ಶಿವಮೊಗ್ಗ, ಬಿಂದು ಸಿರ ವಿರುದ್ಧ ರಾಷ್ಟ್ರಪ್ರೇಮಿ ವಕೀಲರ ಬಳಗ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು
24.02.2026ರಂದು ಸಾಮಾಜಿಕ ಜಾಲತಾಣವಾದ ಫೇಸ್ಟುಕ್ ನಲ್ಲಿ ಬಿಂದು ಸಿರ ಎಂಬುವರು ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅಶ್ಲೀಲ ಹಾಗೂ ವಿಕೃತವಾಗಿ ಕಾಣುವಂತೆ ಚಿತ್ರಿಸಿ ಅವರ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿರುತ್ತಾರೆ ಎಂದು ರಾಷ್ಟ್ರಪ್ರೇಮಿ ವಕೀಲರ ಬಳಗ ತಿಳಿಸಿದೆ .

ಈ ಮೂಲಕ ಕ್ಷುಲ್ಲಕ ಕಾರಣಕ್ಕೆ ಈ ದೇಶದ ಪ್ರಧಾನ ಮಂತ್ರಿಗಳನ್ನು ಅತ್ಯಂತ ಅವಹೇಳನಕಾರಿಯಾಗಿ ಬಿಂಬಿಸಿರುತ್ತಾರೆ. ಅಲ್ಲದೇ ಆಸ್ಟಿನ್ ಫೈಲ್ಸ್ ಎಂಬ ಸುಳ್ಳು ಸುದ್ದಿಯನ್ನು ಬಳಸಿ ಸಾರ್ವಜನಿಕರಲ್ಲಿ ಗೊಂದಲ ಮತ್ತು ದ್ವೇಷದ ಭಾವನೆಯನ್ನು ಬಿತ್ತಿರುತ್ತಾರೆ.
ಈ ನೆಲದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದನ್ನು ಪ್ರಶ್ನಿಸುವ ವಿಶ್ಲೇಸಿಸುವ ಮತ್ತು ವಿಮರ್ಶಾತ್ಮಕವಾಗಿ ಟೀಕೆಗೆ ಒಳಪಡಿಸುವ ಹಕ್ಕನ್ನು ಭಾರತ ಸಂವಿಧಾನವು ನೀಡಿದೆ ಆದರೆ ಅಂತಹ ಟೀಕೆ ಟಿಪ್ಪಣಿಗಳು ಮತ್ತೊಬ್ಬರ ಮಾನ ಮರ್ಯಾದೆ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡಬಾರದು.

ಟೀಕೆ ಮಾಡುವ ಭರದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಈ ರೀತಿ ಅಶ್ಲೀಲ ಮತ್ತು ಅವೇಳನಕಾರಿಯಾಗಿ ಚಿತ್ರಿಸುವುದು ಈ ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯನಿಗೂ ನೋವು ಮಾಡಿದೆ ಉನ್ನತ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯವರಿಗೆ ಮಾಡಿದ ಅವಮಾನ ಈ ದೇಶದ ಜನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಜನರ ಭಾವನೆಗಳ ಮೇಲೆ ರಾಶಿ ನೋವು ಉಂಟು ಮಾಡಿರುತ್ತದೆ,
ಅಲ್ಲದೆ ಈ ವಿಚಾರವು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಸೃಷ್ಟಿಮಾಡಲೇಂದು, ದ್ವೇಶಭಾವನೆ ಬಿತ್ತಲೇಂದು, ಹಾಗೂ ದೇಶದ ಪ್ರಧಾನಿಗಳಿಗೆ ಅವಮಾನ ಮಾಡಲೇಂದೇ ಈ ಕೃತ್ಯಮಾಡಿರುತ್ತಾರೆ, ಆದ್ದರಿಂದ ಬಿಂದು ಸಿರ ಅವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇದರೋಂದಿಗೆ ಅವಹೇಳನ ಮಾಡಿರುವ ಪೋಸ್ಟ್ ಲಿಂಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿರುವ ಛಾಯಾಚಿತ್ರ ಅನ್ನು ಲಗತ್ತಿಸಲಾಗಿದೆ ಎಂದು ತಿಳಿಸಿದ್ದಾರೆ .
https;//www̤facebook̤com/share/p/18TH6UKEoy/



