ಶಿವಮೊಗ್ಗ ನಗರದ ಆಲ್ಕೋಳ ವೃತ್ತದಿಂದ ಗೋಪಾಲಗೌಡ ಬಡಾವಣೆಗೆ ತೆರಳುವ ಆನೆ ವೃತ್ತದವರೆಗೂ ಇರುವ ಬಂಗಾರಪ್ಪ ರಸ್ತೆಯಲ್ಲಿರುವ ಎರಡು ವೈನ್ ಶಾಪ್ ಗಳಲ್ಲಿ ಮದ್ಯ ಪ್ರಿಯರು ಸಂಜೆ ಆಗುತ್ತಿದ್ದಂತೆ ರಸ್ತೆ ಫುಟ್ ಪಾತ್ ಎಲ್ಲೆಂದರಲ್ಲಿ ಕುಡಿಯುವುದು, ಎಲ್ಲೇ ಮೀರಿ ವರ್ತಿಸುತ್ತಿರುವುದು ಹಾಗೆ ಶನಿವಾರ ಭಾನುವಾರ ಬಂದರಂತು ಮಠ ಮಠ ಮಧ್ಯಾಹ್ನನೆ ಮಿನಿ ಗೋವಾ ಆಗಿರತ್ತೆ. ಮಾನವಂತರು ಓಡಾಡುವುದು ಕಷ್ಟವಾಗಿದೆ.
ಈ ಸಂಬಂಧ ನಾವು ನಮ್ಮ ಮಾಧ್ಯಮದಲ್ಲಿ ಇದರ ಕುರಿತು ಸುದ್ದಿ ಮಾಡಿದ್ದೂ ಆಗಿದೆ.
ಮುಂದುವರೆದ ಭಾಗ -2 ರ ಸುದ್ದಿ ಇದು.
ನಿನ್ನೆ ದಿವಸ ಒಬ್ಬ ವ್ಯಕ್ತಿಯ ತಲೆಗೆ ಪೆಟ್ಟಾಗಿ ವೈನ್ ಶಾಪ್ ಪಕ್ಕದಲ್ಲಿ ಇರುವ ರಾಜಕಾಲುವೇ ಮಧ್ಯ ಇರುವ ಒಂದು ಸ್ಲಾಬ್ ಮೇಲೆ ಮಲಗಿದ್ದು ಹಾಗೂ ಮಾನ್ಯ ಉಸ್ತುವಾರಿ ಸಚಿವರು ಕೆಲವು ದಿನಗಳ ಹಿಂದೆ ಇದೆ ವೈನ್ ಶಾಪ್ ಮುಂಭಾಗದಲ್ಲಿ ಇರುವ ಖಾಲಿ ಜಾಗದಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ರಸ್ತೆಗೆ ಬಂಗಾರಪ್ಪ ಹೆಸರು ಅಂತ ಇಟ್ಟು ತಂದೆಯ ಗುಣಗಾನ ಮಾಡಿದ್ದರು.

ನಿನ್ನೆ ದಿವಸ ಅದೇ ಜಾಗದಲ್ಲಿ ಹಾಗೂ ರಸ್ತೆ ಫುಟ್ ಪಾತ್ ಗಳಲ್ಲಿ ರಾಜರೋಷವಾಗಿ ಯಾವದೇ ನಿರ್ಭೀತಿ ಇಲ್ಲದೆ ಮದ್ಯ ವ್ಯಾಸನಿಗಳು ಕುಡಿತ ಕೂತಿದ್ದರು.ಇದೆಲ್ಲ ಒಂದು ಕಡೆ ಇರಲಿ.
ಶಿವಮೊಗ್ಗ ನಗರದ ತುಂಗಾ ನಗರ ಠಾಣೆಯ ವ್ಯಾಪ್ತಿಗೆ ಈ ಸ್ಥಳ ಒಳಪಟ್ಟಿರುತ್ತೆ. ಆದರೆ ಇಲ್ಲಿಯವರೆಗೆ ಪೊಲೀಸರು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮದ್ಯ ವ್ಯಾಸನಿಗಳಿಗೆ ದಂಡ ವಿಧಿಸುವವುದಾಗಲಿ, ಆಟೋ, ಕಾರ್ ಇತ್ಯಾದಿ ವಾಹನ ರಸ್ತೆಯಲ್ಲಿ ನಿಲ್ಲಿಸಿಕೊಂಡು ಮದ್ಯ ಸೇವಿಸುವಾಗ ವಾಹನಗಳನ್ನು ವಶಕ್ಕೆ ಪಡೆಯುವುದು, ಜಪ್ತಿ ಮಾಡುವುದು ಯಾವದು ಮಾಡುತ್ತಿಲ್ಲ. ಎಲ್ಲಿ ಕಾನೂನು ರೀತಿ ಕ್ರಮ ಕೈಗೊಂಡಲ್ಲಿ ವೈನ್ ಶಾಪ್ ಮಾಲೀಕರಿಗೆ ತೊಂದರೆ ಆಗತ್ತೇನೋ ಎಂಬಂತೆ ಆಗಿದೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬೆಳಿಗ್ಗೆ ವೇಳೆ ಇದೊಂದು ಆಫೀಷಿಯಲ್ ಏರಿಯಾ ಆಗಿರತ್ತೆ ಈ ರಸ್ತೆ, ಅದೇ ಸಂಜೆ ಆದರೆ ಸಾಕು ಈ ರಸ್ತೆ ಬೇರೆ ಸ್ವರೂಪ ಪಡೆಯುತ್ತಿದೆ.
ಇನ್ನು ಇದಕ್ಕೆಲ್ಲ ಕಡಿವಾಣ ಹಾಕದೆ ಇರುವ ತುಂಗ ನಗರ ಠಾಣೆ ಪೊಲೀಸರ ಬಗ್ಗೆ ಸ್ಥಳೀಯರು ಹಾಗೂ ಶಿವಮೊಗ್ಗದ ಪ್ರಜ್ಞಾವಂತ ಜನತೆಯಲ್ಲಿ ಕೇಳಿಬರುತ್ತಿರುವ ವಿಚಾರವೆಂದರೆ ತುಂಗಾ ನಗರ ಪೊಲೀಸರಿಗೂ ಹಾಗೂ ವೈನ್ ಶಾಪ್ ಮಾಲೀಕರಿಗೂ ತಿಂಗಳ ಸಂಬಂಧ ತುಂಬಾ ಚೆನ್ನಾಗಿದೆ ಅದರಲ್ಲೂ ವರ್ಷಕ್ಕೆ 12 ತಿಂಗಳು ಅಂದರೆ ಸುಮ್ಮನೆನ ಈ ಒಂದು ತಿಂಗಳ ಸಂಬಂಧ ಹಾಳುಮಾಡಿಕೊಳ್ಳಲು ಆಗತ್ತಾ? ಎಂದು ಪ್ರಶ್ನೆ ಕೇಳಿ ಬರುತ್ತಿದೆ.
ಹಾಗಾಗಿ ಜನಸಾಮಾನ್ಯರು, ಮಹಿಳೆಯರು ಸಂಜೆ ವೇಳೆ ಈ ರಸ್ತೆಯಲ್ಲಿ ಅನುಭವಿಸುತ್ತಿರುವ ಸಮಸ್ಯೆ ಬಗೆಹರಿಸಿಕೊಡಲು ಪೊಲೀಸರಿಗೆ ತೊಂದರೆ ಉಂಟಾಗಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ.
ಇದರೊಟ್ಟಿಗೆ ಗೋವಾ ಅಂತ ರಾಜ್ಯ ಗೋವಾದಲ್ಲೇ ಎಲ್ಲೆಂದರಲ್ಲಿ ಮದ್ಯಪಾನ ಮಾಡುವಂತಿಲ್ಲ ಹಾಗೇನಾದರೂ ಮದ್ಯಪಾನ ಮಾಡಿದರೆ ವಿಪರೀತ ದಂಡ ಕಟ್ಟಿಸುತ್ತಾರೆ.
ಆದರೆ ನಾವು ಕರ್ನಾಟಕದಲ್ಲಿದ್ದು ಕುವೆಂಪು ಅವರ ನಾಡು ಕಲೆಗಳ ಬಿಡು ನೂರಾರು ಪ್ರತಿಭೆಗಳು , ರಾಜ್ಯಕ್ಕೆ 4 ಮುಖ್ಯಮಂತ್ರಿಗಳ ಕೊಡುಗೆ ಕೊಟ್ಟ ಜಿಲ್ಲೆ, ಸಂಸ್ಕೃತಿಯ ಬಿಡು ಇಂತಹ ಒಂದು ಶಿವಮೊಗ್ಗ ಜಿಲ್ಲೆ ಇಂದು ಈ ಹಂತಕ್ಕೆ ಬಂದಿದೆ ಅನ್ನುವುದರ ಬಗ್ಗೆ ಜನಸಾಮಾನ್ಯರಲ್ಲಿ ಬೇಸರ ತರಿಸಿದೆ.
ಹಾಗೂ ನಿನ್ನೆ ದಿವಸ ನಾವು ಸಹ ಇ-ಕನ್ನಡ ಮಾಧ್ಯಮದ ವತಿಯಿಂದ ತುಂಗಾ ನಗರ ಠಾಣೆ ಇನ್ಸ್ಪೆಕ್ಟರ್ ಗುರು ರಾಜ್ ಅವರನ್ನ ಸಂಪರ್ಕಿಸಿ ಈ ರೀತಿ ರಾಜರೋಷವಾಗಿ ಮದ್ಯಪಾನ ಮಾಡುತ್ತಿದ್ದಾರೆ ಅಂತ ತಿಳಿಸಿದಕ್ಕೆ ಆಯಿತು ನೋಡುತ್ತೇನೆ ಎಂದರು.
ತದ ನಂತರ ಇಲ್ಲಿಯವರೆಗೆ ಏನು ನೋಡುತ್ತಿದ್ದರೆ ಅನ್ನುವುದು ತಿಳಿದಿಲ್ಲ, ಇನ್ಸ್ಪೆಕ್ಟರ್ ಕೂಡ ತಿಳಿಸಲಿಲ್ಲ. ಹಾಗೆ ಬಂಗಾರಪ್ಪ ರಸ್ತೆಯಲ್ಲಿ ಯಥಾ ಪ್ರಕಾರ ದಿನ ನಿತ್ಯದಂತೆ ಇನ್ನು ಇಂದು ಭಾನುವಾರ ಆಗಿರುವ ಕಾರಣ ಇನ್ನು ಬೆಳಕು ಇರುವಾಗಲೇ ಮದ್ಯಪಾನ ಪ್ರಾರಂಭವಾಗಿದೆ.
ಇದು ಮುಂದೊಂದು ದಿನ ಇನ್ನ ಯಾವದೋ ಹಂತಕ್ಕೆ ತಲುಪಿ ದೊಡ್ಡ ಅಚಾತುರ್ಯ ಸಂಭವಿಸಿ ಸ್ಥಳೀಯ ಜನಸಾಮಾನ್ಯರೆ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ತುಂಗಾ ನಗರ ಪೊಲೀಸರು ತಿಂಗಳ ಸಂಬಂಧ ಬಿಟ್ಟು ಜನಸಾಮಾನ್ಯರ ಪರ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಕರ್ತವ್ಯ ಮಾಡಬೇಕಾಗಿದೆ ಎಂಬುದು ಪ್ರಜ್ಞಾವಂತ ಜನಸಾಮಾನ್ಯರ ಆಗ್ರಹವಾಗಿದೆ.
ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರಾದ ಜಿ. ಡಿ. ಮಂಜುನಾಥ್ ಅವರು ಕೂಡ ಇಲ್ಲೇ ವಾಸ. ತುಂಗಾ ನಗರ ಇನ್ಸ್ಪೆಕ್ಟರ್ ಗುರುರಾಜ್ ಅವರಿಗೆ ತಿಳಿಸಿ ಸಮಸ್ಯೆ ಬಗೆಹರಿಸಿಕೊಡಬಹುದಾಗಿದೆ ಆದರೆ ನೆಪಗಳನ್ನ ಹೇಳಿಕೊಂಡು ಸಮಸ್ಯೆಯಿಂದ ಜಾರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇನ್ನು ವಿಶೇಷ ವಿಷಯ ತಿಳಿಸಲೇಬೇಕು ನಿಮಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಘಟಾನುಘಟಿ ನಾಯಕರುಗಳಾದ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ವೇತಾ ಬಂಡಿ, ಸೂಡಾ ಪ್ರಾಧಿಕಾರದ ಎಚ್.ಎಸ್. ಸುಂದರೇಶ್ ಹಾಗೆ ಇವರೆಲ್ಲ ಇಲ್ಲಿಯ ನಿವಾಸಿಗಳೇ ಆಗಿದ್ದಾರೆ.
ಇವರೆಲ್ಲ ಇದ್ದು ಕೂಡ ವ್ಯವಸ್ಥೆ ಸರಿಪಡಿಸಿಕೊಡದೆ ಇರುವುರಿಂದ ಸ್ಥಳೀಯರು ಹಾಗೂ ಜನಸಾಮಾನ್ಯರಲ್ಲಿ ಕೇಳಿ ಬರುತ್ತಿರುವ ವಿಚಾರವೇನೆಂದರೆ ಸ್ವತಃ ಸ್ಥಳೀಯ ಸಮಸ್ಯೆಯನ್ನೇ ಬಗೆಹರಿಸಿಕೊಡಲು ಆಗದಿದ್ದಮೇಲೆ ಇನ್ನ ಜಿಲ್ಲೆಯ ಸಮಸ್ಯೆ ಏನು ಬಗೆಹರಿಸಿಕೊಡುತ್ತಾರೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.

ಜನಸಾಮಾನ್ಯರ ಒಂದು ಸಮಸ್ಯೆ ಬಗೆಹರಿಸಿಕೊಡಲು ಆಗಲ್ಲ ಅಂದಮೇಲೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವ್ಯವಸ್ಥೆ ಹೇಗಿದೆ ಅಧಿಕಾರಿಗಳು ಕರ್ತವ್ಯ ಹೇಗಿದೆ ಎಂಬುದು ಪ್ರಸ್ತುತ ಜನತೆಯ ಮಾತಾಗಿದೆ.


