿರುದ್ಧ ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ವತಿಯಿಂದ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಭೂಮಾಪನ ಇಲಾಖೆಯ ಆಯುಕ್ತರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖಾಂತರ ಗಂಭೀರ ಮನವಿ ಸಲ್ಲಿಸಲಾಯಿತು.

ಕರೋನಾ ಸಂಕಷ್ಟದ ಸಮಯದಲ್ಲಿ ಪ್ರಭಾವಶಾಲಿ ಭೂ ಮಫಿಯಾ ಹಾಗೂ ಕೆಲ ಅಧಿಕಾರಿಗಳ ಶಾಮೀಲಿನಿಂದ ಸರ್ಕಾರಿ ಆಸ್ತಿಗಳು ಅಕ್ರಮವಾಗಿ ಖಾಸಗಿಯವರ ಪಾಲಾಗಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಬಿ.ಎನ್.ಎಸ್ (BNS) ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ವಿಶೇಷ ತನಿಖಾ ತಂಡವನ್ನು (Special Task Force) ರಚಿಸಬೇಕು ಎಂದು ಸಂಘಟನೆಯು ಉನ್ನತ ಮಟ್ಟದಲ್ಲಿ ಆಗ್ರಹಿಸಿದೆ.ಒಂದು ವೇಳೆ ಆಡಳಿತ ಯಂತ್ರವು ಇದರ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಹಮ್ಮಿಕೊಳ್ಳಲಾಗುವುದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲು ಬದ್ಧರಾಗಿರುತ್ತೇವೆ ಎಂದು ತಿಳಿಸಿ ನೀಡಲಾಗಿದೆ .ಸರ್ಕಾರದ ಸುತ್ತೋಲೆಯಂತೆ ಜಿಲ್ಲೆಯ ಕೆರೆ-ಕಂಟೆ ಹಾಗೂ ಜಲಮೂಲಗಳನ್ನು ರಕ್ಷಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್‌ನ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ N.M. Sibghathulla, ರಾಜ್ಯ ದ ಪದಾಧಿಕಾರಿಗಳಾದ ದೇವರಾಜ್, ಲೋಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Author