ಸಾಗರ | ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಿಯಾಯಿತಿ

ಜಿಲ್ಲೆಗಳು

ಸಾಗರ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಶೇಕಡಾ 50 ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರವು ಸಾರ್ವಜನಿಕರಿಗೆ ಸುವರ್ಣಾವಕಾಶ ಕಲ್ಪಿಸಿದೆ.

ದಿ:01/04/1991 ರಿಂದ 31/03/2022 ರ ಒಳಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ದಾಖಲಿಸಿರುವ ಡಿ.ಎಸ್.ಎ ಪ್ರಕರಣಗಳಿಗೆ ಮಾತ್ರ ಈ 50% ದಂಡ ಪಾವತಿ ರಿಯಾಯಿತಿ ಅನ್ವಯವಾಗುತ್ತದೆ.

ವಾಹನ ಮಾಲೀಕರು ದಿನಾಂಕ: 21/06/2026 ರಿಂದ 10/07/2026 ರೊಳಗೆ ಈ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಿ, ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬಹುದಾಗಿದೆ. ವಾಹನ ಮಾಲೀಕರು ಈ ನಿಗದಿತ ಅವಧಿಯೊಳಗೆ ರಿಯಾಯಿತಿಯ ಲಾಭವನ್ನು ಪಡೆದುಕೊಂಡು ಸಹಕರಿಸುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Author