ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊಬೈಲ್‌ ಬಿಟ್ಟು ಇಳಿದ ಪ್ರಯಾಣಿಕನಿಗೆ ಮರಳಿಸಿದ ಸಿಬ್ಬಂದಿ

ಶಿವಮೊಗ್ಗ

ಶಿವಮೊಗ್ಗ,ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹10,000 ಮೌಲ್ಯದ ಮೊಬೈಲ್ ಫೋನ್‌ ಅನ್ನು ರೈಲ್ವೆ ಸಂರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ನಿವಾಸಿ ಪ್ರೀತಮ್ ಮೊಬೈಲ್ ಮರಳಿ ಪಡೆದಿದ್ದಾರೆ.ಜೂನ್ 16ರಂದು ಪ್ರೀತಮ್ ಅವರು ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227) ರೈಲಿನ ಎಸ್-7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಮೊಬೈಲ್ ಫೋನ್ ಅನ್ನು ಸೀಟಿನಲಿಯೇ ಮರೆತು ಇಳಿದಿದ್ದರು.

ಈ ಕುರಿತು ಆರ್‌ಪಿಎಫ್ ಸಿಬ್ಬಂದಿಗೆ ತುರ್ತು ಮಾಹಿತಿ ನೀಡಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಶಿವಮೊಗ್ಗದ ಆರ್‌ಪಿಎಫ್ ಅಧಿಕಾರಿಗಳು ರೈಲ್ವೆ ಸಿಬ್ಬಂದಿಯ ಸಹಯೋಗದೊಂದಿಗೆ ಬೋಗಿಯಲ್ಲಿ ತಪಾಸಣೆ ನಡೆಸಿ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾರೆ.

ಅಧಿಕೃತ ದಾಖಲೆಗಳ ಪರಿಶೀಲನೆಯ ನಂತರ ಮೊಬೈಲ್ ಫೋನ್ ಅನ್ನು ಅದರ ಪ್ರೀತಮ್‌ ಅವರಿಗೆ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Author