ಶಿವಮೊಗ್ಗದಲ್ಲಿ ಅಪ್ಪ ಮಂತ್ರಿ ..!!?? ಮಗ ಎಂಎಲ್ಎ…!!??

ರಾಜಕೀಯ

ಶಿವಮೊಗ್ಗ ನಗರದಲ್ಲಿ ಕೇಳಿಬರುತ್ತಿರುವ ಪ್ರಶ್ನೆ? ಶಿವಮೊಗ್ಗ ನಗರದ ಶಾಸಕರು ಯಾರು? ಯಾಕೆ ಈ ಪ್ರಶ್ನೆ ಅಂತೀರಾ, ಇದಕ್ಕೆ ಕಾರಣ ಶಿವಮೊಗ್ಗ ನಗರದಲ್ಲಿ ಯಾವ ವಾರ್ಡ್ ಎಲ್ಲಿಯೇ ಏನೇ ಇದ್ದರು ತಕ್ಷಣ ಮೂಗು ತೂರಿಸಿಕೊಂಡು ಕಾಂತೇಶ್ ಅವರು ಬರುತ್ತಿದ್ದಾರೆ, ಅವರು ಬರಬಾರದು ಎಂಬುದನ್ನ ಯಾರು ಹೇಳುತ್ತಿಲ್ಲ ಆದರೆ ತಾವುಗಳು ಜನಪ್ರತಿನಿಧಿಯಲ್ಲ ಯಾವುದೇ ಅಧಿಕಾರ ಇಲ್ಲದೆ ಇರುವವರು, ಒಬ್ಬ ಜನಸಾಮಾನ್ಯರು ರೀತಿ ಇನ್ನು ಅಂತ ಮರೆತಿರುವ ಬಗ್ಗೆ ವಿಚಾರವಾಗಿದೆ ಯಾಕಂದ್ರೆ ವಾರ್ಡ್ ಗಳಿಗೆ ಭೇಟಿ ನೀಡಿ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರಿಗೆ ಈ ಕೆಲಸ ಮಾಡಲೇಬೇಕು ಎಂಬ ತಾಕಿತು ಮಾಡಲು ಕಾಂತೇಶ್ ಏನು ಮಹಾನಗರ ಪಾಲಿಕೆ ಸದಸ್ಯರೇ?, ಶಿವಮೊಗ್ಗ ನಗರದ ಶಾಸಕರೇ ? ಅಥವಾ ಮೇಯರ್ ? ಯಾರು ಈ ಕಾಂತೇಶ್ ಇದು ಪ್ರಸ್ತುತ ನಗರದಲ್ಲಿ ಕೇಳಿಬರುತ್ತಿರುವ ಪ್ರಶ್ನೆ?

ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರೆ ನಿಮ್ಮ ಕಚೇರಿಗೆ ಬರುವವರಿಗೆ ಎಲ್ಲದಕ್ಕೂ ಕಾನೂನು ತಿಳುವಳಿಕೆ ನೀಡುತ್ತೀರಾ? ಯಾರೋ ಒಬ್ಬ ವ್ಯಕ್ತಿ ನಿಮ್ಮ ಪಾಲಿಕೆ ಅಧಿಕಾರಿಗಳನ್ನು ಕಳಿಸಿ ಅಂದ ತಕ್ಷಣ ಕಳಿಸುತ್ತಿರುವುದು ಎಷ್ಟು ಸರಿ?ಅಷ್ಟೇ ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆಯಲ್ಲಿ ತಾಕಿತು ಕೇಳಲು ಮುಂದೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಬೇರೆ ರೀತಿ ಮಾತಾಡ ಬೇಕಾಗತ್ತೆ ಅಂತ ಸಾರ್ವಜನಿಕರ ಮುಂದೆ ಅಧಿಕಾರಿಗಳ ಮಾನ ಮರ್ಯಾದೆ ಕಳೆಯಲು ಕಾಂತೇಶ್ ಯಾರು?

ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರೇ ನೀವು ಇತ್ತ ಗಮನವಹಿಸಿ :

ಅಧಿಕಾರಿಗಳಿಗೆ ಈ ರೀತಿ ರಸ್ತೆಯಲ್ಲಿ ಅವಮಾನವಾಗುತ್ತಿದ್ದರು ಶಿವಮೊಗ್ಗ ಪಾಲಿಕೆ ಆಯುಕ್ತರು ತಮಗೇನು ಸಂಬಂಧವಿಲ್ಲದ ಹಾಗೆ ಸುಮ್ಮನಿದ್ದಾರೆ. ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಾಗಿ ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ಈ ಸಂಬಂಧ ತಿಳುವಳಿಕೆ ನೀಡಬೇಕಾಗಿದೆ.

ಇನ್ನು ಮಹಾನಗರ ಪಾಲಿಕೆ ಇಂಜಿನಿಯರ್, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆ ತಿಳಿದು ಕೆಲಸ ಮಾಡುವುದಿಲ್ಲವೇ? ಅವರ ಕೆಲಸ ಅವರು ಮಾಡುತ್ತಾರೆ ಆದರೆ ಈ ರೀತಿ ಕಾಂತೇಶ್ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುವುದಕ್ಕಾಗಿ ನಡೆಸುತ್ತಿರುವ ಅವರ ವರ್ತನೆ ಅಧಿಕಾರಿಗಳ ವಲಯದಲ್ಲಿ ಬೇಸರ ತರಿಸಿದೆ. ಯಾರೋ ಅಧಿಕಾರಿಯು ಅಲ್ಲದೆ ಜನಪ್ರತಿನಿಧಿಯು ಅಲ್ಲದ ವ್ಯಕ್ತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾತು ಯಾಕೆ ಕೇಳಬೇಕು ಎಂಬ ಪ್ರಶ್ನೆ ಎದ್ದಿದೆ!

ಕಾಂಗ್ರೆಸ್ ಮುಖಂಡರ ಮೌನ…!!

ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಈ ವಿಚಾರದಲ್ಲಿ ಯಾಕೆ ಇನ್ನು ಮೌನ ವಹಿಸಿದ್ದಾರೆ ಎನ್ನುವುದು ಅವರೇ ತಿಳಿಸಬೇಕಿದೆ. ಕಾಂತೇಶ್ ಅವರು ಅವರ ವಾರ್ಡ್ ಸಮಸ್ಯೆ ಇದ್ದಲಿ ಅಧಿಕಾರಿಗಳ ಪ್ರಶ್ನೆ ಮಾಡುವುದು ತಪ್ಪೇನಿಲ್ಲ ಆದರೆ ಸಂಬಂಧ ಇಲ್ಲದೆ ಇರುವ ಕಡೆ ಮುಗುತೂರಿಸುತ್ತಿದ್ದರು ಸಹ ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಕಾಂತೇಶ್ ಅವರೊಟ್ಟಿಗೆ ರಾಜಿ ಮಾಡಿ ಕೊಂಡರೇ ಎಂಬ ಪ್ರಶ್ನೆ? ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕಾಂತೇಶ್ ಅವರು ಜನಸಾಮಾನ್ಯರು ಕಷ್ಟಕ್ಕೆ ಸ್ಪಂದನೆ ಮಾಡಬೇಕು ಅಂದರೆ ಅದಕ್ಕೆ ಹಲವಾರು ವೇದಿಕೆಯಿದೆ ಆ ರೀತಿ ಬಳಸಿಕೊಳ್ಳಲಿ ಅದನ್ನು ಹೊರತುಪಡಿಸಿ ತಾವೊಬ್ಬ ಶಿವಮೊಗ್ಗದ, MLA ರೀತಿ ವರ್ತನೆ ಮಾಡುತ್ತಿರುವುದು ಸರಿ ಅಲ್ಲಾ ಎಂಬುದು ಜನಜನಿತವಾಗಿ ಕೇಳಿಬರುತ್ತಿರುವ ವಿಷಯವಾಗಿದೆ.

ಶಾಸಕ ಚನ್ನಬಸಪ್ಪ ಎಚ್ಚೆತ್ತುಕೊಳ್ಳಲಿ..!?

ಶಾಸಕರಾದ ಚನ್ನಬಸಪ್ಪರವರೆ ಈ ರೀತಿ ಘಟನೆಗಳಿಂದ ನಿಮ್ಮ ಶಾಸಕ ಸ್ಥಾನ ಬಗ್ಗೆ ಜನಸಾಮಾನ್ಯರು ಹಾಗೂ ಅಧಿಕಾರಿಗಳ ವಲಯದಲ್ಲಿ ಬೇರೆಯದೇ ಅಭಿಪ್ರಾಯ ಕೇಳಿಬರುತ್ತಿದೆ. ಇದನ್ನು ಶಾಸಕರು ಸಹ ಗಮನಿಸಬೇಕಾಗಿದೆ.

ಇನ್ನು ಕಾಂತೇಶ್ ಅವರಂತೆ ಮಾಜಿ ಶಾಸಕರಾದ ಎಚ್. ಎಂ. ಚಂದ್ರಶೇಖರಪ್ಪ, ಕೆ. ಬಿ. ಪ್ರಸನ್ನ ಕುಮಾರ್ ಹಾಗೂ ಈ ಹಿಂದೆ ಕಾಂಗ್ರೆಸ್ ನಿಂದ ಪರಾಜಿತ ಅಭ್ಯರ್ಥಿಯಾದ ಎಚ್. ಸಿ. ಯೋಗೇಶ್ ಅವರು ಎಲ್ಲರೂ ಕಾಂತೇಶ್ ರೀತಿ ಮಾಡುತ್ತಿದ್ದಾರ? ಜನಸಾಮಾನ್ಯರ ಸಮಸ್ಯೆಗೆ ಇವರುಗಳು ಸ್ಪಂದಿಸುವ ರೀತಿಯಲ್ಲಿ ಸ್ಪಂದಿಸಿ ನೆರವು ಆಗುತ್ತಿಲ್ಲವೇ?

ಇನ್ನು ಕಾಂತೇಶ್ ಅವರಿಗೆ ಯಾವ ಜನ ಬೆಂಬಲವು ಇಲ್ಲ ಯಂಕ ಸೀನ ನಾಣಿ ಅಂತ ಯಾರೋ ಒಂದಿಬ್ಬರು ಅವರೊಟ್ಟಿಗೆ ಬರುತ್ತಾರೆ,ಆಯ ವಾರ್ಡ್ ಗಳಲ್ಲಿ ಸ್ಥಳೀಯರು ಇದ್ದೆ ಇರುತ್ತಾರೆ. ಅಲ್ಲಿಗೆ ಅಧಿಕಾರಿಗಳನ್ನೆಲ್ಲ ಕರೆಸಿ ಸಾರ್ವಜನಿಕರ ಮುಂದೆ ಅಧಿಕಾರಿಗಳನ್ನು ಜಾಡಿಸಲು ಕಾಂತೇಶ್ ಯಾರು ಅನ್ನುವುದು ಈಗಿನ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಹಾಗೂ ರಾಜಕೀಯ ವಲಯದ ಪ್ರಶ್ನೆ?

ಕೆ.ಎಸ್ .ಈಶ್ವರಪ್ಪ ಮಂತ್ರಿಯೇ…? ಅಥವಾ ಮಧು ಬಂಗಾರಪ್ಪ ಮಂತ್ರಿಯೇ..??ಇನ್ನು ಕಾಂತೇಶ್ ಅವರ ತಂದೆ ಕೆ ಎಸ್ ಈಶ್ವರಪ್ಪ ಅವರು ತಾವಿನ್ನೂ ಮಂತ್ರಿ ಎಂದೇ ಭಾವಿಸಿದ್ದಾರೆ!ಶರಾವತಿ ಪಂಪ್ಡ್ ಸ್ಟೋರೇಜ್ ಹೋರಾಟಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ನಾವು ಬರುತ್ತೇವೆ ಸಭೆ ಮಾಡಬೇಕು ಎಂದೆಲ್ಲ ತಾಕಿತ್ತು ಮಾಡುತ್ತಾರೆ. ಏನಿದು ಅಧಿಕಾರಿಗಳು ಇದಕ್ಕೆಲ್ಲ ಹೇಗೆ ಅವಕಾಶ ಕಲ್ಪಿಸುತ್ತಿದ್ದಾರೆ?

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೇ ನೀವು ಮಂತ್ರಿನಾ? ಈಶ್ವರಪ್ಪ ಮಂತ್ರಿನಾ?

ಹೀಗೊಂದು ಪ್ರಶ್ನೆ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.ಹಿಂದೆ ಅಧಿಕಾರದಲ್ಲಿದ್ದಾಗ ಒಳ್ಳೆಯ ಕೆಲಸ ಮಾಡಿದ್ದರೆ ಇಂದು ಸಹ ಅಧಿಕಾರ ನಿಮ್ಮದಾಗಿರುತ್ತಿತ್ತು ಈಶ್ವರಪ್ಪನವರೇ , ನೀವು ಇದನ್ನ ಮನದಟ್ಟು ಮಾಡಿಕೊಳ್ಳಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ನಿಮ್ಮ ಕೊಡುಗೆ ಅಪಾರ ಎಂಬುದು ನೆನಪಿಸಿಕೊಳ್ಳಿ ಈಶ್ವರಪ್ಪನವರೇ.

ಶಿವಮೊಗ್ಗದಲ್ಲಿ ಏನೇ ಆಗಲಿ ಅಪ್ಪ ಮಂತ್ರಿ ಅಂತ ಮಗ MLA ಅಂತ ಭ್ರಮೆಯಲ್ಲಿದ್ದಾರೆ. ಇದರಿಂದ ಬೇಗ ಆಚೆ ಬರಬೇಕಿದೆ..!

Author