ಬೆಂಗಳೂರು | ನಗ್ನ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!

ಬೆಂಗಳೂರು

ಬೆಂಗಳೂರಿನ ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಯುವತಿಯೊಬ್ಬಳು ತಾನು ವಾಸವಿದ್ದ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ಮೃತದೇಹವಾಗಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.

ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆಯನ್ನು ಜಾರ್ಖಾಂಡ್‌ನ ಧನ್‌ಬಾದ್‌ನ ಹಿರಾಪುರ ಮೂಲದ 34 ವರ್ಷದ ಯುವತಿ ಪೂಜಾ ದತ್ತಾ ಎಂದು ಗುರುತಿಸಲಾಗಿದ್ದು, ಈಕೆ ಈ ಹಿಂದೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದಳು ಎಂದು ತಿಳಿದುಬಂದಿದೆ.

ಸದ್ಯ ಈಕೆಯ ಮೃತದೇಹ ನಗ್ನ ಹಾಗೂ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಕೆ ಸಾವನ್ನಪ್ಪಿ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ, ಮೃತದೇಹ ಪತ್ತೆಯಾದ ವಿಧಾನದಿಂದ ಈ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನಗಳು ದಟ್ಟವಾಗಿದೆ. ಈಕೆ ಈ ಮನೆಯಲ್ಲಿ ಸುಮಾರು 3 ವರ್ಷಗಳಿಂದ ಬಾಡಿಗೆಯಿದ್ದು, ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನು, ಏ.27ರಂದು ಅಕ್ಕಪಕ್ಕದ ಮನೆಯವರಿಗೆ ಈಕೆ ವಾಸವಿದ್ದ ಈ ಮನೆಯಿಂದ ಕೊಳೆತಿರುವ ಕೆಟ್ಟ ವಾಸನೆ ಬಂದಿದ್ದು, ಈ ವೇಳೆ ಅಲ್ಲಿನ ನೆರರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮನೆ ಬಾಗಿಲು ಬೀಗ ಹಾಕಿದ್ದ ಕಾರಣ ಅದನ್ನು ಹೊಡೆದು ಒಳಗೆ ಹೋಗಿ ನೋಡಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಆಕೆಯ ದೇಹವು ಬೆತ್ತಲೆಯಾಗಿ, ರಕ್ತದ ಮಡುವಿನಲ್ಲಿ ಮತ್ತು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಕನಿಷ್ಠ ಮೂರು ದಿನಗಳ ಹಿಂದೆ ಆಕೆ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಿ, ಆಕೆಯ ಮನೆಯನ್ನು ಶೋಧ ಮಾಡಿದ್ದು, ಈ ವೇಳೆ ರೂಂ ತುಂಬಾ ಪೇಪರ್ ತುಂಡುಗಳನ್ನು ಹರಿದು ಹಾಕಿರೋದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಆಕೆಯ ಕೈ ಹಾಗೂ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಸಹ ಪತ್ತೆಯಾಗಿದೆ.

ಇನ್ನು, ಈ ಕುರಿತಂತೆ ಆಕೆಯ ಮನೆಯ ಮಾಲೀಕರಾದ ಜಾನಕಮ್ಮ ಅವರು ಈಕೆ ಕಳೆದ 3 ವರ್ಷಗಳಿಂದ ಇದೇ ಮನೆಯಲ್ಲಿ ವಾಸವಿದ್ದು, ಹೆಚ್ಚಾಗಿ ಹಿಂದಿಯಲ್ಲಿ ಮಾತಾಡುತ್ತಿದ್ದಳು. ಅಲ್ಲದೆ, ಈಕೆಯನ್ನು ಭೇಟಿಯಾಗಲು ಆಗ್ಗಾಗೆ ಒಬ್ಬ ಯುವಕ ಬರುತ್ತಿದ್ದು, ಸದಾ ಜಗಳವಾಡುತ್ತಿದ್ದನು. ಆದರೆ, ಈ ಜಗಳಕ್ಕೆ ಕಾರಣ ಮಾತ್ರ ತಿಳಿದಿರಲಿಲ್ಲ. ಅಷ್ಟೇ ಅಲ್ಲದೆ, ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಆಕೆ ಕೆಳಗಿಳಿದುಬಂದಿದೆ ನಾನು ನೋಡಿದ ಕೊನೆಯ ಕ್ಷಣ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಕೊಲೆಯೋ ಆತ್ಮಹತ್ಯೆಯೋ? ಈಕೆಯ ಮನೆಗೆ ಬರುತ್ತಿದ್ದ ಈ ಯುವಕ ಯಾರು? ಆತನಿಗೂ ಈ ಯುವತಿಗೂ ಜಗಳ ನಡೆಯಲು ಕಾರಣವೇನು? ಎಂಬುದನ್ನು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಬಂದ ಬಳಿಕವಷ್ಟೇ ಇದು ಈ ಸಾವಿನ ಕುರಿತು ಕೊಂಚ ನಿಖರತೆ ಸಿಗಲಿದೆ.

Author