ಮಂಗಳೂರು, ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಮೃತರು. ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದ ಸಾರ್ಥಕ್ ಅವರು ಸೋಮವಾರ ಮಧ್ಯಾಹ್ನ ತನ್ನ ಗೆಳಯ ಉಳಿದುಕೊಂಡಿದ್ದ ಅತ್ತಾವರದ ಅಪಾರ್ಟ್ಮೆಂಟ್ಗೆ ತೆರಳಿದ್ದರು.
ಅಲ್ಲಿನ ಸೆಕ್ಯುರಿಟಿ ಕೌಂಟರ್ನಲ್ಲಿ ಗೆಳಯನ ಮನೆಗೆ ಹೋಗುವ ಬಗ್ಗೆ ಮಾಹಿತಿ ನಮೂದಿಸಿ, ಆತ ಉಳಿದುಕೊಂಡಿದ್ದ 12ನೇ ಮಹಡಿ ಕಡೆಗೆ ತೆರಳಿದ್ದಾರೆ.
ಆದರೆ ಮನೆಗೆ ಹೋಗುವ ಬದಲು ವಿರುದ್ಧ ದಿಕ್ಕಿಗೆ ತೆರಳಿ ಕೆಳಗೆ ಹಾರಿದ್ದಾರೆ. ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.



