ಶಿವಮೊಗ್ಗ,ಕನ್ನಡ ಮೀಡಿಯಂ 24×7 ವಾಹಿನಿಯ ಪ್ರತಿನಿಧಿ, ಈ ಹಿಂದೆ ಜನವಾರ್ತೆ, ನಮ್ಮನಾಡು, ಕನ್ನಡಪ್ರಭ, ಎಚ್ಚರಿಕೆ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ರಂಗನಾಥ್ (44 ವರ್ಷ) ಅವರು ಅಪಘಾತದಿಂದ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರು ತಾಯಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ .
ರಂಗನಾಥ್ ಅವರ ನಿಧನಕ್ಕೆ ಶಿವಮೊಗ್ಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಇ-ಕನ್ನಡ ಮಾಧ್ಯಮ ತೀವ್ರ ಸಂತಾಪ ಸೂಚಿಸಿದೆ.


