ICSE 10ನೇ ತರಗತಿಯ 2026ನೇ ಸಾಲಿನ ಫಲಿತಾಂಶವನ್ನು ಏಪ್ರಿಲ್ 30 ರಂದು ಬೆಳಿಗ್ಗೆ 11 ಗಂಟೆಗೆ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳ ಮೂಲಕ UID ಮತ್ತು ಸೂಚ್ಯಂಕ ಸಂಖ್ಯೆಯನ್ನು ಬಳಸಿಕೊಂಡು SMS ಮತ್ತು ಡಿಜಿಲಾಕರ್ ಆಯ್ಕೆಗಳೊಂದಿಗೆ ಆನ್‌ಲೈನ್‌ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು.
ಫೆಬ್ರವರಿ 17 ರಿಂದ ಮಾರ್ಚ್ 30, 2026 ರವರೆಗೆ ನಡೆದ ICSE 2026 ಪರೀಕ್ಷೆಗಳಿಗೆ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – results.cisce.org
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅನಂತ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿತ.ಕೆ. ಎಸ್ ಈ ಬಾರಿ ನಡೆದ ICSE 10th ಪರೀಕ್ಷೆಯಲ್ಲಿ ಶೇಕಡ. 79% ಪರ್ಸಂಟೇಜ್ ಗಳಿಸುವ ಮೂಲಕ ಉತ್ತಮ ಅಂಕ ಪಡೆದಿದ್ದಾರೆ.
ಸಾನ್ವಿತ ಅವರ ತಾಯಿ ದಿವ್ಯ ಗೃಹಿಣಿಯಾಗಿದ್ದಾರೆ ಹಾಗೂ ತಂದೆ ಸುಧಾಕರ್ ಅವರು ಅರಸೀಕೆರೆಯಲ್ಲಿರುವ ಪ್ರತಿಷ್ಠಿತ ಚಂದ್ರಶೇಖರಭಾರತಿ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಸಾನ್ವಿತ ವಿದ್ಯಾರ್ಥಿನಿಯು ಇ-ಕನ್ನಡ ಮಾಧ್ಯಮ ಸಂಪಾದಕರಾದ ರಾಘವೇಂದ್ರ ಅವರ ಸಹೋದರಿಯ ಮಗಳು ಕೂಡ ಹೌದು.
ನಮ್ಮೊಂದಿಗೆ ಮಾತನಾಡಿದ ಸಾನ್ವಿತ ದಿನ ನಿತ್ಯದ ಪಠ್ಯವನ್ನು ಅಂದೇ ಶ್ರಮವಹಿಸಿ ಓದಿದ್ದೇನೆ ಇನ್ನು ಹೆಚ್ಚಿನ ಅಂಕ ಬರುವ ನಿರೀಕ್ಷೆಯಿದೆ ಹಾಗೂ ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸಾನ್ವಿತ ವಿದ್ಯಾರ್ಥಿನಿಯ ಉತ್ತಮ ಸಾಧನೆಗೆ, ಪೋಷಕರು,ಶಾಲಾ ಆಡಳಿತ ಮಂಡಲಿ,ಬಂಧು ಬಾಂಧವರು, ಸ್ನೇಹಿತರು, ಆತ್ಮೀಯರು ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭಾಶಯಗಳು ಕೊರಿದ್ದಾರೆ.
ನಮ್ಮ ಇ-ಕನ್ನಡ ಮಾಧ್ಯಮದ ಪರವಾಗಿ ಸಾನ್ವಿತಗೆ All the Best

