ಭಾರತದ ಸಂವಿಧಾನದ ಪಿತಾಮಹ, ಭಾರತರತ್ನ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರ ಜನ್ಮದಿನವನ್ನು ಇಂದು ದೇಶಾದ್ಯಂತ ‘ಸಮಾನತೆಯ ದಿನ’ ಹಾಗೂ ‘ಜ್ಞಾನ ದಿನ’ವನ್ನಾಗಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ.
ಶೋಷಿತರ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಅಂಬೇಡ್ಕರ್ ಅವರು ನೀಡಿದ ಕೊಡುಗೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ.
ಇಂದು ಶಿವಮೊಗ್ಗ ಹೊರವಲಯದ ಕೊಮ್ಮನಾಳಿನಲ್ಲಿ ಬಿಜೆಪಿ ಎಸ್ಸಿ. ಮೋರ್ಚಾದ ಮುಖಂಡರಾದ ಸುರೇಶ್ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಅಂಬೇಡ್ಕರ್ ಜಯಂತಿಯು ಕೇವಲ ಒಂದು ದಿನದ ಸಂಭ್ರಮವಲ್ಲ; ಅದು ಅವರು ಹಾಕಿಕೊಟ್ಟ ಸಮಾನತೆ ಮತ್ತು ಭ್ರಾತೃತ್ವದ ಹಾದಿಯಲ್ಲಿ ನಡೆಯುವ ಸಂಕಲ್ಪದ ದಿನವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಅವರ ವಿಚಾರಧಾರೆಗಳು ಇಂದಿಗೂ ದಾರಿದೀಪವಾಗಿವೆ ಎಂದು ಸುರೇಶ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.
ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಮತ್ತು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ಅನನ್ಯ. ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕುಗಳನ್ನು ಒದಗಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕೇವಲ ದಲಿತರ ಏಳಿಗೆಗೆ ಮಾತ್ರವಲ್ಲದೆ, ಮಹಿಳಾ ಹಕ್ಕುಗಳಿಗಾಗಿ ಅವರು ಮಂಡಿಸಿದ ‘ಹಿಂದೂ ಕೋಡ್ ಬಿಲ್’ ಇತಿಹಾಸದ ಪ್ರಮುಖ ಮೈಲಿಗಲ್ಲು ಎಂದು ಸ್ಮರಸಿದರು.
ಈ ಸಂದರ್ಭದಲ್ಲಿ, ಸುರೇಶ್ ಬೂದಿಗೆರೆ, ದೇವರಾಜ್, ಹನುಮಂತಪ್ಪ, ಮಂಜಪ್ಪ, ಈರಪ್ಪ, ರಾಜಣ್ಣ, ಕುಮಾರ್ ಗೋವಿಂದಪ್ಪ ಇನ್ನು ಮುಂತಾದರು ಗ್ರಾಮಸ್ಥರು ಉಪಸ್ಥಿತರಿದ್ದರು.


