ಭದ್ರಾವತಿಯಲ್ಲಿ ಮಧ್ಯರಾತ್ರಿ ವೇಳೆ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಕಾಮಗಾರಿ ನಡೆಯುತ್ತಿರುವ ಸೇತುವೆ ಸಮೀಪ ಚಾನೆಲ್ ನೀರಿಗೆ ಬಿದ್ದ ಘಟನೆ ಭದ್ರಾವತಿಯ ಹುತ್ತ ಕಾಲೋನಿ ಫಿಶ್ ಮಾರುಕಟ್ಟೆ ಹತ್ತಿರ ನಡೆದಿದೆ.
ದಿನಾಂಕ 09-03-2026ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ವ್ಯಕ್ತಿಯೊಬ್ಬ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದು ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿ ನಿಯಂತ್ರಣ ತಪ್ಪಿ ಚಾನೆಲ್ ನೀರಿಗೆ ಬಿದ್ದಿರಬಹುದು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು.
ಮಾಹಿತಿ ದೊರಕುತ್ತಿದ್ದಂತೆಯೇ ಇ.ಆರ್.ವಿ ತಂಡದ ಅಧಿಕಾರಿಗಳಾದ ನ್ಯೂ ಟೌನ್ ಪೊಲೀಸ್ ಠಾಣೆಯ ಮಲ್ಲಿಕಾರ್ಜುನ್ ಹೆಚ್‌ಸಿ ಹಾಗೂ ಚಾಲಕರಾದ ಪ್ರವೀಣ್ ಎಪಿಸಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು.
ಸಾರ್ವಜನಿಕರ ಸಹಕಾರದೊಂದಿಗೆ ಚಾನೆಲ್‌ಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ತುರ್ತಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದರು.
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐಪಿಎಸ್ ಅವರು ERSS-112 ಅಧಿಕಾರಿಗಳು ತೋರಿದ ಸಮಯೋಚಿತ ಕಾರ್ಯ ಮತ್ತು ಮಾನವೀಯ ಸೇವೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ



