ಶಿವಮೊಗ್ಗ | ಅನಾರೋಗ್ಯದಿಂದ ಖೈದಿ ಸಾವು

ಶಿವಮೊಗ್ಗ

ಶಿವಮೊಗ್ಗ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಾ ಬಂಧಿ ಸಂಖ್ಯೆ ೦೧೮೭೧, ಕೃಷ್ಣ ತಂದೆ ಸೀನ (೪೪) ಮಧುಮೇಹದಿಂದ, ಬಳಲುತ್ತಿದ್ದು ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾನೆಂದು ಜೈಲಿನ ಪ್ರಕಟಣೆ ತಿಳಿಸಿದೆ.

ಹೊಸನಗರ ತಾಲೂಕು ಅಮೃತ ಗ್ರಾಮದ ಗರ್ತಿಕೆರೆಯವನಾದ ಈತ, ಈ ಹಿಂದೆ ಹಲವಾರು ಬಾರಿ ಮಧುಮೇಹಕ್ಕೆ ಚಿಕಿತ್ಸೆ ಪಡೆದಿದ್ದನು. ಎ. ೨೯ ರಂದು ವಿಚಾರಣಾ ವಿಭಾಗದಿಂದ ಶಿಕ್ಷಾ ವಿಭಾಗಕ್ಕೆ ವರ್ಗಾವಣೆಯಾಗಿದ್ದನು.

ಡಿ. 5ರಂದು ಅನಾರೋಗ್ಯ ಮತ್ತೆ ಮರುಕಳಿಸಿದ ಹಿನ್ನೆಲೆಯಲ್ಲಿ ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಈತನನ್ನು ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡು, ಚಿಕಿತ್ಸೆ ಮುಂದುವರೆಸಿದ್ದರು. ಆದರೆ ಮಂಗಳವಾರ ಬೆಳಗಿನ ಜಾವ ೨ ಗಂಟೆಯ ವೇಳೆ ಸಾವಿಗೀಡಾಗಿದ್ದಾನೆ.

Author