ತೀರ್ಥಹಳ್ಳಿ | ಮೇಗರವಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಯಶಸ್ವಿ

ಶಿವಮೊಗ್ಗ

ತೀರ್ಥಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ ಇದರ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ–1 ಮತ್ತು ಘಟಕ–2 ವತಿಯಿಂದ ಮೇಗರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರ್ಚ್ 01ರಿಂದ ಮಾರ್ಚ್ 07ರವರೆಗೆ ವಾರಪೂರ್ತಿ ವಿಶೇಷ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವ ಬೆಳೆಸುವುದು ಹಾಗೂ ಗ್ರಾಮಾಭಿವೃದ್ಧಿಗೆ ಕೈಜೋಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.ಶಿಬಿರದ ಉದ್ಘಾಟನಾ ಸಮಾರಂಭವನ್ನು ಮಾಜಿ ಗೃಹ ಸಚಿವರು ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು ನೆರವೇರಿಸಿದರು.

ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಡಾ. ಸೌಮ್ಯ ಕೆ.ಸಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಶಿವಯೋಗಿ ಕೊರಿಶೆಟ್ಟರ್ (ಘಟಕ–1) ಹಾಗೂ ಶ್ರೀಮತಿ ಸಿಂಧು ಎನ್. (ಘಟಕ–2) ಅವರ ಮಾರ್ಗದರ್ಶನದಲ್ಲಿ ಶಿಬಿರವನ್ನು ನಡೆಸಲಾಯಿತು.

ಶಿಬಿರದ ಅವಧಿಯಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಗ್ರಾಮ ಸ್ವಚ್ಛತಾ ಕಾರ್ಯ, ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣ ಸ್ವಚ್ಛತೆ, ಗ್ರಾಮ ಪಂಚಾಯತಿ ಆವರಣ ಸ್ವಚ್ಛತೆ, ಗ್ರಾಮ ಪಂಚಾಯಿತಿ ಗ್ರಂಥಾಲಯ ಗೋಡೆಗೆ ಬಣ್ಣ ಹಚ್ಚುವುದು,ಗ್ರಾಮ ಪಂಚಾಯಿತಿ ಆವರಣ ಸ್ವಚ್ಛತೆ, ಶಾಲಾ ಆವರಣ ಸ್ವಚ್ಛತೆ, ದೇವಾಲಯದ ಆವರಣ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು.

ಜೊತೆಗೆ ಗ್ರಾಮ ಸಮೀಕ್ಷೆ, ಆರೋಗ್ಯ ಅರಿವು, ಸ್ವ ಉದ್ಯೋಗ ಪ್ರಾತ್ಯಕ್ಷಿಕೆ ಹಾಗೂ ಕೃಷಿ ಸಂಬಂಧಿತ ಉಪನ್ಯಾಸಗಳನ್ನು ಆಯೋಜಿಸಲಾಯಿತು.ಸಹ ಶಿಬಿರಾಧಿಕಾರಿಗಳಾಗಿ ಮಾರುತಿ, ಡಾ.ವಿಮಲಾ, .ನಿರಂಜನ್, ಮತ್ತು . ಅರುಣ್ ಕುಮಾರ್ ಅವರು ಶಿಬಿರದ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.

ಶಿಬಿರಕ್ಕೆ ಮೇಗರವಳ್ಳಿ ಗ್ರಾಮದ ಗ್ರಾಮಸ್ಥರು ಸಹಕಾರ ನೀಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು,ಮಾಜಿ ಸದಸ್ಯರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶೀಕಾಂತ್ ಪಣತ, ಹಾಗೂ ಎಲ್ಲಾ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಮಾ ಎಚ್ ಎ, ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜೇತ್ ಎಂ ಕೆ, ಎಲ್ಲಾ ಹಿರಿಯ ವಿದ್ಯಾರ್ಥಿಗಳು, ಸೇರಿದಂತೆ ಹಲವರು ಸ್ವಯಂಸೇವಕ ರ ಸೇವಾ ಕಾರ್ಯಗಳಿಗೆ ಬೆಂಬಲ ನೀಡಿದರು.

ಸಂಜೆ ವೇಳೆಯಲ್ಲಿ ಯುವ ಸಂಸತ್, ವಿಶೇಷ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಶಿಬಿರಕ್ಕೆ ಕುವೆಂಪು ವಿಶ್ವವಿದ್ಯಾಲಯದ ರಾ.ಸೆ.ಯೋ ಸಂಯೋಜಕರಾದ ಡಾ.ಶುಭಾ ಮರವಂತೆ ಅವರು ಭೇಟಿ ನೀಡಿ ಶಿಬಿರದ ಪ್ರಾಮುಖ್ಯತೆಯನ್ನು ವಿವರಿಸಿದರುಶಿಬಿರದ ಸಮಾರೋಪ ಸಮಾರಂಭವು ತಾಲುಕು ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀ ಬಾಳೇಹಳ್ಳಿ ಪ್ರಭಾಕರ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅವರು ಸ್ವಯಂಸೇವಕರ ಸೇವಾ ಮನೋಭಾವವನ್ನು ಶ್ಲಾಘಿಸಿದರು.“ಸೇವೆಯ ಮೂಲಕ ಜ್ಞಾನ” ಎಂಬ ಧ್ಯೇಯದೊಂದಿಗೆ ನಡೆದ ಈ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುವಲ್ಲಿ ಯಶಸ್ವಿಯಾಯಿತು..

ಇದೇ ಸಂದರ್ಭದಲ್ಲಿ ಮೇಗರವಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಸರ್ವರ ಪರವಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೌಮ್ಯ ಕೆ ಸಿ, ಎನ್ ಎಸ್ ಎಸ್ ಕಾರ್ಯಾಕ್ರಮಾಧಿಕಾರಿಗಳಾದ ಶ್ರೀ ಶಿವಯೋಗಿ ಕೊರಿಶೆಟ್ಟರ್ ಹಾಗೂ ಶ್ರೀಮತಿ ಸಿಂಧು ಎನ್ ಅವರನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕರು, ಪೋಷಕರು ಮಕ್ಕಳು ಊರಿನವರು, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಸದಸ್ಯರು ಹಾಗೂ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು ಸದಸ್ಯರು ಸೇರಿ ಗೌರವ ಸಮರ್ಪಣೆ ಮಾಡಿದರು.. ..

ಊರಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ, ಮಕ್ಕಳಿಗೆ ಹೊಸ ಕಲಿಕಾ ಚೈತನ್ಯ, ಸಾಮಾಜಿಕ ಸೇವಾ ಬದ್ದತೆ ಜೊತೆಗೆ ಸೇವಾ ಕೈಂಕರ್ಯ, ಹಾಗೂ ಮಕ್ಕಳಲ್ಲಿ ನಾಯಕತ್ವ ಹೊಂದಾಣಿಕೆ ಮನೋಭಾವನೆ ಬೆಳೆಸಲು ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ ಮೇಗರವಳ್ಳಿಯಲ್ಲಿ ನಡೆದ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಶಿಬಿರ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಗಿದ್ದು, ಅಲ್ಲಿನ ಸರ್ಕಾರಿ ಶಾಲೆಯವರು ಎಸ್ ಡಿ ಎಂ ಸಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಹಾಗೂ ಪೋಷಕರ ಮಕ್ಕಳ ಊರಿನವರ, ಸಂಘ ಸಂಸ್ಥೆಗಳ ಸಹಕಾರ ಅತ್ಯಂತ ಅವಿಸ್ಮರಣೀಯವಾದುದು…

Author