ಹಾಸನ | ಪ್ರೀ ವೆಡ್ಡಿಂಗ್ ಶೂಟ್ಗೆ ಹೊರಟ ಭಾವಿ ವರ ಅಪಘಾತದಲ್ಲಿ ದುರ್ಮರಣ
ಮದುವೆಗೆ ಭರದಿಂದ ಸಿದ್ಧತೆ ನಡೆದಿದ್ದು, ಪ್ರೀ ವೆಡ್ಡಿಂಗ್ ಶೂಟ್‌ಗೆಂದು ಭಾವಿ ಪತ್ನಿಯನ್ನು ಕರೆ ತರಲು ಕಾರಿನಲ್ಲಿ ಮನು ಹೋಗುತ್ತಿದ್ದರು. ಈ ವೇಳೆ ಮೂಗಲಿ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
Continue Reading