ಶಿವಮೊಗ್ಗ | ಫ್ಲವರ್ ಮಾರ್ಕೆಟ್ ಒತ್ತುವರಿ ತೆರವು ಕುರಿತಾದ INSIDE STORY

ಶಿವಮೊಗ್ಗ

ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿಗಳಿದ್ದು ಸಹ ಈ ರೀತಿಯ ಘಟನೆಗಳು ನಗರದಲ್ಲಿ ಸಾಕ್ಷಿ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ನಾವು ಸಹ ಬೇಸರದಿಂದನೇ ಸುದ್ದಿ ಮೂಲಕ ವಿಮರ್ಶೆ ತಿಳಿಸುತ್ತಿದ್ದೇವೆ. ಇನ್ನು ಮುಂದೆ ಆದರೂ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದರೆ ಈ ರೀತಿಯ ಪರಿಸ್ಥಿತಿಗೆ ಅವಕಾಶವಿರುವುದಿಲ್ಲ ಎಂದು ಭಾವಿಸುತ್ತ..!

ಮೊನ್ನೆ ದಿವಸ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಅನಧಿಕೃತ ಹೂವಿನ ಮಾರುಕಟ್ಟೆ ತೆರುವುಗೊಳಿಸಿದ ಘಟನೆ ಸಂಬಂಧ ವಾಸ್ತವ ವಿಷಯ ತೆರದಿಡುತ್ತಿದ್ದೇವೆ.

ಅದೇನಂದರೆ,ಮಹಾನಗರ ಪಾಲಿಕೆ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಹೂವಿನ ಮಾರುಕಟ್ಟೆಯನ್ನು ದಿನಾಂಕ 16 ಮೇ 2026 ರ ಬೆಳಿಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಸಹಯೋಗದಲ್ಲಿ ಒತ್ತುವರಿ ತೆರುವುಗೊಳಿಸುವ ಮೂಲಕ ಜನಸಾಮಾನ್ಯರು ಸಾರ್ವಜನಿಕರು ಹಾಗೂ ವಾಹನ ಸವರಾರು ಪಾದಚಾರಿಗಳಿಗೆ ಅನುಕೂಲ ಮಾಡಿದರು ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರಗೊಂಡವು ಆದರೆ ವಾಸ್ತವದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಒಂದು ಪ್ರಚಾರ ಆಗುತ್ತಿದ್ದರು ಸಹ ವಾಸ್ತವ ವಿಚಾರ ಮುಚ್ಚಿಟ್ಟು ನಮ್ಮ ಕರ್ತವ್ಯ ಶ್ಲಾಘನೇ ಎಂಬಂತೆ ಬಿಂಬಿಸಿದನ್ನ ಸಂಭ್ರಮಿಸಿದರು ಎಂದರೆ ತಪ್ಪಾಗಲಾರದು.

ಇದು ಒಂದು ರೀತಿ ಜನಸಾಮಾನ್ಯರ ತೆರಿಗೆ ಹಣದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ನಿರ್ಲಕ್ಷವೆಂದರೆ ತಪ್ಪಾಗಲಾರದು..!

ವಾಸ್ತವ ವಿಚಾರವೇನು?

ಪದೇ ಪದೇ ಮಹಾನಗರ ಪಾಲಿಕೆಗೆ ಫ್ಲವರ್ ಮಾರ್ಕೆಟ್ ಒತ್ತುವರಿ ತೆರವುಗೊಳಿಸಿ ತೊಂದರೆ ಉಂಟಾಗುತ್ತಿದೆ ಎಂಬ ಕುರಿತಾಗಿ ದೂರು ನೀಡಿ ನೀಡಿ ಬೇಸತ್ತು ವಿನೋದ್ ಎಂಬುವವರು 2025ರಲ್ಲಿ ಹೈ ಕೋರ್ಟ್ ಮೆಟ್ಟಿಲೇರಿದ್ದರು ಈ ಬಗ್ಗೆ ಕೇಸ್ ಕೂಡ ದಾಖಲಿಸಿದ್ದರು,

ನಗರದ ವಾರ್ಡ್ No. 21 ರ ಈ ರಸ್ತೆಯಲ್ಲಿ ವೀರಶೈವ ಸಮುದಾಯ ಭವನಕ್ಕೆ ಬರುವುವರಿಗೆ ಹಾಗೂ ಚರ್ಚ್ ಗೆ ಪ್ರಾರ್ಥನೆಗೆ ಬರುವಂತ ಭಕ್ತಾದಿಗಳಿಗೆ ತೊಂದರೆ ಉಂಟಾಗುತ್ತಿದೆ ಹಾಗೂ ಈ ಸಂಬಂಧ ಅತಿಕ್ರಮ ಒತ್ತುವರಿ ಮಾಡಿರುವ ಹೂವಿನ ಅಂಗಡಿಗಳನ್ನ ತೆರುವುಗೋಲಿಸಿಕೊಡುತ್ತಿಲ್ಲವೆಂದು ಕೇಸ್ ದಾಖಲಿಸಿದ್ದರು .

ಈ ಸಂಬಂಧ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಂಚಾರಿ ಪೊಲೀಸರ ಸಹಯೋಗದೊಂದಿಗೆ ಅತಿಕ್ರಮವಾಗಿದ್ದ ಹೂವಿನ ಮಾರುಕಟ್ಟೆಯನ್ನು ಮೊನ್ನೆ ದಿವಸ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಒತ್ತುವರಿ ತೆರುವುಗೊಳಿಸಿದ್ದಾರೆ.

ಹಾಗೂ ಮಹಾನಗರ ಪಾಲಿಕೆ ಪಕ್ಕದಲ್ಲಿರುವ ರಸ್ತೆಯಲ್ಲಿ ಈ ರೀತಿ ಅನಧಿಕೃತ ತೆರುವು ಕಾರ್ಯಾಚರಣೆ ಮಾಡಿ ತೆರುವುಗೊಳಿಸಿ ಅಂತ ನ್ಯಾಯಾಲಯಗಳಿಗೆ ಕೇಸ್ ದಾಖಲಿಸಬೇಕಾ? ಎಂಬ ಪ್ರಶ್ನೆ ಈಗ ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ.

ಜನಸಾಮಾನ್ಯರ ತೆರಿಗೆ ಹಣದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿ ಏನು ಎಂಬುದು ತಿಳಿದಿಲ್ಲವೇ? ಇಷ್ಟೊಂದು ಬೇಜವಾಬ್ದಾರಿಗಳಾದರ ಅಧಿಕಾರಿಗಳು? ಎಂಬುದು ಸಾರ್ವಜನಿಕ ವಲಯದ ಪ್ರಶ್ನೆ! ಕೇಳಿಬರುತ್ತಿದೆ…

ಹಾಗೂ ಈ ಒಂದು ಒತ್ತುವರಿ ತೆರವು ಕಾರ್ಯಾಚರಣೆ ಆಗಿರುವುದು ನ್ಯಾಯಾಲಯದಲ್ಲಿ ಮುಂದಿನ ದಿನಗಳಲ್ಲಿ ಏನು ಕ್ರಮ ಜರುಗಿಸಿದ್ದೇವೆ ಎಂಬ ಉತ್ತರ ನೀಡಬೇಕಾಗಿರುವುದರಿಂದ ಹೊರತು ಜನಸಾಮಾನ್ಯರ ನೆಮ್ಮದಿಯ ಫಲವಾಗಿ ಅಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದುವರೆದು…

ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಜಕಾಲುವೆ ಒತ್ತುವರಿ ತೆರವು ಯಾವಾಗ?

ಹಾಗೆಯೇ ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ ರಾಜಕಾಲುವೆ ಒತ್ತುವರಿ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ಸುಮಟೊ ಪ್ರಕರಣ ದಾಖಲಾಗಿದ್ದರು ಸಹ ಇಲ್ಲಿಯವರೆಗೆ ಮಹಾನಗರ ಪಾಲಿಕೆ ರಾಜಕಾಲುವೆ ಒತ್ತುವರಿ ತೆರುವುಗೊಳಿಸಲು ಮೀನಾ ಮೇಷ ಎಣಿಸುತ್ತ ಕೂತಿದೆ..!?

ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ನೆಹರು ರಸ್ತೆಯ ವರ್ತಕರು ಸಹ ಸಭೆ ಮುಖೇಣ ವಾಸ್ತವ ಪರಿಸ್ಥಿತಿ ಕುರಿತು ಚರ್ಚೆ ಮಾಡಿರುತ್ತಾರೆ. ಹಾಗೂ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದ್ದಾರೆ. ಮತ್ತು ಒತ್ತುವರಿ ತೆರವುಗೊಳಿಸಕೊಡಬೇಕಾಗಿ ಅಗ್ರಹಿಸಿದ್ದಾರೆ.

ಚಂದ್ರಗಿರಿ ಆಸ್ಪತ್ರೆ ಬಫರ್ ಜೋನ್ ಒತ್ತುವರಿ ತೆರವು ಯಾವಾಗ?

ಇನ್ನು ಉಷಾ ನರ್ಸಿಂಗ್ ಹೋಂ ಬಳಿ ಇರುವ ಚಂದ್ರಗಿರಿ ಆಸ್ಪತ್ರೆ ರಾಜಕಾಲುವೆ ಒತ್ತುವರಿಯಾಗಿದ್ದು. ಈ ಸಂಬಂಧ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದು ಆದರೂ ಇಲ್ಲಿಯವರೆಗೆ ಇದರ ಯಾವ ಫಲ ದೊರೆತಿಲ್ಲ.

ಇವೆಲ್ಲ ವಿಚಾರ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ನ್ಯಾಯಾಲಯ ಆದೇಶಕ್ಕೆ ಕಾಯುತ್ತ ಕೂತಿದ್ದೆಯ? ಎಂಬ ಪ್ರಶ್ನೆ ಈಗ ಜನಸಾಮಾನ್ಯರಲ್ಲಿ ಎದ್ದಿದೆ..!

ಇನ್ನು ಮಳೆಗಾಲದಲ್ಲೂ ಈ ಸಮಸ್ಯೆ ಬಗೆಹರಿಸುವುದು ಕಷ್ಟವಾಗಿದೆ. ಬೇಸಿಗೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ. ಮುಂದಿನ ದಿನಗಳಲ್ಲಿ ಬಹಳಷ್ಟು ಸಮಸ್ಯೆ ಜನಸಾಮಾನ್ಯರು ಎದುರಿಸಬೇಕಾಗಿರಲಿದೆ ಎಂಬುದು ಶಿವಮೊಗ್ಗದ ಜನತೆ ಹಾಗೂ ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಗೂ ನಗರದಲ್ಲಿ ಬಹಳಷ್ಟು ಸ್ಥಳಗಳು ಒತ್ತುವರಿ ಆಗಿದೆ ಅವುಗಳಿಗೆ ಕೂಡ ನ್ಯಾಯಾಲಯಗಳೇ ಆದೇಶ ಬರುವವರೆಗೂ ಪಾಲಿಕೆ ಅಧಿಕಾರಿಗಳು ಎಚ್ಚತ್ತುಕೊಳ್ಳಲ್ಲವ? ಎಂಬ ಪ್ರಶ್ನೆ ಜನಮಾನಸದಲ್ಲಿ ಕೇಳಿಬರುತ್ತಿದೆ..!

ಹಾಗೂ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತ ಉಲ್ಬಣವಾಗಿದೆ,ಜನಸಾಮಾನ್ಯರು, ವಾಹನ ಸವಾರರು ಪ್ರತಿನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.

ಹಾಗೂ ಈ ಹಿಂದಿನ ಜಿಲ್ಲಾಧಿಕಾರಿಗಳು ಸಹ ಭಾರಿ ವಾಹನ ಸಂಚಾರ ನಗರದೊಳಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನಿಷೇಧ ಆದೇಶವಿದೆ ಇದರ ಪಾಲನೇ ಆಗುತ್ತಿಲ್ಲ. ಇದಕ್ಕೂ ಮುಂದೆ ನ್ಯಾಯಾಲಯ ಹೇಳಬೇಕೇನೋ? ಎಂದು ಅಧಿಕಾರಿಗಳು ಕಾಯುತ್ತಿದ್ದಾರೇನೋ?

ಪ್ರತಿಯೊಂದು ಸಮಸ್ಯೆಗಳಿಗೆ ನ್ಯಾಯಾಲಯಗಳಲು ಮಧ್ಯೆ ಪ್ರವೇಶ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿರುವ ವಿಚಾರ, ಹಾಗೂ ನ್ಯಾಯಾಲಯದ ಮುಂದೆ ಉತ್ತರ ನೀಡಬೇಕಾದ ಪರಿಸ್ಥಿತಿ ಎದರು ಬರುತ್ತಿದೆ ಕ್ರಮ ಜರುಗಿಸಿ ಸರಿಮಾಡಿದ್ದೇವೆ ಎಂದು ತೋರಿಸುತ್ತಿರುವುದು.ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ನಗರದ ಗಾರ್ಡನ್ ಏರಿಯಾ, ಇನ್ನು ಈಚೆಗೆ ನಗರದ (ಗೋಪಿ ವೃತ್ತ ) ಟಿ. ಸೀನಪ್ಪ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನ ಸಂಚಾರಿ ಪೊಲೀಸರು ತೆರವುಗೊಳಿಸಿದರು ಆದರೆ ಯಥಾ ಪ್ರಕಾರ ಇಂದು ಆಗಲೆ ಹಣ್ಣಿನ ವ್ಯಾಪಾರಿಗಳು ಯಥಾ ಸ್ಥಿತಿ ಕಾಯ್ದುಕೊಂಡು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಇನ್ನು ಗಾರ್ಡನ್ ಏರಿಯಾ ಸ್ಥಿತಿ ಯಥಾಸ್ಥಿತಿಯಾಗಿದೆ. ಒಂದುಕಡೆ ಸುದ್ದಿ ಮಾಧ್ಯಮಗಳಲ್ಲಿ ಶಭಾಷ್ ಗಿರಿ ಪಡೆದುಕೊಳ್ಳುವುದು ನಂತರ ಪರಿಸ್ಥಿತಿ ಯಥಾಪ್ರಕಾರ ಮುಂದುವರೆಯುತ್ತಿದೆ.

ಒಟ್ಟಿನಲ್ಲಿ ನ್ಯಾಯಾಲಯಕೊಸ್ಕರವಾದರೂ ಹೂವಿನ ಮಾರುಕಟ್ಟೆ ಒತ್ತುವರಿ ತೆರುವುಗೊಳಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಲ್ಯೂಟ್ ಹೇಳಲೇಬೇಕಿದೆ.

ಕನಿಷ್ಠ ಪಕ್ಷ ನ್ಯಾಯಾಲಯಕ್ಕೆ ಉತ್ತರ ನೀಡಬೇಕು ಎಂಬುದುಕೋಸ್ಕರ ಆದರೂ ಅನಧಿಕೃತ ಹೂವಿನ ಮಾರುಕಟ್ಟೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂಬುದು ಪ್ರಜ್ಞಾವಂತರ ಮಾತಾಗಿದೆ..!

ಬಹು ಮುಖ್ಯ ವಿಚಾರವೇನೆಂದರೆ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ಕಗ್ಗತ್ತಲಲ್ಲಿಟ್ಟು ನ್ಯಾಯಾಲಯದಲ್ಲಿರುವ ಪ್ರಕರಣ ಸಂಬಂಧ ಮಾಹಿತಿಯೇ ತಿಳಿಸಲಿಲ್ಲವ ಮಹಾನಗರ ಪಾಲಿಕೆ ಎಂಬ ಪ್ರಶ್ನೆ ಎದುರಾಗಿದೆ..? ಕಾರಣವೇನಂದರೆ ಸಂಚಾರಿ ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ನ್ಯಾಯಾಲಯದಲ್ಲಿ ಈ ಸಂಬಂಧ ಪ್ರಕರಣ ಇರುವುದು ತಿಳಿದೇ ಇರಲಿಲ್ಲವೆಂಬುದು ತಿಳಿದುಬರುತ್ತಿದೆ.

ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಯಥಾಪ್ರಕಾರ ನಗರದಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸಿಕೊಡಲು ಶತಾಯಗತಾಯ ಪ್ರಯತ್ನಪಡುತ್ತಿದ್ದಾರೆ. ಅವರ ಪರಿಶ್ರಮ ಫಲವಾಗಿ ನಗರದಲ್ಲಿ ಬದಲಾವಣೆ ಹಾಗೂ ಸುಗಮ ಸಂಚಾರಕ್ಕೆ ಹಂತ ಹಂತವಾಗಿ ಅನುವು ಆಗುತ್ತಾ ಜನಸಾಮಾನ್ಯರು ನೆಮ್ಮದಿ ಉಸಿರು ಬಿಡುತ್ತಿದ್ದಾರೆ. ಹಾಗೆಯೇ ಮೊನ್ನೆ ದಿವಸ ಅವರ ಪರಿಶ್ರಮ ಫಲವಾಗಿ ಅನಧಿಕೃತ ಹೂವಿನ ಮಾರುಕಟ್ಟೆ ತೆರವು ಆಗಿದೆ ಎಂದರೆ ತಪ್ಪಾಗಲಾರದು. ಇವರ ಕರ್ತವ್ಯಕ್ಕೆ ಎಸ್ಪಿ ನಿಖಿಲ್ ಹಾಗೂ ಶಾಸಕ ಚನ್ನಬಸಪ್ಪ ಅವರ ಸಹಕಾರ ಕೂಡ ನೆರವಿಗೆ ನಿಂತಿದ್ದಾರೆ.

Author