ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ : ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ಕರ್ನಾಟಕ

ಬೆಂಗಳೂರು,ಲಕ್ಷಾಂತರ ವಿದ್ಯಾರ್ಥಿಗಳು ಹಾಗು ಪೋಷಕರುಗಳು ಕಾತರದಿಂದ ನಿರೀಕ್ಷಿಸುತ್ತಿರುವ 10ನೇ ತರಗತಿ ಪರೀಕ್ಷೆ – 1ರ ಫಲಿತಾಂಶ ಇಂದು ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶದ ವಿವರಗಳನ್ನು ಘೋಷಣೆ ಮಾಡಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಮೊದಲ ಬಾರಿಗೆ ಡಿಜಿ ಲಾಕರ್​ನಲ್ಲಿ ಅಂಕಪಟ್ಟಿಯಲ್ಲಿ ಲಭ್ಯವಾಗಲಿವೆ.

ಈ ಬಾರಿ 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ ಶೇ‌.94.01ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಈ ಬಾರಿ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬಾಲಕಿಯರದ್ದೇ ಮೇಲುಗೈ:

ಈ ಬಾರಿಯೂ ಬಾಲಕಿಯರೇ ಮೇಲುಗೈ (ಶೇ.96) ಸಾಧಿಸಿದ್ಧಾರೆ. ದಕ್ಷಿಣ ಕನ್ನಡ ಟಾಪ್ (98.40), ಕಲಬುರಗಿ ಕೊನೆಯ (85.06) ಸ್ಥಾನ ಪಡೆದಿದೆ. ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ಧಾರೆ ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲಾವಾರು ಸಾಧನೆ:

ದಕ್ಷಿಣ ಕನ್ನಡಕ್ಕೆ ಅಗ್ರಸ್ಥಾನ.

ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಕರಾವಳಿ ಜಿಲ್ಲೆಗಳು ಅದ್ಭುತ ಸಾಧನೆ ಮಾಡಿದ್ದವು. ಶೇ. 91.12ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಶೇ. 89.96ರೊಂದಿಗೆ ಉಡುಪಿ ದ್ವಿತೀಯ ಹಾಗೂ ಶೇ. 83.19ರೊಂದಿಗೆ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿವೆ. ಶಿವಮೊಗ್ಗ (ಶೇ. 82.29) ಮತ್ತು ಕೊಡಗು (ಶೇ. 82.21) ನಂತರದ ಸ್ಥಾನಗಳಲ್ಲಿವೆ.

ಆದರೆ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆ ಕೇವಲ ಶೇ. 42.43ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

Author