ಶಿವಮೊಗ್ಗ ಹಲವಾರು ವರ್ಷಗಳಿಂದ ಕಗ್ಗಂಟ್ ಆಗಿದ್ದ ಮಹಾನಗರ ಪಾಲಿಕೆ ಪಕ್ಕದ ರಸ್ತೆಯಲ್ಲಿದ್ದ ಅನಧಿಕೃತ ಹೂವಿನ ಮಾರುಕಟ್ಟೆಯನ್ನು ಇಂದು ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಹಾಗೂ ಶಿವಮೊಗ್ಗ ಎಸ್ಪಿ ನಿಖಿಲ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ರವರ ನೇತೃತ್ವದಲ್ಲಿ ಅಂತೂ ಕೊನೆಗೂ ಸಂಪೂರ್ಣವಾಗಿ ಹೂವಿನ ಮಾರುಕಟ್ಟೆ ತೆರವುಗೊಳಿಸುವ ಮುಖೇಣ ಜನಸಾಮಾನ್ಯರು, ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಹಿಂದೆಯೂ ಸಹ ಒತ್ತುವರಿ ತೆರವು ಪ್ರಯತ್ನ ಆಗಿತ್ತು ಆದರೆ ಇಂದು ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಒಂದು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಯಾದ ವೀರೇಶ್ ಪೂಜಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಹಾಗೂ ಹೂವಿನ ವ್ಯಾಪಾರಿಗಳಿಗೆ ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುವುಮಾಡಿಕೊಟ್ಟಿದ್ದರು ಆದರೂ ಸಹಿತ ವ್ಯಾಪಾರಿಗಳು ಅದನ್ನು ಬಳಸಿಕೊಳ್ಳದೆ ಇದ್ದ ಕಾರಣ ಇಂದು ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

