ಹೊಸಪೇಟೆ ಯುವಕರಿಗೆ ಸಿಕ್ಕ RCB ಚೆಂಡು

ಕ್ರೀಡೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ವಿರುದ್ಧದ ಪಂದ್ಯದ 19ನೇ ಓವರ್‌ನಲ್ಲಿ ಟಿಮ್‌ ಡೇವಿಡ್‌ ಪವರ್‌ಫುಲ್‌ ಬ್ಯಾಟಿಂಗ್‌ ಮಾಡಿದರು. ಜೇಮೀ ಓವರ್ಟನ್ ಓವರ್‌ನಲ್ಲಿ ಹೊಡೆದ ಬಿಗ್‌ ಸಿಕ್ಸರ್‌ ಬಾಲ್‌ ಸ್ಟೇಡಿಯಂ ಹೊರಗಿದ್ದ ಹೊಸಪೇಟೆ ಜಿಲ್ಲೆಯ ಯುವಕರಿಗೆ ಸಿಕ್ಕಿದೆ.

ಹೊಸಪೇಟೆ ಜಿಲ್ಲೆಯ ಹುಡುಗರಿಗೆ ಸಿಕ್ಕಿರುವ ಒಂದು ಚೆಂಡಿನ ಬೆಲೆ 23,499 ಅಗಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯಗಳಲ್ಲಿ ಉಪಯೋಗಿಸುವ ಈ ಚೆಂಡುಗಳು ಅತ್ಯಂತ ದುಬಾರಿಯಾಗಿವೆ. ಹೊಸಪೇಟೆ ಜಿಲ್ಲೆಯ ಯುವಕರಿಗೆ ಒಂದು ರೀತಿಯಲ್ಲಿ ಅದೃಷ್ಟವೇ ಎನ್ನಬಹುದು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಪಂದ್ಯಗಳಲ್ಲಿ ಉಪಯೋಗಿಸುವ ಬಾಲ್‌ಗಳು ಕೂಕಬುರ್ರಾ ಟರ್ಫ್ ವೈಟ್ (Kookaburra Turf White) ಬಾಲ್‌ ಆಗಿವೆ.

ಇವುಗಳ ಆರಂಭದ ಬೆಲೆಯೇ 15,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳು T20 ಪಂದ್ಯಗಳಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುತ್ತದೆ.

ಈ ಚೆಂಡುಗಳಿಗೆ ನಾಲ್ಕು ಬಾರಿ ಚರ್ಮದಿಂದ ಆವೃತ ಮಾಡಲಾಗಿದ್ದು ತುಂಬಾ ಬಲಿಷ್ಠವಾಗಿರುತ್ತವೆ. ಐಪಿಎಲ್‌ ಪಂದ್ಯಗಳಲ್ಲಿ ಬಳಕೆ ಮಾಡುವ ಚೆಂಡುಗಳು ಅತ್ಯಂತ ದುಬಾರಿ ಆಗಿದ್ದರೂ ಕಡಿಮೆ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. 450 ರಿಂದ 1,500 ರೂಪಾಯಿಗಳಿಗೆ ಲಭ್ಯ ಇರುವ ಈ ಬಾಲ್‌ಗಳನ್ನು ಕೇವಲ ಅಭ್ಯಾಸದ ಸಮಯದಲ್ಲಿ ಉಪಯೋಗಿಸಲಾಗುತ್ತದೆ.

ಅಧಿಕೃತವಾಗಿ ಪಂದ್ಯಗಳಿಗೆ ನೀಡುವ ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳ ದರ 19,974 ರೂ.ಗಳಿಂದ 23,499 ರೂಪಾಯಿಗಳು ಆಗಿರುತ್ತವೆ. ಇವುಗಳನ್ನು ನಾಲ್ಕು ಲೇಯರ್‌ ಲೆದರ್‌ನಿಂದ ವಿಶೇಷವಾಗಿ ಮಾಡಲಾಗಿರುತ್ತದೆ.

ಪ್ರತಿ ಬಾಲ್‌ಗೆ ಇಷ್ಟೊಂದು ದರ ಏಕೆಂದರೆ, ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳು ಹೆಚ್ಚು ಗೋಚರತೆಯನ್ನು ಹೊಂದಿರುತ್ತವೆ. ಇದರಿಂದ ಬಾಲ್‌ ಎಷ್ಟೇ ದೂರ ಹೋದರೂ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಸೀಮ್‌ ಸ್ಟ್ರೆಂಥ್‌ ಹಾಗೂ ಅದರ ಆಕಾರ, ದೃಢತೆಯಿಂದ ಬೆಲೆ ಅಧಿಕವಾಗಿರುತ್ತದೆ.

CSK ಜೇಮೀ ಓವರ್ಟನ್ ಎಸೆದ 19ನೇ ಓವರ್‌ನಲ್ಲಿ ಟಿಮ್ ಡೇವಿಡ್ ಅವರು 6, 6, 4, 6, 6, 6 ಬಾರಿಸುವ ಮೂಲಕ ಒಟ್ಟು 34 ರನ್‌ಗಳನ್ನು ಚಚ್ಚಿದರು.

Author