ಶಿವಮೊಗ್ಗ | ನನ್ನದು ತಾಯಿ ಹೃದಯ, ಸಿದ್ದರಾಮಯ್ಯ ಎಂದಿಗೂ ದೇವರಾಜ್ ಅರಸು ಆಗಲು ಸಾಧ್ಯವಿಲ್ಲ : ಎಚ್ ಡಿ ಕುಮಾರಸ್ವಾಮಿ

ಶಿವಮೊಗ್ಗ

ಶಿವಮೊಗ್ಗ, ಇಂದು ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು, ಎರಡು ವರೆ ವರ್ಷದಲ್ಲಿ ಅಭಿವೃದ್ಧಿ ಬಗ್ಗೆ ಮಾಧ್ಯಮಗಳಾದ ನಿಮಗೆ ಹೆಚ್ಚಾಗಿ ಗೊತ್ತಿದೆ.ಸರ್ಕಾರ ಇಲಾಖವಾರು ಅನುದಾನದಲ್ಲಿ ದಯನಿಯ ಸ್ಥಿತಿಯಲ್ಲಿದೆ.

ಇಲಾಖೆವಾರು ಗುರಿ ಮುಟ್ಟುವಂತೆ ಕೆಲಸ ಮಾಡಿಲ್ಲ ಜನಸಾಮಾನ್ಯರಿಂದ ದೊಡ್ಡ ಮಟ್ಟದ ತೆರಿಗೆ ಕಟ್ಟಿಸಿಕೊಂಡರು ಸಹ ಜನರಿಗೆ ತಲುಪುವಂತೆ ಕೆಲಸ ಆಗಿಲ್ಲ.

ಶಾಲಾ ಕಾಲೇಜುಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳು ಎಷ್ಟೇ ಸರ್ಕಾರದ ಗಮನಕ್ಕೆ ತಂದರು ಸರ್ಕಾರ ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ, ಇಲ್ಲಿಯವರೆಗೆ ಇನ್ನು 6,500 ಶಿಕ್ಷಕರ ನೇಮಕಾತಿ ಆಗಿಲ್ಲ, ಇನ್ನು ಹಲವಾರು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ ಇದ್ದಾರೆ.1,000 ಪಬ್ಲಿಕ್ ಶಾಲೆ ತೆರೆಯುತ್ತೇವೆ ಅನ್ನುತ್ತಿದ್ದಾರೆ ಆದರೆ ಹಣ ಎಲ್ಲಿಂದ ಒದಗಿಸುತ್ತಾರೆ ಎಂಬುದು ಪ್ರಶ್ನೆ. ಸಿ ಎಸ್ ಆರ್ ಫಂಡ್ ಯಿಂದ ರಾಜ್ಯದ ಕೈಗಾರಿಕಾ ಉದ್ಯಮಿಗಳಿಂದ ಏನೋ ಮಾಡುತ್ತಾರಂತೆ ಆದರೆ ಗುಣಮಟ್ಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಇನ್ನು ಇನ್ನು ಎಲ್ಲಾ ಕಡೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂಬ ಸರ್ಕಾರ ಜಾಹಿರಾತು ಜೊತೆಗೆ ಗ್ಯಾರಂಟಿ ಯೋಜನೆಗಳ ಪ್ರಿಂಟ್ ಹಾಕಿಸುತ್ತಾರೆ.ಇದರ ಬಗ್ಗೆ ನನಗೆ ಅಸೂಯೆ ಇಲ್ಲ.ಸರ್ಕಾರದ ಈ ಯೋಜನೆ ಯಶಸ್ವಿ ಆದರೆ ನಾನೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸರ್ಕಾರದ ಖಜಾನೆಗೆ ಯಾವತ್ತು ಖಜಾನೆ ಖಾಲಿ ಆಗಲು ನಮ್ಮ ಜನರು ಬಿಟ್ಟಿಲ್ಲ, ಆದರೆ ರಾಜ್ಯ ಸರ್ಕಾರ ಸರಿಸಾಮಾನವಾಗಿ ಯೋಜನೆ ಬಳಕೆ ಮಾಡಿಕೊಂಡಿದ್ದಾರ ಅನ್ನುವುದು ಪ್ರಶ್ನೆ?

ಈ ಸರ್ಕಾರ ಯಾವಾಗ ಹೋಗತ್ತೋ ಏನೋ ಎಂದು ಅಧಿಕಾರಿಗಳು ಸಹ ತಲೆ ಕೆಡಿಸಿಕೊಳ್ಳದೆ ತಮಗೆ ಏನು ಖಜಾನೆ ಸೋರಿಕೆ ಮೂಲಕ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ನೋಡುತ್ತಿದ್ದಾರೆ.

ಹಾಗೆಯೇ ಸಿ ಎಂ ಕುರ್ಚಿ ಬಗ್ಗೆ ಪ್ರಾಮುಖ್ಯತೆ ಕಾಂಗ್ರೆಸ್ ನವರಾದ ನೀವೇ ಕೊಟ್ಟಿರುವುದು ಅಲ್ಲವೇ?ಜನಸಾಮಾನ್ಯರಿಗೆ ಏನಾದರು ಗೊತ್ತಿತ್ತಾ ಎಂದು ಪ್ರಶ್ನಿಸಿದರು.ಹಾಗೆಯೇ ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಎಂದು ಕೇಂದ್ರ ಹಣ ಕೊಡುತ್ತಿಲ್ಲ ಅಂತ ದೂರಲಿಲ್ಲ.

ಕೊಡಗಿನಲ್ಲಿ ಮಳೆ ಅನಾಹುತ ಸಂದರ್ಭದಲ್ಲಿ 1,000 ಮನೆ 10 ಲಕ್ಷ ರೂಪಾಯಿ ಮೊತ್ತದಲ್ಲಿ ಕಟ್ಟಿಸಿಕೊಟ್ಟಿದ್ದೇನೆ ಹೀಗೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ ಎಂದು ವಿವರಿಸಿದರು.

ಇನ್ನು ತುಂಗಾ ಭದ್ರಾ ಜಲಾಶಯ ಗೇಟ್ ಸರಿಪಡಿಸಿಲ್ಲ.ಇನ್ನು ಕಲ್ಬುರ್ಗಿ ರಾಯಚೂರು ನಲ್ಲಿ ಮಳೆಯಿಂದ ಎಷ್ಟೆಲ್ಲ ಹಾನಿ ಆಗೋಗಿದೆ ಇನ್ನು ಪರಿಹಾರ ಒದಗಿಸಿಲ್ಲ.ಕೇಂದ್ರ ಸರ್ಕಾರ ಈ ಸಮಯದಲ್ಲಿ ಬಂದು ಏನು ನೋಡಿ ಏನು ಪರಿಹಾರ ನಿರ್ಧಾರ ಮಾಡಬೇಕು ಎಂದರು.ಸಿದ್ದರಾಮಯ್ಯ ಸರ್ಕಾರ ಬಂದಾಗೆಲ್ಲ ಪೊಲೀಸ್ ಇಲಾಖೆ ಅಲರ್ಟ್ ಆಗುತ್ತಾರೆ ಹಾಗೆಯೇ ಈ ಹಿಂದೆ ಪೊಲೀಸರು 3 ಕೋಟಿ ರೂಪಾಯಿ ದರೋಡೆ ಮಾಡಿದ್ದರು.ಈಗ ನೋಡಿದರೆ ದಾವಣಗೆರೆಯಲ್ಲಿ ಪೊಲೀಸರಿಂದ ದರೋಡೆ ಆಯಿತು, ಬೆಂಗಳೂರನಲ್ಲಿ 7 ಕೋಟಿ ದರೋಡೆ ಆಯಿತು. ಈ ಸಂದರ್ಭದಲ್ಲಿ ಗೃಹ ಸಚಿವರು ಪೊಲೀಸರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಆರೋಪಿಗಳನ್ನ ಬಂಧಿಸಿದರು ಎಂದು ಶಭಾಷ್ ಗಿರಿ ಹೇಳಿದರು ಆದರೆ ವಾಸ್ತವವಾಗಿ ಕಾರ್ ಮಾರಿದ ಮಾಲಿಕೆ, GPRS ಅಳವಡಿಸಿದ ಕಾರಣ ಹಣ ಸಿಕ್ಕಿದೆ ಅಷ್ಟೇ ಎಂದು ಮಾರ್ಮಿಕವಾಗಿ ನುಡಿದರು.

ಇನ್ನ ಪರಪ್ಪನ ಅಗ್ರಹಾರ ಕಥೆ ಏನಾಗಿದೆ ಭಯೋತ್ಪಾದಕನ ಬಳಿ ಮೊಬೈಲ್ ಇದೆ, ಇನ್ನೇನೋ ಡಿಸ್ಟಿಲರಿ ತಯಾರು ಮಾಡುತ್ತಿರುವ ಮಾಹಿತಿಯಾಗಿದೆ. ಕಾನೂನು ಸುವ್ಯವಸ್ಥೆ ಇಲಾಖೆ ಹದೆಗೆಟ್ಟು ಹೋಗಿದೆ ಎಂದು ದೂರಿದರು.

ಇದೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಎಂದರು. ಯಾವ ಮಟ್ಟದ ಆಡಳಿತ ರಾಜ್ಯದಲ್ಲಿ ನೀಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ದುರಾಡಳಿತ ಇಟ್ಟುಕೊಂಡು 2028ಕ್ಕೆ ಮತ್ತೆ ಜನ ಇವರನ್ನೇ ಗೆಲ್ಲಿಸಲು ಕಾಯುತ್ತಿದ್ದಾರೆ ಎಂದು ಎಲ್ಲಾ ಕಡೆ ಹೇಳುತ್ತಾರೆ.

ಇದೆ ಬಿಹಾರದಲ್ಲಿ ತೇಜಸ್ವಿ ಯಾದವ್ ಹೋದಲ್ಲಿ ಬಂದಲ್ಲಿ ಚುನಾವಣೆ ಪ್ರಚಾರ ಸಮಯದಲ್ಲಿ 18 ನೆ ತಾರೀಕು ನಾನೆ ಪ್ರಮಾಣವಚನ ಸ್ವೀಕರಿಸುತ್ತೇನೆ ಅಂತ ಭಾಷಣ ಮಾಡುತ್ತಿದ್ದರು. ಆಮೇಲೆ ಏನಾಯಿತು ಅಂತ ಗೊತ್ತಿದೆ.

ಹಾಗಾಗಿ ಈ ಕುರಿತು ನೆನಿಸಿಕೊಂಡು ಮಾತನಾಡಿ 2028 ಕ್ಕೆ ಏನಾಗಲಿದೆ ಅಂತ ಯಾರಿಗೆ ಗೊತ್ತು ಎಂದರು.ಹಾಗಾಗಿ ಜನತೆ ಜೊತೆ ಚೆಲ್ಲಾಟ ಆಡಬೇಡಿ ಎಂದು ಬುದ್ದಿ ಮಾತು ಹೇಳಿದರು.

ಮುಂದುವರೆದು ಮಾತನಾಡಿದ ಎಚ್ಡಿಕೆ ನಾನು ವಿಶ್ವ ಮಾನವ ಅಂತ ಹೇಳಿಲ್ಲ, ನಾನು ಸರ್ವಜ್ಞ ವಚನ ವೇದಿಕೆಯ ಮೇಲೆ ಹೇಳಿಲ್ಲ ನನ್ನದು ತಾಯಿ ಹೃದಯ ಯಾರೇ ನೋವಲ್ಲಿದ್ದರು, ಅಧಿಕಾರದಲ್ಲಿ ಇರಲಿ ಇಲ್ಲದೆ ಇರಲಿ ನನ್ನ ಹೃದಯ ಮಿಡಿಯುತ್ತೆ ಸಹಾಯ ಮಾಡುತ್ತೇನೆ ಎಂದರು.

ಭದ್ರಾವತಿ VISL ಗೆ ಜೀವ ಕೊಟ್ಟೆ ಕೊಡುತ್ತೇನೆ. ಭಗವಂತನ ಆಶೀರ್ವಾದದಿಂದ ಒಳಿತಾಗಲಿ ಎಂದರು.

ದೇವೇಗೌಡರು ಸ್ವಾಮೀಜಿ ಅವರ ಬೆಂಬಲ ತೆಗೆದುಕೊಂಡು ಮುಖ್ಯಮಂತ್ರಿ ಆಗಲಿಲ್ಲ, ಜಾತಿ ಗಣತಿ ಕುರಿತಾದ ಸಭೆಯಲ್ಲಿ ಇದ್ದಿದ್ದು ಅಷ್ಟೇ ಎಲ್ಲೂ ಸಭೆ ಮಾಡಿಲ್ಲ ಎಂದರು. ದೇವೇಗೌಡರು ಸ್ವಂತ ಶ್ರಮದಿಂದ ಮುಖ್ಯಮಂತ್ರಿ ಆಗಿದ್ದು ಎಂದರು.

ಸ್ವಾಮೀಜಿಗಳು, ಮಠಾಧಿಶರುಗಳು ಧರ್ಮ ರಕ್ಷಣೆ ಕಾರ್ಯ ಮಾಡಲಿ. ರಾಜಕೀಯ ವಿಚಾರಕ್ಕೆ ಬರುವುದು ಒಳಿತಲ್ಲ ಎಂದರು.

ಕೊನೆಯದಾಗಿ ಸಿದ್ದರಾಮಯ್ಯನವರು ರಾಜಕೀಯವಾಗಿ ಎಂದು ದೇವರಾಜ್ ಅರಸು ಆಗಲು ಸಾಧ್ಯವಿಲ್ಲ ಅವರದ್ದು ತುಂಬಾ ಸಂಕುಚಿತ ಮನಸ್ಸು ಎಂದು ತಿಳಿಸಿದರು.

Author