ಶಿವಮೊಗ್ಗ,5 ವರ್ಷಗಳಿಗೂ ಮೇಲ್ಪಟ್ಟು ನವೀಕರಣ ಮಾಡಿಕೊಳ್ಳದೆ ಬಾಕಿ ಇರುವ ಸಂಘ-ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.3000/- ಹೆಚ್ಚುವರಿ ದಂಡ ಪಾವತಿಸಿ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960 ಕಲಂ 13 ರಂತೆ ನೋಂದಣಿಯಾದ ಪ್ರತಿಯೊಂದು ಸಂಘವು ಪ್ರತಿವರ್ಷ ನವೀಕರಣಗೊಳ್ಳಬೇಕಾಗಿದ್ದು, ಡಿ. 31 ರೊಳಗಾಗಿ ದಾಖಲೆ ಮತ್ತು ಮಾಹಿತಿಗಳೊಂದಿಗೆ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಭವನ, ಮೊದಲನೆ ಮಹಡಿ, ಆರ್.ಟಿ.ಓ ರಸ್ತೆ, ಶಿವಮೊಗ್ಗ ಕಛೇರಿಯಲ್ಲಿ ನವೀಕರಣ ಮಾಡಿಕೊಳ್ಳುವಂತೆ ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

