ಶಿವಮೊಗ್ಗ,ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ, ಅವಕಾಶ ಕಲ್ಪಿಸಿ ಕೇಸರಿ ಶಾಲು, ಪೇಟವನ್ನ ನಿಷೇಧಿಸಿ ಆದೇಶಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಮತ್ತು ಅದರ ಅಂಗ ಸಂಸ್ಥೆಗಳು ಹೋರಾಟಕ್ಕೆ ಕರೆ ನೀಡಿದೆ.
ಕಾಂಗ್ರೆಸ್ ತುಘಲಕ್ ಸರ್ಕಾರದ ವಿರುದ್ಧ ಯುವಶಕ್ತಿ ಬೀದಿಗಿಳಿಯಬೇಕಾಗಿದೆ ಎಂಬ ಎಚ್ಚರಿಕೆ ನೀಡಿದ್ದಾರೆ ! ಸರ್ಕಾರದ ವಿರುದ್ಧ ಯುವಶಕ್ತಿ ಬೀದಿಗಿಳಿದು ಹೋರಾಡಲಿದೆ ಎಂದು ಭಜರಂಗದಳದ ರಾಜೇಶ್ ಗೌಡ ಕರೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆಶಯಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಹಿಜಾಬ್ ಪ್ರೇಮಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.ಯುವಶಕ್ತಿಯ ಹೋರಾಟಕ್ಕೆ ಶಿವಮೊಗ್ಗ ಭಜರಂಗದಳ ಬೆಂಬಲ ಸೂಚಿಸಿದೆ.
ಎಲ್ಲಾ ಹಿಂದೂ ವಿದ್ಯಾರ್ಥಿಗಳು ಶಾಲಾ ಕಾಲೇಜು ಮೊದಲನೇ ದಿನದಿಂದ ಪ್ರತಿಯೊಬ್ಬರು ಕೇಸರಿ ಶಾಲನ್ನು ಹಾಕಿಕೊಂಡು ಬರಬೇಕು ನಿಮ್ಮ ಬೆಂಬಲಕ್ಕೆ ಬಜರಂಗದಳ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಹೋರಾಟವೇನೆಂದರೆ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಬೇಸಿಗೆ ಶಾಲೆ ಮುಗಿಸಿ ಆರಂಭಗೊಳ್ಳುತ್ತಿರುವ ಮೊದಲನೇ ದಿನ ಕೇಸರಿ ಶಾಲನ್ನ ಹಾಕಿಕೊಂಡು ಬರುವಂತೆ ರಾಜೇಶ್ ಗೌಡ ಕರೆ ನೀಡಿದ್ದಾರೆ.
ಶಾಲ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಕಲ್ಪಿಸಿ, ಕೇಸರಿ ಶಾಲು ಪೇಟಗೆ ನಿಷೇಧಿಸಿದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಈ ಕರೆ ಶಿಕ್ಷಣ ಇಲಾಖೆಗೆ ತಲೆನೋವಾಗುವ ಸಾಧ್ಯತೆಯಿದೆ.

