ಶಿವಮೊಗ್ಗ, ನಗರದ ಹೊರವಲಯದ ಗಾಡಿಕೊಪ್ಪ ಸಮೀಪದ ಮಲಿಗೇನಹಳ್ಳಿಯಲ್ಲಿರುವ ಹಸುಗಳ ಫಾರ್ಮ್‌ಗೆ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಹೈಬ್ರಿಡ್ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಲಿಗೇನಹಳ್ಳಿಯ ವ್ಯಕ್ತಿಯೊಬ್ಬರು ಹಸು ಮತ್ತು ಎಮ್ಮೆಗಳ ಫಾರ್ಮ್ ನಡೆಸುತ್ತಿದ್ದು, ಹಸುಗಳನ್ನು ಕಟ್ಟಲು ಪ್ರತ್ಯೇಕ ಶೆಡ್ ಹಾಗೂ ಮೇಯಲು ತೋಟದ ವ್ಯವಸ್ಥೆ ಮಾಡಿದ್ದರು.
ಮಾರ್ಚ್ 19ರ ಮಧ್ಯರಾತ್ರಿ 12:15ರ ಸುಮಾರಿಗೆ ಮಾಲೀಕರು ಫಾರ್ಮ್‌ನಲ್ಲಿದ್ದಾಗ ಎಲ್ಲಾ ಜಾನುವಾರುಗಳು ಶೆಡ್‌ನಲ್ಲಿಯೇ ಇದ್ದವು. ಆದರೆ, ರಾತ್ರಿ ಎಲ್ಲರೂ ನಿದ್ರೆಗೆ ಜಾರಿದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.



