ಶಿವಮೊಗ್ಗ | ವಾಹನ ದಂಡ ರಿಯಾಯಿತಿ ; 46 ಲಕ್ಷ ರೂ. ಸಂಗ್ರಹ

ಶಿವಮೊಗ್ಗ

“ಶಿವಮೊಗ್ಗ ನಗರದಲ್ಲಿ ಜೂನ್ 21 ರಿಂದ ಜುಲೈ 1 ರ ಅವಧಿಯಲ್ಲಿ ವಾಹನ ದಂಡ ಪಾವತಿಸಲು ಶೇ. 5೦ ರಿಯಾಯಿತಿ ನೀಡಿದ ಬಳಿಕ ಒಟ್ಟು ವಾಹನ ಸವಾರರು ಶೇಕಡ 5೦ರಷ್ಟು ರಿಯಾಯಿತಿಯ ಸೌಲಭ್ಯವನ್ನು ಬಳಸಿಕೊಂಡು ಒಟ್ಟು 46,06,500 ರೂಪಾಯಿಗಳ ದಂಡವನ್ನು ಪಾವತಿಸಿದ್ದಾರೆ.

೧೦,೭೭೮ ಇ-ಚಲನ್ ಪ್ರಕರಣಗಳು ಇತ್ಯರ್ಥಗೊಂಡಿವೆ. ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ ಎಸ್ ಭೇಟಿ ನೀಡಿ ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ದಂಡದ ಮೊತ್ತ ಪಾವತಿಯ ಪ್ರಗತಿಯನ್ನು ಪರಿಶೀಲಿಸಿದರು.

ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ರಿಯಾಯಿತಿ ಆದೇಶದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ದಂಡ ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರು ತೋರಿರುವ ಕಾರ್ಯತತ್ಪರತೆ ಮೆಚ್ಚುವಂತದ್ದು. ವಾಹನ ಮಾಲೀಕರು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿ ಅಥವಾ ವಿವಿಧ ವೃತ್ತಗಳಲ್ಲಿ ಕರ್ತವ್ಯದಲ್ಲಿರುವ ಸಂಚಾರಿ ಪೊಲೀಸರಿಗೆ ತಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ದಂಡದ ವಿವರಗಳನ್ನು ಪಡೆದುಕೊಳ್ಳಬಹುದು ಎಂದರು

ಸಾರ್ವಜನಿಕರು ನಿಗದಿತ ದಿನಾಂಕದೊಳಗೆ ಶೇಕಡ 5೦ರಷ್ಟು ರಿಯಾಯಿತಿಯ ಲಾಭವನ್ನು ಪಡೆದು ದಂಡ ಪಾವತಿಸಬೇಕು ಎಂದು ಅವರು ಕೋರಿದರು.

Author